;

ಮೊಳಕಾಲ್ಮುರು: ಹಲವು ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣದಲ್ಲಿಂದು ವಿವಿಧ ಸಂಘಟನೆಗಳ ಪ್ರತಿಭಟನೆ.!

ಚಿತ್ರದುರ್ಗ ಜಿಲ್ಲಾ ಮೊಳಕಾಲ್ಮುರು ಪಟ್ಟಣದಲ್ಲಿ ಇಂದು (ಅಗಸ್ಟ್-9) ವಿವಿಧ ಬೇಡಿಕೆಗೆ ಈಡೇರಿಕೆ ಆಗ್ರಹಿಸಿ ಸೆಂಟರ್ ಆಪ್ ಟ್ರೇಡ್ ಯೂನಿಯನ್ ಹಾಗೂ ಕರ್ನಾಟಕ ಪ್ರಾಂತ್ಯ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯ ಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ತಾಲೂಕು ಕಚೇರಿ ಆವರಣದಲ್ಲಿ
ಸೋಮವಾರ ಮನವಿ ಸಲ್ಲಿಸಿದ ಕಾರ್ಯ ಹೊಸ ಕೃಷಿ ಕಾನೂನುಗಳಿಂದ
ಕೃಷಿ ಕ್ಷೇತ್ರದೊಳಗೆ ಬಂಡವಾಳ ಶಾಹಿಗಳ
ಪ್ರವೇಶವಾಗಿ ರೈತರ ಉತ್ಪನ್ನಗಳ ಬೇಕಾ ಬಿಟ್ಟಿ ವ್ಯಾಪಾರಕ್ಕೆ ದಾರಿ ಮಾಡಿಕೊಡುತ್ತದೆ. ಕರ್ತರು ಕೃಷಿ ರಂಗದಲ್ಲಿ ಸುಧಾರಣೆ ತರುವನೆಪದಲ್ಲಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಅಂಗೀಕಾರ ಮಾಡಿದೆ. ಇದು ರೈತರ ಪಾಲಿಗೆ ಮರಣ ಶಾಸನವಾಗಲಿದೆ. ವ್ಯವಸಾಯ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳ ಪರವಾದ ಈ ಶಾಸನ ರೈತರಿಗೆ ಮಾರಕವಾಗಿ ಪರಿಣಮಿಸಲಿದೆ. ಈಗಿದ್ದರೂ ಕೇಂದ್ರ ಸರ್ಕಾರ ಅಭಿವೃದ್ಧಿಯ ನೆಪದಲ್ಲಿ ರೈತಾಪಿ ವರ್ಗವನ್ನು ಸಂಕಷ್ಟಕ್ಕೆ ದೂಡುವ ಹುನ್ನಾರ ನಡೆಸುತ್ತಿದೆ ಎಂದು ದೂರಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರೈತಾಪಿ ವರ್ಗವನ್ನು ಗುಲಾಮಗಿರಿ ತಳ್ಳಲು ಅನುಕೂಲ ಮಾಡಿಕೊಟ್ಟಂತೆ ಆಗುತ್ತಿದೆ. ಪ್ರಧಾನಿ ಮೋದಿಯವರು ಹೊಸ ಕಾಯ್ದೆಗಳಿಂದಾಗಿ ಕೃಷಿ ಕೂಲಿ ಕಾರ್ಮಿಕರು ಶ್ರೀಮಂತರ ಹಿಡಿತದಲ್ಲಿ ಬದುಕುವಂತಾಗುತ್ತಿದ್ದು ಆತ್ಮಹತ್ಯೆ ಮಾಡಿ ಕೊಳ್ಳಲು ಪ್ರೇರಣೆ ನೀಡಿದಂತಾಗುತ್ತದೆ ಎಂದಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಟಿ.ಎಸ್‌.ಸುರೇಶ ಕುಮಾರ್‌ಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕು ಸಂಚಾಲಕದಾನಸೂರಯ್ಯ, ಸಿಐಟಿಯು ತಾಲೂಕು ಅಧ್ಯಕ್ಷ ಡಿ.ಎಂ.ಮಲಿಯಪ್ಪ, ಪ್ರಾಂತ್ಯ ರೈತ ಸಂಗದ ಎಚ್.ಎ.ಮಾರಣ್ಣ, ರಾಮಾಂಜಿನೇಯ, ಎಚ್.ಶಿವಮ್ಮ, ಶಿವಣ್ಣ, ನಾಗೇಶ, ಕೆ.ಟಿ.ನಾಗರಾಜಪ್ಪ, ನಾಗರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;