ಚಿತ್ರದುರ್ಗ: ಜಿಲ್ಲಾಯ ಮೊಳಕಾಲ್ಮುರು ಪಟ್ಟಣದ ಕೆಇಬಿ ಸರ್ಕಲ್ ಬಳಿ ಇರುವ ಗುರುಭವನದಲ್ಲಿ (ಅಗಸ್ಟ್-12) “ಸರ್ಜೀ ಆಡಿಯೋ ಕನ್ನಡ ಸಂಗೀತ ಸ್ಪರ್ಧೆ” ಮೊಳಕಾಲ್ಮೂರು ತಾಲ್ಲೂಕಿನ ಪ್ರಥಮ ಬಾರಿಗೆ ಸಂಗೀತ ಗಾಯನ ಕಾರ್ಯಕ್ರಮವನ್ನು ಸಂತೋಷ್ ಆರ್ ಉಡೇವು ಇವರ ಸಾರಥ್ಯದಲ್ಲಿ ಏರ್ಪಡಿಸಲಾಗಿತ್ತು. ಗ್ರಾಮೀಣ ಭಾಗದ ಉತ್ತಮ ಪ್ರತಿಭಾವಂತ
ಕಲಾವಿದರಿಗೆ ತಮ್ಮ ಪ್ರತಿಭೆ ಅನಾವರಣ ಮಾಡಲು ಸೂಕ್ತ ವೇದಿಕೆಗಳು ದೊರೆಯುತ್ತದೆ ಇಂದಿಗೂ ಮೂಲೆ ಗುಂಪಾಗುತ್ತಿದ್ದಾರೆ ಎಂದು ಸಿಪಿಐ ಜಿ.ಬಿ. ಉಮೇಶ್ ನಾಯಕ್ ತಿಳಿಸಿದರು. ಸರ್ಜಿ ಆಡಿಯೋದಿಂದ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಗೀತ ಕಾರ್ಯಕ್ರಮದಲ್ಲಿ ಮುಂದಿನ ದಿನದಲ್ಲಿ ಪ್ರತಿಭಾವಂತ ಆಸಕ್ತ ಕಲಾವಿದರು ತಮ್ಮಲ್ಲಿನ ಕಲೆಯನ್ನು ವೇದಿಕೆಯ ಮೂಲಕ ಸಾಬೀತು ಪಡಿಸಲು ಸುವರ್ಣ ಅವಕಾಶ ಕಲ್ಪಿಸಿ ನಾಡಿಗೆ ಪರಿಚಯಿಸಲು ಸ್ಥಳೀಯ ಆಯೋಜಕರು ಉತ್ಸಾಹ ತೋರುತ್ತಿದ್ದಾರೆ ಎಂದರು. ಸುವರ್ಣ ಅವಕಾಶ ಕಲ್ಪಿಸಿ ನಾಡಿಗೆ ಪರಿಚಯಿಸಲು ಸ್ಥಳೀಯ ಆಯೋಜಕರು ಉತ್ಸಾಹ ತೋರುತ್ತಿದ್ದಾರೆ ಎಂದರು. ಬಸವಲಿಂಗ ಸ್ವಾಮೀಜಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಗಾಯಕ-ಗಾಯಕಿಯರು ಭಾಗವಹಿಸಿದರು ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಗಾಯಕ ಗಾಯಕಿರಿಗೆ ನೀಡಿದರು. ತೀರ್ಪುಗಾರರ ಸಂಯೋಗದೊಂದಿಗೆ ಪ್ರಥಮ ಬಹುಮಾನ ನಾಗವೇಣಿ ಹಿರಿಯೂರು, ದ್ವಿತೀಯ ಸ್ಥಾನ ಬೋರಯ್ಯ ಚಳ್ಳಕೆರೆ, ತೃತೀಯ ಸ್ಥಾನ ನವೀನ್ ಹಿರೇಹಳ್ಳಿ, ನಿಡಲಾಯಿತು. ಈ ಕಾರ್ಯಕ್ರಮದಲ್ಲಿ ಪ.ಪಂ ಉಪಾಧ್ಯಕ್ಷೆ ಕೆ.ಎನ್.ಶುಭಾ, ರಾಂಪುರ ಡಿಕೆಆರ್ ಗ್ರೂಪ್ ಸಂಸ್ಥಾಪಕ ಎಂ.ಡಿ.ಮಂಜುನಾಥ್, ಸರ್ಜಿ ಆಡಿಯೋದ ಸಂತೋಷ್ ಆರ್.ಉಡೇವು, ಸಂಗೀತ ಶಿಕ್ಷಕರು ಕೆ.ಸಿ.ಶಿವಣ್ಣ ಕಲಾವಿದರಾದ ಬಿ.ಜಿ.ಕೆರೆ ಉಪ್ಪಿ, ಬಿ.ಓಬಣ್ಣ ಶಿಕ್ಷಕರು, ನಾಗರಾಜ ಕಟ್ಟೆ ,ಎಂ.ಡಿ.ಮಹಮ್ಮದ್ ಲತೀಫ್ ಸಾಬ್, ಯುವ ಕವಿ ಸೂಲೇನಹಳ್ಳಿ ರಾಜು, ಡಿ.ಜಿ ತಿರುಮಲ, ವೀರ ಹೂಗಾರ, ಎಸ್.ಟಿ.ಚಂದ್ರಣ್ಣ, ಕೂನಸಾಗರ ಪಾಲಯ್ಯ, ಎರ್ರಿಸ್ವಾಮಿ ಹಿರೇ ಕೆರೆಹಳ್ಳಿ, ಎಲ್ಲಾ ಸಂಗೀತ ಕಲಾವಿದರು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
