;

ಕಳೆದ 15 ದಿನಗಳಿಂದ ಗಣನೀಯ ಪ್ರಮಾಣದ ಮಕ್ಕಳಿಗೆ ನೆಗಡಿ, ಕೆಮ್ಮು, ಜ್ವರ,ನಿಮೋನಿಯಾ ಪ್ರಮಾಣ ಹೆಚ್ಚಾಗಿ ಕಾಣಿಸುತ್ತಿದೆ. ಇದು ಆತಂಕಕಾರಿ” ವೈಧ್ಯಾಧಿಕಾರಿ ಸರ್ಜನ್. ಡಾಕ್ಟರ್ ಶಿವಕುಮಾರ್ ಕಳವಳ…!!!

“ಕಳೆದ 15 ದಿನಗಳಿಂದ ಗಣನೀಯ ಪ್ರಮಾಣದ ಮಕ್ಕಳಿಗೆ ನೆಗಡಿ, ಕೆಮ್ಮು, ಜ್ವರ,ನಿಮೋನಿಯಾ ಪ್ರಮಾಣ ಹೆಚ್ಚಾಗಿ ಕಾಣಿಸುತ್ತಿದೆ. ಇದು ಆತಂಕಕಾರಿ”
ವೈಧ್ಯಾಧಿಕಾರಿ ಸರ್ಜನ್. ಡಾಕ್ಟರ್ ಶಿವಕುಮಾರ್ ಕಳವಳ

 

ಮುಂಜಾಗ್ರತಾ ಕ್ರಮವಾಗಿ ಜನರಿಗೆ ‘ ಸಣ್ಣ ಪುಟ್ಟ ಜ್ವರ, ನೆಗಡಿ ಬಂದರೂ ನಿರ್ಲಕ್ಷ್ಯ ಮಾಡದೆ ಆಸ್ಪತ್ರೆ ಗೆ ಬರಬೇಕು ಮತ್ತು ಸೂಕ್ತ ಚಿಕಿತ್ಸೆ ಪಡೆಯಬೇಕು,ಅಗತ್ಯವಿದ್ದರೆ. ಕೋವಿಡ್ ಪರೀಕ್ಷೆ ಮಾಡಿಸಬೇಕು.
ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು,ಮತ್ತು ಸಾಮಾಜಿಕ ಅಂತರಕಾಯ್ದುಕೊಳ್ಳಬೇಕು.ಮನೆಯಲ್ಲಿ ಯಾರಿಗೇ ನೆಗಡಿ,ಕೆಮ್ಮು, ಜ್ವರ ಅಥವಾ ತೊಂದರೆ ಕಂಡುಬಂದಲ್ಲಿ ಆಸ್ಪತ್ರೆಗೆ ಬರಬೇಕು, ತಪ್ಪದೆ ಪರೀಕ್ಷೆ ಮಾಡಿಸಬೇಕು.

ಮೂರನೇ ಅಲೆ ಎರೆಡನೇ ಅಲೆಯಂತೆಯೇ ಲಕ್ಷಣ ಹೊಂದಿದೆ ಅದರೆ ಅದಕ್ಕಿಂತ ತೀವ್ರವಾಗಿದೆ.ಮತ್ತು 12 ವರ್ಷದ ಒಳಗಿನ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳುತ್ತಾ ಇದೆ. ಲಕ್ಷಣಗಳು ಇದ್ದಲ್ಲಿ ನಿರ್ಲಕ್ಷ್ಯ ಮಾಡದೇ. ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸುವುದು ಒಳ್ಳೆಯದು.

ಸರ್ಕಾರ ಶಾಲೆಗಳನ್ನ ತೆರೆಯುವ ವಿಚಾರಕ್ಕೆ ಪ್ರತಿಕ್ರಿಯೆಸಿದ ವೈಧ್ಯರು ” ಮಕ್ಕಳಿಗೆ ಲಸಿಕೆಯನ್ನ ಕೊಟ್ಟು ಶಾಲೆಗಳನ್ನ ತೆರೆಯುವುದು ಸೂಕ್ತ, ಇಲ್ಲದಿದ್ದಲ್ಲಿ ಮುಂದಿನ ಕ್ರಮ ಎದುರಿಸಲು ಸಿದ್ದರಿರಬೇಕು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಹಂತದಲ್ಲಿ ತೆರೆಯಬಹುದು “ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಳೆದ 15 ದಿನಗಳಿಂದ ಗಣನೀಯ ಪ್ರಮಾಣದ ಮಕ್ಕಳಿಗೆ ನೆಗಡಿ, ಕೆಮ್ಮು, ಜ್ವರ,ನಿಮೋನಿಯಾ ಪ್ರಮಾಣ ಹೆಚ್ಚಾಗಿ ಕಾಣಿಸುತ್ತಿದೆ. ಇದು ಆತಂಕಕಾರಿ. ಅದರೆ ಸೋಂಕಿತ ಮಕ್ಕಳ ಸಂಖ್ಯೆ ಕಮ್ಮಿ ಇದೆ.

ಲಸಿಕೆ ಬಗ್ಗೆ ಮಾಹಿತಿ ನೀಡಿದ ವೈಧ್ಯರು ಎರೆಡು ಲಸಿಕೆ ಹಾಕಿಸಿದ ಮನುಷ್ಯನ ದೇಹದಲ್ಲಿ ಅವರವರ ರೋಗ ನಿರೋಧಕ ಶಕ್ತಿಗೆ ಅನುಗುಣವಾಗಿ ಮೂರು ವರ್ಷಗಳವರೆಗೆ ಇರುತ್ತೆ. ಮಕ್ಕಳ ಲಸಿಕೆ ಇನ್ನೂ ಪ್ರಯೋಗ ಹಂತದಲ್ಲಿದೆ. ಆದಷ್ಟು ಎಚ್ಚರಿಕೆಯಿಂದ ಇರೀ ಮತ್ತು ನಿರ್ಲಕ್ಷ್ಯ ಮಾಡಬೇಡಿ ಎಂದು ಎಂದು ಹೂವಿನ ಹಡಗಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿ ಸರ್ಜನ್ ಡಾಕ್ಟರ್ ಶಿವಕುಮಾರ್. ತಿಳಿಸಿದರು.

ವರದಿ : ಅಜಯ.ಚ
ಹುಗಲೂರು
ಹೂವಿನ ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *