;

ಉದ್ಯೋಗ ಖಾತ್ರಿ; ನಾಮ ಪಲಕದ ಹಣವನ್ನು ಟೆಂಡರ್ ಮುಖಾಂತರ ತಿಮಿಂಗಲದಂತೆ ಹಣ ನುಂಗಿದ ಹಿಂದಿನ ಇ.ಓ. ಪ್ರಕಾಶ್ ವಿರುದ್ಧ ಆಕ್ರೋಶ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ರೈತರ ಕೃಷಿಹೊಂಡ, ಬದು ನಿಮಾಣ ಕಾಮಗಾರಿಗಳ ನಾಮ ಪಲಕದ ಹಣವನ್ನು ಟೆಂಡರ್ ಮುಖಾಂತರ ತಿಮಿಂಗಲದಂತೆ ಹಣ ನುಂಗಿರುವ ಹಿಂದಿನ ಇ.ಓ. ಪ್ರಕಾಶ್ ವಿರುದ್ಧ ತನಿಖೆಗೆ ಒತ್ತಾಯಿಸಬೇಕು ಎಂದು ತಾಲ್ಲೂಕು ರೈತ ಸಂಘ ಅಧ್ಯಕ್ಷ ಬೆಳಗಲ್ ಈಶ್ವರಯ್ಯ ಸ್ವಾಮಿ ತಿಳಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ತಾಲ್ಲೂಕು ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಜಾನಕಿರಾಮ್ ರವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಇ.ಓ. ಪ್ರಕಾಶ್ ರವರು ಈ ಹಿಂದೆ ರೈತರ ಖಾತೆಗೆ ನಾಮಫಲಕ ಹಣ ಜಮಾ ಮಾಡಿಸದೇ ರೈತರನ್ನು ಮೋಸ ಮಾಡುವುದಲ್ಲದೇ ನಂಬಿಸಿ ಟೆಂಡರ್ ಬಿ.ಎಸ್. ಮಹಂತೇಶ ಕುಮಾರ ಮುಖಾಂತರ ಜಮಾಮಾಡಿ ಆ ಹಣವನ್ನು ರೈತರಿಗೆ ನೀಡದೇ ಇ.ಓ.ಪ್ರಕಾಶ್ ರವರೇ ಹಣ ಪಡೆದು ರೈತರಿಗೆ ಮೋಸ ಮಾಡಿರುತ್ತಾರೆ. ಈ ಟೆಂಡರ್ ಮಹಂತೇಶ್ ಕುಮಾರ್ ಎಂಬುವರು ಹಾಲಿ ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟೆಕ್ನಿಕಲ್ ಇಂಜಿನಿಯರ್ ಹರೀಶ್ ಎಂಬುವವರ ತಮ್ಮ ನಾಗಿರುತ್ತಾನೆ. ಇದರಿಂದ ಸಿಬ್ಬಂಧಿಯ ಸಹಾಯದಿಂದ ಹಣ ದುರ್ಬಳಕೆ ಮಾಡಿ ಕೊಂಡಿರುತ್ತಾನೆ. ನಾಮಪಲಕಗಳ ಮೊತ್ತ 37 ಲಕ್ಷ ಸುಮಾರು ಆಗಿದ್ದು ಇವರೆಗೂ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿರುವುದಿಲ್ಲ. ಸದರಿ ಇ.ಓ.ಪ್ರಕಾಶ್ ರವರು ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹಣ ಪಡೆದು ಕಾರ್ಯವೇಶ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಕಾಮಗಾರಿಗಳಿಗೆ ಕಾರ್ಯದೇಶ ನೀಡಿರುತ್ತಾರೆ. ಇನ್ನು ಇವರ ಅವಧಿಯಲ್ಲಿ ಅನೇಕ ಕಾಮಾಗಾರಿಗಳಲ್ಲಿ ಭ್ರಷ್ಟಚಾರ ನಡೆದಿದ್ದೂ ಇವರನ್ನು ತಕ್ಷಣವೇ ಅಮನತ್ತುಗೊಳಿಸಿ ಇಲಾಖೆ ತನಿಖೆಗೆ ನಡೆಸಬೇಕೆಂದು ಹಾಗೂ ಇವರಿಂದ ಹಣ ವಸೂಲಿ ಮಾಡಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಇಲ್ಲದಿದ್ದಲ್ಲಿ ದಿನಾಂಕ 23 ಅಗಸ್ಟ್ ರಂದು ರೈತರು, ರೈತ ಮಹಿಳೆಯರು, ಕೂಲಿ ಕಾರ್ಮಿಕರು ತಾಲ್ಲೂಕು ಪಂಚಾಯಿತಿ ಕಾರ್ಯಲಯದ ಹಣ ರೈತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುವವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಂ ಜಾಫರ್ ಷರೀಫ್, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಮಲ್ಲಹಳ್ಳಿ ರವಿಕುಮಾರ್, ಸೂರಮ್ಮನಹಳ್ಳಿ ರಾಜಣ್ಣ, ಕನಕ ಶಿವಮೂರ್ತಿ, ಮಲ್ಲಹಳ್ಳಿ ಪಾಪಯ್ಯ, ಮಂಜುನಾಥ, ಜಿ.ತಿಪ್ಪಮ್ಮ, ಪಿ.ಟಿ.ಹಟ್ಟಿ ನಿಂಗಣ್ಣ, ಕೆ.ಎಂ. ನಾಗರಾಜ, ಕೆ.ಚಂದ್ರಣ್ಣ ಮುಂತಾದವರು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;