;

ಶಾಸಕ ಎಸ್.ವಿ. ರಾಮಚಂದ್ರಪ್ಪಗೆ ಒಲಿಯುವುದೇ ಸಚಿವ ಸ್ಥಾನ.?

ಶಾಸಕ ಎಸ್.ವಿ. ರಾಮಚಂದ್ರಗೆ ಒಲಿಯುವುದೇ ಸಚಿವ ಸ್ಥಾನ.?

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಿದ್ದು, ಸಚಿವ ಸಂಪುಟದಲ್ಲೂ ಬದಲಾವಣೆಗಳು ಆಗಲಿವೆ ಎಂಬ ಮಾತುಗಳು ಕೇಳಿಬರುತ್ತಿರುವುದರ ಹಿಂದೆಯೇ ತಾಲ್ಲೂಕಿನ ಶಾಸಕ ಎಸ್.ವಿ.ರಾಮಚಂದ ಅವರಿಗೆ ಸಚಿವ ಸ್ಥಾನ ಸಿಗಬಹುದೇ ಎಂಬ ಆಸೆ ಪಕ್ಷದ ಸ್ಥಳೀಯ ಕಾರ್ಯಕರ್ತರಲ್ಲಿ ಚಿಗುರೊಡೆದಿದೆ.
3 ಬಾರಿ ಶಾಸಕರಾದ ರಾಮಚಂದ್ರ ಅವರು ಮಾಜಿ ಮುಖ್ಯಮಂತ್ರಿಯ ಅಪ್ತ ವಲಯದಲ್ಲಿ ಗುರುತಿಸಿಕೊಂಡವರು ಅಲ್ಲದೇ ಬಿಜೆಪಿ ಪಕ್ಷದ ಹಿರಿಯ ಶಾಸಕರು ಹೌದು ಆದರೂ ಒಂದು ಬಾರಿಯು ಸಚಿವ ಸ್ಥಾನ ಸಿಗಲಿಲ್ಲ. ಬದಲಿಗೆ ಹಟ್ಟಿ ಚಿನ್ನದ ಗಣಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎರಡು ಬಾರಿ ಆಯ್ಕೆ ಮಾಡಲಾಗಿತ್ತು.
ಆದರೆ ಈ ಬಾರಿ ವಯಸ್ಸಿನ ಕಾರಣಕ್ಕೆ ಮುಖ್ಯಮಂತ್ರಿ ಬದಲಾವಣೆಯ ನಂತರ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಬಲವಾದ ಕೂಗು ಕೇಳಿಬರುತ್ತಿರುವುದು ಒಂದು ಕಡೆ ಅದರೆ ಇನ್ನೂಂದು ಕಡೆ 3 ಬಾರಿ ಶಾಸಕರಾಗಿ ಆಯ್ಕೆಯಾಗಿ ಪಕ್ಷದ ನಿಷ್ಠೆಗೆ ಬದ್ದವಾಗಿರುವ ರಾಮಚಂದ್ರರ ಅಪ್ತರ ಬಳಗದಲ್ಲಿ ಆಸೆ ಮೂಡಲು ಕಾರಣವಾಗಿದೆ.
ರಾಮಚಂದ್ರ ಅವರು ಉತ್ಸಾಹಿ, ಪ್ರಾಮಾಣಿಕ ರಾಜಕಾರಣಿಯಾಗಿದ್ದು, ತಾಲ್ಲೂಕಿನಲ್ಲಿ ಮೂರು ಬಾರಿ ಕಮಲ ಅರಳಿಸಿದ ಹಿರಿಮೆ ಅವರದಾಗಿದಲ್ಲದೇ ಜಗಳೂರು ವಿಧಾನಸಭಾ ಎಸ್ಟಿ ಕ್ಷೇತ್ರದ ಪ್ರಭಾವಿ ರಾಜಕಾರಣಿಯಲ್ಲಿ ಒಬ್ಬರಾಗಿದ್ದು ಹಲವು ಪ್ರಭಾವಿ ನಾಯಕರು ಅವರ ಬೆಂಬಲವಾಗಿ ಇದ್ದಾರೆ.
ಕೋಟ್;1
ಹಿಂದುಳಿದ ತಾಲ್ಲೂಕು ಆದ ಜಗಳೂರಿಗೆ 30 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಈ ಬಾರಿಯಾದರು ತಾಲ್ಲೂಕಿನ ಶ್ರೇಯಾಭಿವೃದ್ಧಿಗೆ ಮಂತ್ರಿಮಂಡಲದಲ್ಲಿ ಶಾಸಕ ಎಸ್.ವಿ ರಾಮಚಂದ್ರವರಿಗೆ ಸಚಿವ ಸ್ಥಾನವನ್ನು ನೀಡವುದು ಅಗತ್ಯವಿದೆ.
ಪೂಜಾರಿ ಸಿದ್ದಪ್ಪ ಬಿಜೆಪಿ ಎಸ್ಸಿ ಮೋರ್ಚ್ ಉಪಧ್ಯಾಕ್ಷ ಜಗಳೂರು
ಕೋಟ್-2
ಜಿಲ್ಲೆಯ ಏಕೈಕ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾದ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ವಿ ರಾಮಚಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳ ಒತ್ತಾಯವಾಗಿದೆ. ಪಕ್ಷದ ವರಿಷ್ಠರು ಸಹ ಈ ನಿಟ್ಟಿನಲ್ಲಿ ಸಕರಾತ್ಮಕ ನಿಲುವನ್ನು ಹೊಂದಿ ಸಚಿವ ಸ್ಥಾನ ನೀಡಿದರೆ ಒಳಿತು.
ಸಿ ಮಹೇಶ್ ತಾಲ್ಲೂಕು ಬಿಜೆಪಿ ಪಕ್ಷದ ಅಧ್ಯಕ್ಷ…

ವರದಿ. ಸಂದೀಪ್, ಎಚ್, ಜಗಳೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;