;

ಸಿಂಧನೂರು:ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆ…!!!

ಸಿಂಧನೂರು:ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆ.
ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣಾ ಪೂರ್ವಭಾವಿ ಸಭೆ ಮತ್ತು ಕೊವಿಡ್ 19 ನಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ಎಸ್.ಬಿ.ಐ ಇನ್ಸೂರೆನ್ಸ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕರು ಹಂಪನಗೌಡ ಬಾದರ್ಲಿ ವಹಿಸಿದ್ದರು.
ಕಾರ್ಯಕ್ರಮದ ಮೊದಲಿಗೆ ಮಾತನಾಡಿದ ಎನ್.ಎಸ್ ಬೋಸರಾಜ್ ಬಿಜೆಪಿ ಸರ್ಕಾರದಲ್ಲಿ ರೈತರಿಗೆ ಸರಿಯಾಗಿ ಇಂಡಿಯನ್ ಬಲ ಬೆಲೆ ಸಿಗುತ್ತಿಲ್ಲ ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲರಾಗಿದ್ದಾರೆ. ನಮ್ಮ ಹಿಂದಿನ ಕಾಂಗ್ರೆಸ್ ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಅನೇಕ ರೈತಪರ ಯುವಕರ ಮಹಿಳೆಯರ ಪರವಾಗಿ ಕೆಲಸ ಮಾಡಿದ್ದೇವೆ ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಭ್ರಷ್ಟಾಚಾರದಲ್ಲಿ ತುಂಬಿ ತುಳುಕುತ್ತಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ತೊಡಗಿರುವಾಗ ಅವರ ಕೈಕೆಳಗೆ ಕೆಲಸ ಮಾಡುವ ಮಂತ್ರಿಗಳು ಅಧಿಕಾರಿಗಳು ಹಣ ವಸೂಲಿಗೆ ಇಳಿದಿದ್ದಾರೆ.
ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ 371 ವಿಶೇಷ ಸ್ಥಾನಮಾನ ವನ್ನು ಇಂದಿನ ಮನಮೋಹನ್ ಸಿಂಗ್ ಕಾಂಗ್ರೆಸ್ ಆಡಳಿತದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಮತ್ತು ದಿವಂಗತ ಧರ್ಮಸಿಂಗ್ ಪರಿಶ್ರಮದಿಂದ ಜಾರಿಗೆ ತರಲಾಯಿತು. 371 ಜೆ ಜಾರಿಗೆ ಬಂದಿದ್ದರಿಂದ ನಮ್ಮ ಭಾಗದ ಯುವಕರಿಗೆ ಉದ್ಯೋಗಗಳು ದೊರೆಯುತ್ತಿವೆ,ಬಡತನ ನಿರ್ಮೂಲನೆಯಾಗಿದೆ, ಹೆಚ್ಚಿನ ಅನುದಾನ ಕೂಡ ಬರುತ್ತಿದೆ. ಈಗಿನ ಮೋದಿ ಸರ್ಕಾರಕ್ಕೆ ಜನ ಬೇಸತ್ತಿದ್ದಾರೆ.ಆದ್ದರಿಂದ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ರೈತರ, ಬಡವರ, ದೀನದಲಿತರ ಪರವಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಬಸವರಾಜ ಪಾಟೀಲ್ ಇಟ್ಟಿಗಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಬಡಜನರಿಗೆ ದೊರಕಬೇಕಾದ ಯಾವ ಯೋಜನೆಯು ಜಾರಿಗೆ ತರಲಿಲ್ಲ. ಅದೇ ನಮ್ಮ ಸಿದ್ದರಾಮಯ್ಯ ಸರಕಾರದಲ್ಲಿ ಅನ್ನಭಾಗ್ಯ ಇಂದಿರಾಕ್ಯಾಂಟೀನ್ ಮನಸ್ವಿನಿ, ಶಾದಿಬಾಗ್ಯ ಇನ್ನೂ ಅನೇಕ ಸೌಲಭ್ಯಗಳನ್ನು ಕಾಂಗ್ರೆಸ್ ಸರ್ಕಾರದಲ್ಲಿ ಮಾಡಿದೆ. ಆದರೆ ಮೋದಿ ಸರ್ಕಾರ ಉಚಿತ ಗ್ಯಾಸ್ ಸಿಲೆಂಡರ್ ಕೊಟ್ಟು ಇವಾಗ ಸಬ್ಸಿಡಿ ಕೂಡ ದೊರೆಯುತ್ತಿಲ್ಲ. ಬಿಜೆಪಿ ಸರ್ಕಾರ ಕಾರ್ಪೊರೇಟರ್ ಬಂಡವಾಳಶಾಹಿಗಳ ಉದ್ಯಮಿದಾರರ ಪರವಾಗಿದೆ ಎಂದರು.
ನಂತರ ಮಾತನಾಡಿದ ಡಿ.ಎಸ್ ಹುಲಿಗೇರಿ ಕಾಂಗ್ರೆಸ್ ಪಕ್ಷ 70 ವರ್ಷಗಳಲ್ಲಿ 53 ಲಕ್ಷ ಕೋಟಿ ಸಾಲ ಮಾಡಿದೆ. ಆದರೆ ಬಿಜೆಪಿ ಅವಧಿ ಮೋದಿ ಸರ್ಕಾರ 7 ವರ್ಷಗಳಲ್ಲಿ 83 ಲಕ್ಷ ಕೋಟಿ ಸಾಲ ಮಾಡಿದೆ. ಸಂಸಾರದ ಜವಾಬ್ದಾರಿ ಇಲ್ಲದ ಹೆಂಡತಿ ಮಕ್ಕಳಿಲ್ಲದ ಪ್ರಧಾನಿಗೆ ಸಂಸಾರದ ಜವಾಬ್ದಾರಿ ಹೇಗೆ ಗೊತ್ತಾಗುತ್ತದೆ ಎಂದರು.

ರಾಯಚೂರು ಜಿಲ್ಲಾಧ್ಯಕ್ಷರಾದ ಬಿ ವಿ ನಾಯಕ್ ಪಕ್ಷದಲ್ಲಿ ಎಷ್ಟೇ ಆಂತರಿಕ ಕಲಹಗಳಿದ್ದರೂ ಪಕ್ಷವನ್ನು ಒಡುಕು ಮಾಡದೇ ಎಲ್ಲರೂ ಒಗ್ಗಟ್ಟಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಮುಂದೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದರು.

ಕೊನೆಯದಾಗಿ ಮಾತನಾಡಿದ ಹಂಪನಗೌಡ ಬಾದರ್ಲಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಘಟಕಗಳ ಜಂಟಿ ಕಾರ್ಯಪಡೆಯು ಒಂದು ತಿಂಗಳಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿನಿಂದ ಮೃತಪಟ್ಟ ಕುಟುಂಬಗಳ ಸಂಖ್ಯೆ ಯನ್ನು ಪಟ್ಟಿ ಮಾಡಿದ್ದಾರೆ. ಎಸ್.ಬಿ.ಐ ಇನ್ಸೂರೆನ್ಸ್ ಕಂಪನಿಯಿಂದ ಪಾಲಿಸಿ ಮಾಡಿಸಿ ಪ್ರಥಮ ಹಂತದ ಹಣವನ್ನು ವಾರ್ಷಿಕ ಪ್ರೀಮಿಯಂ 3000 ರೂ ಹಣವನ್ನು ಪಕ್ಷದ ವತಿಯಿಂದ ಕಟ್ಟಲಾಗುತ್ತದೆ. ಹತ್ತು ವರ್ಷ ವಾರ್ಷಿಕ ಪ್ರಿಮಿಯಂ ಕಟ್ಟಿದರೆ 15ನೇ ವರ್ಷದಲ್ಲಿ ಪಾಲಿಸಿ ಹಣ 2.85000 ಕುಟುಂಬಕ್ಕೆಸಿಗುತ್ತದೆ ನರೇಂದ್ರ ಮೋದಿ ಬಿಜೆಪಿ ಸರ್ಕಾರ ಭಾವನಾತ್ಮಕ ವಿಚಾರಗಳ ಹಿಂದುತ್ವದ ತತ್ವಗಳ ಬಗ್ಗೆ ಜನರಲ್ಲಿ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬಂದರು, ಕೇಂದ್ರ ಇಂಟಲಿಜೆನ್ಸಿ ಪ್ರಕಾರ 220 ಸೀಟು ಬರುತ್ತದೆ ಎಂದು ರಿಪೋರ್ಟ್ ಇತ್ತು. ಇದನ್ನು ಮನಗಂಡು ಸರ್ಜಿಕಲ್ ಸ್ಟ್ರೈಕ್ ಮಾಡಿಸಿ ಅದನ್ನು ಚುನಾವಣಾ ಪ್ರಚಾರದಲ್ಲಿಭಾವನಾತ್ಮಕವಾಗಿ ಜನರಿಗೆ ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದರು. ಪೆಟ್ರೋಲ್ ಮತ್ತು ಡೀಸೆಲ್ ಗ್ಯಾಸ್, ದಿನಬಳಕೆ, ವಸ್ತುಗಳ ಬೆಲೆ ಗಗನಕ್ಕೇರಿದೆ. ಈಗಾಗಲೇ ಜನರು ಬಿಜೆಪಿ ಸರ್ಕಾರದಿಂದ ಬೇಸತ್ತಿದ್ದಾರೆ.ಆದ್ದರಿಂದ ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರೋಣ. ಟಿಕೆಟ್ ಕೇಳಲು ಎಲ್ಲರಿಗೂ ಅಧಿಕಾರವಿದೆ ಆದರೆ ಗುಂಪುಗಾರಿಕೆ ಮಾಡಲು ಕಾಂಗ್ರೆಸ್ ಪಕ್ಷದಲ್ಲಿ ಅವಕಾಶವಿಲ್ಲ ಟಿಕೆಟ್ ಸಿಕ್ಕರು ಸಿಗದಿದ್ದರು ಪಕ್ಷದ ಪರವಾಗಿ ಕೆಲಸ ಮಾಡಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ.ನಮ್ಮ ತಾಲೂಕಿನ ಮತದಾರರು ಬುದ್ದಿವಂತರಿದ್ದಾರೆ ಎಂದರು

ಈ ಸಂದರ್ಭದಲ್ಲಿ ಶಾಸಕರಾದ ಬಸವನಗೌಡ ದದ್ದಲ್, ಶರಣಪ್ಪ ಮಟ್ಟೂರು,ಮಸ್ಕಿ ಶಾಸಕರಾದ ಬಸನಗೌಡ ತುರ್ವಿಹಾಳ, ಕೆಪಿಸಿಸಿ ವಕ್ತಾರರಾದ ವಸಂತಕುಮಾರ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಂಪನಗೌಡ ಬಾದರ್ಲಿ, ಮಲ್ಲಿಕಾರ್ಜುನ್ ಪಾಟೀಲ್ ನಗರಸಭೆ ಅಧ್ಯಕ್ಷರು , ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾಜಿ ಮಲ್ಲಿಕ್, ಯಮನಪ್ಪ ಮಲ್ಲಾಪುರು , ಜಾಫರ್ ಜಾಗಿರ್ದಾರ್ ,ನಗರಸಭೆ ಉಪಾಧ್ಯಕ್ಷ ಮುರ್ತುಜಾ ಹುಸೇನ್, ಬಾಬುಗೌಡ ಬಾದರ್ಲಿ , ಬಸವರಾಜ್ ಹಿರೇಗೌಡ, ಉಮಾ ಸುರೇಶ್ ಜಾದವ್, ಹನುಮಂತಪ್ಪ ಮುದ್ದಾಪುರ್ ,ನಿಂಗಪ್ಪ ದಡೇಸೂಗೂರ್ ,ಅನಿಲ್ ಕುಮಾರ್ ಪ್ರಧಾನ ಕಾರ್ಯದರ್ಶಿ,ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರು, ನಗರಸಭೆ , ತಾಲೂಕು , ಜಿಲ್ಲಾ ಗ್ರಾಮ ಪಂಚಾಯತ್ ಸದಸ್ಯರು, ಮಂಚೂಣಿ ಘಟಕದ ಅಧ್ಯಕ್ಷರು, ಮಹಿಳಾ ಘಟಕ ಕಾರ್ಯಕರ್ತರು, ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;