ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ಬಿಜೆಪಿ ಕಾರ್ಯಲಯದಲ್ಲಿಷಮಹಿಳಾ ಮೋರ್ಚಾ ಎರಡನೇ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಮಹಿಳೆಯರು ಬೂತ್
ಮಟ್ಟದಿಂದ ಪಕ್ಷ ಸಂಘಟನೆಗೆ
ಶ್ರಮಿಸಬೇಕು ಎಂದು ಮಹಿಳಾ
ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಸುನೀತಾ
ಜಗದೀಶ್ ತಿಳಿಸಿದರು. ಬಿಜೆಪಿ ಬೇರೆ ಪಕ್ಷಗಳಿಗಿಂತ ಭಿನ್ನಾವಾದ ಮತ್ತು ಶಿಸ್ತಿನ ಪಕ್ಷ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಿರುವ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರಾದ ನಾವುಗಳು ಪ್ರತಿಯೊಬ್ಬರಿಗೆ ತಿಳಿಸುವುದರಿಂದ ಪಕ್ಷ ಬಲವರ್ಧನೆ ಸಾಧ್ಯವಾಗಲಿದೆ ಎಂದರು. ಜಿಲ್ಲಾಧ್ಯಕ್ಷೆ ಶೈಲಾಜ ರೆಡ್ಡಿ ಮಾತನಾಡಿ, ಜವಬ್ದಾರಿ ಎನ್ನುವುದು ಕೇವಲ ಅಧ್ಯಕ್ಷರಿಗೆ ಮಾತ್ರವಲ್ಲ, ಎಲ್ಲಾ ಸದಸ್ಯರು ಅಧ್ಯಕ್ಷರ ಜೊತೆ ಕೈ ಜೋಡಿಸಿದರೆ ಸಂಘಟನೆ ಗಟ್ಟಿಯಾಗುತ್ತದೆ. ಮಹಿಳಾ ಸಂಘಟನೆಗೆ ಹೆಚ್ಚಾಗಿ ಮಹಿಳೆಯರನ್ನು ಸೇರಿಸಿಕೊಂಡು ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತಹ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದು ಸಲಹೆ ನೀಡಿದರು. ಮಂಡಲಾಧ್ಯಕ್ಷೆ ಸರ್ವಮಂಗಳ ಚಂದ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭವನೇಶ್ವರಿ, ಜಿಲ್ಲಾ ಕಾರ್ಯದರ್ಶಿ ಹಾಗೂ ಪಪಂ ಸದಸ್ಯೆ ರೂಪ ವಿನಯ್, ಮಂಡಲ ಪ್ರಧಾನ ಕಾರ್ಯದರ್ಶಿ ಎನ್.ಪಿ. ಪ್ರಭಾಕರ, ತಾಲೂಕು ಕಾರ್ಯದರ್ಶಿ ಹಾಗೂ ಪಪಂ ಸದಸ್ಯೆ ಲಕ್ಷ್ಮಿದೇವಿ, ಪ್ರಧಾನ ಕಾರ್ಯದರ್ಶಿ ಕೆ.ಆರ್. ವಿದ್ಯಾ, ರೇಣುಕಾ, ಕಾರ್ಯದರ್ಶಿ ವನೀತ, ಉಪಾಧ್ಯಕ್ಷೆ ಸ್ನೇಹ, ಜ್ಯೋತಿ, ಟಿ.ಟಿ. ನಿರ್ಮಲಮ್ಮ, ಶಿಲ್ಪ, ಸುಧಾ, ವಸಂತಮ್ಮ, ಶ್ರೀದೇವಿ, ಹನುಮಕ್ಕ, ಪಾಲಮ್ಮ, ವಾಣಿ, ಪದ್ಮಾವತಿ, ಶೋಭ ಹಾಗೂ ಸದಸ್ಯರು ಇದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
