;

ಮೊಳಕಾಲ್ಮೂರು: ತಾಲ್ಲೂಕು ನೇರ್ಲಹಳ್ಳಿ ಗ್ರಾಮದಲ್ಲಿ ಪಾಳು ಬಿದ್ದ ಸಮುದಾಯ ಭವನ..!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ನೇರ್ಲಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಸಮುದಾಯ ಭವನ ನಿರ್ಮಾಣ 10 ವರ್ಷವಾಗಿದೆ ಆದರೆ ಇದರ ಬಳಕೆ ಮಾತ್ರ ಒಂದು ವರ್ಷವೂ ಮಾಡಿಲ್ಲ ಇದಕ್ಕೆ ಯಾವುದೇ ಕಿಟಕಿ-ಬಾಗಿಲು ಯಾವುದು ಇಲ್ಲ ಸ್ವಚ್ಛತೆ ಯಂತು ಮರೆಯಾಗಿದೆ. ಸಮುದಾಯ ಭವನವೀಗ ಗಿಡಗೆಂಟಿಗಳಿಂದ ಆವೃತವಾ­ಗಿದೆ. ಕಿಟಕಿಗಳಿಗೆ ಹಾಕಲಾಗಿದ್ದ ಗಾಜುಗಳು ಸಂಪೂರ್ಣ ಜಖಂ ಆಗಿವೆ. ಒಳಾವರಣ ದೂಳಿನಿಂದ ತುಂಬಿದೆ. ಗಿಡಬಳ್ಳಿಗಳು ಕಟ್ಟಡದೊಳಗೆ ನುಸುಳಿವೆ. ನಿರ್ಮಾಣ ಆದಾಗಿನಿಂದಲೂ ಹೇಳಿಕೊಳ್ಳುವಂತಹ ಚಟುವಟಿಕೆಗಳು ಇಲ್ಲಿ ನಡೆದಿಲ್ಲ. ‘ಹೊಳೆಯಲ್ಲಿ ಹುಣಸೆ ಹಣ್ಣು ತೊಳದಂತೆ’ ಹಣ ಪೋಲಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಸಮುದಾಯ ಭವನವನ್ನು ಸ್ವಚ್ಛತೆ ಗೊಳಿಸಿ ಮರು ಬಳಕೆಗೆ ಅವಕಾಶ ಮಾಡಿಕೊಡಬೇಕು ಇದು ಸಾರ್ವಜನಿಕರ ಅಭಿಪ್ರಾಯವಾಗಿದೆ…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;