ನಾಗೋಜಿ ಕಾಳಪ್ಪ ನೆನಪಿನ ರಂಗ ಸಂವಾದ ಹೂವಿನ ಹಡಗಲಿ…!!!

ನಾಗೋಜಿ ಕಾಳಪ್ಪ ನೆನಪಿನ ರಂಗ ಸಂವಾದ
ಹೂವಿನ ಹಡಗಲಿ: ಕೋವಿಡ್ ಕಾಲದಲ್ಲಿ ಸರ್ಕಾರಗಳಿಗೆ, ಜನ ಸಮುದಾಯಕ್ಕೆ ಕಲಾವಿದರು ನೆನಪಾಗಲೇ ಇಲ್ಲ. ಅತ್ಯಂತ ದುರ್ಗಮ ಪರಿಸ್ಥಿತಿ ರಂಗಭೂಮಿಗೆ ಎದುರಾಗಿದೆ ಎಂದು ಯುವರಂಗಕರ್ಮಿ
ಅಜಯ್ ಚಲವಾದಿ ಅಭಿಪ್ರಾಯ ಪಟ್ಟರು.

ಶುಕ್ರವಾರ ನಾಗೋಜಿ ಕುಟುಂಬ ಹಾಗೂ ರಂಗಾಸಕ್ತರು ಆಯೋಜಿಸಿದ್ದ “ನಾಗೋಜಿ ಕಾಳಪ್ಪ ನೆನಪಿನ ರಂಗ ಸಂವಾದ” “ದುರಿತ ಕಾಲ ಮತ್ತು ರಂಗಭೂಮಿ ಭವಿಷ್ಯ” ಕುರಿತು ವೆಬಿನಾರ್ ನಲ್ಲಿ ಭಾಗವಹಿಸಿ ಮಾತನಾಡಿದರು.

ವೃತ್ತಿ ರಂಗಭೂಮಿ ಕಲಾವಿದರು, ಕಂಪನಿ ಮಾಲೀಕರು, ಹವ್ಯಾಸಿ ನಾಟಕ ಪ್ರದರ್ಶಿಸುವ ನಾಡಿನ ಎಲ್ಲ
ರಂಗತಂಡಗಳಿಗೆ ಕೊರೊನಾ
ಅಡ್ಡಿ ಆತಂಕ ಉಂಟು ಮಾಡಿದೆ.

ಆಳುವ ಸರ್ಕಾರಗಳು ಈ ಕುರಿತು ಯೋಜನೆ ರೂಪಿಸಿದೇ ಇರುವುದು ವಿಷಾದದ ಸಂಗತಿ ಎಂದು ಹೇಳಿದರು.

ಕಲಾವಿದರು ಬದುಕಿದರೆ ಮಾತ್ರ
ಕಲೆ ಉಳಿಯುತ್ತದೆ. ಎಲ್ಲಾ ಪ್ರಕಾರದ ಗ್ರಾಮೀಣ ಕಲೆ ಸಂಸ್ಕೃತಿ ಉಳಿಸಿ ಬೆಳೆಸುವ ಮಹತ್ವದ ಕೆಲಸ ಸಮಾಜ ಹಾಗೂ ಸರ್ಕಾರದಿಂದ ಆಗಬೇಕಾಗಿದೆ ಎಂದು
ಯುವ ರಂಗಕರ್ಮಿ ನಂದಕುಮಾರ್ ತಿಳಿಸಿದರು.

ಪ್ರಾಚಾರ್ಯ ಪ್ರೊ ಎಸ್ ಎಸ್ ಪಾಟೀಲ್, ಮುಖ್ಯ ಗುರುಗಳಾದ ಸುರೇಶ ಅಂಗಡಿ,
ಕಲಾ ಶಿಕ್ಷಕ ಎ‌ಸ್ ದ್ವಾರಕೀಶ್ ರೆಡ್ಡಿ ಸಂವಾದದಲ್ಲಿ ಪಾಲ್ಗೊಂಡು ಪ್ರತಿಕ್ರಿಯೆ ನೀಡಿದರು.

ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯರಾದ
ಡಾ ಕೆ ರುದ್ರಪ್ಪ ಅಧ್ಯಕ್ಷತೆ ವಹಿಸಿ
ಮಲ್ಲಿಗೆ ನಾಡಿನ ರಂಗಭೂಮಿ
ಒಳಗೊಂಡಂತೆ ಎಲ್ಲಾ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕಾಗಿದೆ ಎಂದರು.

ಉಪನ್ಯಾಸಕ ಪ್ರೊ ಎಚ್ ಕೆ ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಸೋಗಿ ಮಲ್ಲಪ್ಪ ಗವಾಯಿ ರಂಗಗೀತೆ ಹಾಡಿದರು.ಅಕ್ಕಮಹಾದೇವಿ
ನಿರ್ವಹಿಸಿದರು…

ವರದಿ. ಅಜಯ್, ಚ. ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend