;

ಮೊಳಕಾಲ್ಮೂರು: ಬಿ.ಆರ್.ಸಿ ಕಚೇರಿಯಲ್ಲಿ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಸಲಕರಣೆ ಮೌಲ್ಯಮಾಪನ ಶಿಬಿರ.!

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಇಂದು ಅಗಸ್ಟ್-14, ಬಿ.ಆರ್.ಸಿ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಸಲಕರಣೆಗಳನ್ನು ಉಚಿತವಾಗಿ ಒದಗಿಸಲು ವೈದ್ಯಕೀಯ ಮೌಲ್ಯಮಾಪನ ಶಿಬಿರ ಶ್ರವಣದೋಷ, ದೃಷ್ಟಿದೋಷ, ಬುದ್ದಿಮಾಂದ್ಯ ಹಾಗೂ ಬಹುವಿಕಲತೆ ಇರುವ ಮಕ್ಕಳು, ಹಿರಿಯ ನಾಗರಿಕರಿಗೆ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿತು. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ವೈಶಾಲಿ ತಿಳಿಸಿದರು. ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಚೇರಿಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ತಾಲ್ಲೂಕಿನ ವಿವಿಧ ಶಾಲೆಗಳಿಂದ ಶ್ರವಣದೋಷ, ದೃಷ್ಟಿದೋಷ, ಬುದ್ಧಿ ಮಾಂದ್ಯ ಹಾಗೂ ಬಹು ವಿಕಲತೆ ಹೊಂದಿರುವ ಮಕ್ಕಳು, ವಿಕಲಚೇತನ ಹಾಗೂ ಹಿರಿಯ ನಾಗರಿಕರಿಗೆ ನುರಿತ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ನಡೆಸಲಾಯಿತು. ಶಿಬಿರದಿಂದ ನಮ್ಮ ಶಿಕ್ಷಣ ಇಲಾಖೆಯ ಗೃಹಾಧಾರಿತ ಮತ್ತು ಲೋಕೋ ಮೋಟಾರಿ ಮಕ್ಕಳಿಗೆ ಬಹಳ ಉಪಯುಕ್ತತೆ ಯಾಗಿದ್ದು ಶಾಲಾಧಾರಿತ ಶಿಕ್ಷಣ ಮಕ್ಕಳ ಈ ಮಕ್ಕಳಿಗೆ ವೀಲ್ ಛೇರ್, ಟೈ, ಸೈಕಲ್ ಕೃತಕ ಕೈ ಮತ್ತು ಕಾಲು ಮತ್ತು ಎಂ.ಆರ್. ಕಿಟ್ ಮುಂತಾದ ಸಾಧನಾ ಸಲಕರಣೆ 2 ತಿಂಗಳ ಒಳಗೆ ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ವೈಶಾಲಿ, ಪಟ್ಟಣ ಪಂಚಾಯಿತಿ ಅಧ್ಯಕ್ಷರು ಪಿ.ಲಕ್ಷ್ಮಣ, ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ ನಾಯಕ, ಸ.ನೌ.ಸಂಘದ ಅಧ್ಯಕ್ಷ ಈರಣ್ಣ, ಶಿಕ್ಷಕರ ಸಂಘದ ಗೌರವಾಧ್ಯಕ್ಷ ಕೆ.ಹೆಚ್. ಸಣ್ಣಯಲ್ಲಪ್ಪ, ಬಿ.ಆರ್‌ಪಿ, ಸಿ.ಆರ್.ಪಿ., ಬಿ.ಐ.ಆರ್.ಟಿ. ಗಳು, ಮುಖ್ಯ ಶಿಕ್ಷಕರು, ಸಹಶಿಕ್ಷಕರು ಉಪಸ್ಥಿತರಿದ್ದರು..

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;