ಸಿಂಧನೂರು :ಡಾ.ಜಿ. ಪರಮೇಶ್ವರ ಪೋಟೊ ಬ್ಯಾನರ್ ನಲ್ಲಿ ಹಾಕದಿದ್ದಕ್ಕೆ ಆಕ್ರೋಶ.
ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ ಇವರ ನೇತೃತ್ವದಲ್ಲಿ ಇಂದು ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಸಿಂಧನೂರು ನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯ ಪ್ರಯುಕ್ತ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಪಕ್ಷದ ಬ್ಯಾನರ್ ನಲ್ಲಿ ಕಾಂಗ್ರೆಸ್ ನ ಎಲ್ಲಾ ಹಿರಿಯ ರಾಜಕೀಯ ನಾಯಕರ ಭಾವಚಿತ್ರ ಇವೆ, ಆದರೆ ಇದರಲ್ಲಿ ಕಾಂಗ್ರೆಸ್ನ ಹಿರಿಯ ರಾಜಕಾರಣಿಗಳಾದ ಡಾ.ಜಿ ಪರಮೇಶ್ವರ್ ರವರ ಭಾವಚಿತ್ರ ಹಾಕಿರುವುದಿಲ್ಲ. ಡಾ. ಜಿ ಪರಮೇಶ್ವರ್ ಅವರು ಎಂಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷರಿದ್ದಾಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದಾರೆ. ಅವರು ಎಲ್ಲಾರನ್ನು ಒಗ್ಗಟ್ಟಿನಿಂದ ಪಕ್ಷ ಸಂಘಟನೆಗೆ ತೊಡಗಿದರು ಅವರು ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದು,ಉಪಮುಖ್ಯಮಂತ್ರಿ ಕೂಡ ಆಗಿದ್ದವರು, ಆದರೆ ಕಾಂಗ್ರೆಸ್ ಪಕ್ಷ ಅವರ ಅನುಭವ ಪಡೆಯದೆ ಅವರನ್ನು ಕಡೆಗಣಿಸುತ್ತಿದೆ ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಬ್ಯಾನರಿನಲ್ಲಿ ಪರಮೇಶ್ವರ ಫೋಟೋ ಹಾಕಿರುವುದಿಲ್ಲ .ಹಾಗಾಗಿ ಅಖಿಲ ಕರ್ನಾಟಕ ಡಾ. ಜಿ ಪರಮೇಶ್ವರ್ ಯುವ ಸೈನ್ಯ(ರಿ) ತಾಲೂಕ ಸಮಿತಿ ಸಿಂಧನೂರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತದೆ ಎಂದು ತಾಲೂಕು ಅಧ್ಯಕ್ಷರಾದ ಬಾಲರಾಜ ವಿರುಪಾಪೂರು ಪತ್ರಿಕೆ ಹೇಳಿಕೆ ನೀಡಿದರು..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
