ಸಿಂಧನೂರು: ಬಹುಜನ ಸಮಾಜ ಪಾರ್ಟಿ ವತಿಯಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆ.
ಬಹುಜನ ಸಮಾಜ ಪಾರ್ಟಿ ಇಂದು ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಹುಲುಗಪ್ಪ ಮಲ್ಕಾಪುರು ಬಿಎಸ್ಪಿ ತಾಲೂಕು ಅಧ್ಯಕ್ಷರು ವಹಿಸಿದ್ದರು. ಈ ಸಭೆಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಯಾವ ರೀತಿ ಸ್ಪರ್ಧೆ ಮಾಡಬೇಕು, ಯಾರಿಗೆ ಟಿಕೆಟ್ ನೀಡಬೇಕು,ಪಕ್ಷದಲ್ಲಿ ದುಡಿದವರಿಗೆ, ಕೂಲಿ ಕಾರ್ಮಿಕರ, ಬಡವರ, ದೀನದಲಿತರ ,ರೈತರ ಸಮಸ್ಯೆಗಳಿಗೆ ಸ್ಪಂದಿಸುವರಿಗೆ , ಭೂ ಮಾಫಿಯಾ ವಿರುದ್ಧ ಧ್ವನಿಯೆತ್ತುವವರಿಗೆ ಟಿಕೆಟ್ ನೀಡಲಾಗುವುದು ಎಂದು ಹುಲುಗಪ್ಪ ಮಲ್ಕಾಪುರ್ ತಿಳಿಸಿದರು.
ನಂತರ ಮಾತನಾಡಿದ ಚನ್ನಪ್ಪ ಅಮಿನಗಡ ಹಳ್ಳಿಗಳಲ್ಲಿ ಬಡವರಿಗೆ ಸರಿಯಾಗಿ ಸರಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮೂರು ಪಕ್ಷಗಳು ಕೇವಲ ದಲಿತರ ಹಿಂದುಳಿದವರ ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಮಾಡಿಕೊಂಡಿವೆ, ಆದರೆ ಸಮಸ್ಯೆಗಳು ಬಂದಾಗ ಮೂರು ಪಕ್ಷಗಳು ಕಡೆಗಾಣಿಸುತ್ತಾ ಬಂದಿವೆ, ಇದನ್ನು ಮತದಾರರಿಗೆ ಮನವರಿಕೆ ಮಾಡಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಕಾರ್ಯಕರ್ತರು ಪಣತೊಡಬೇಕು. ಏಳುರಾಗಿ ಕ್ಯಾಂಪಿನಲ್ಲಿ ಅನೇಕ ಕೂಲಿ ಕಾರ್ಮಿಕರು, ಬಡವರು ವಾಸವಿದ್ದು ಅವರಿಗೆ ಇನ್ನು ಕೆಲವರಿಗೆ ಹಕ್ಕುಪತ್ರ ದೊರಕುತ್ತಿಲ್ಲ ಇದರ ವಿರುದ್ಧ ಮುಂದಿನ ದಿನಗಳಲ್ಲಿ ನಮ್ಮ ಬಿಎಸ್ಪಿ ಪಕ್ಷ ಹೋರಾಟ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಯಾದ ಸಂತೋಷ್,ತಾಲೂಕು ಉಪಾಧ್ಯಕ್ಷರಾದ ನಿಂಗರಾಜ ಮಲ್ಲಾಪುರು, ಅಯ್ಯಪ್ಪ ಯದ್ದಲದೊಡ್ಡಿ, ದೊಡ್ಡಬಸವ ಬೂದಿವಾಳ, ದೇವರಾಜ್ ಜವಳಗೇರಾ, ಲಂಕೇಶ್ ಇನ್ನೂ ಅನೇಕ ಬಿಎಸ್ಪಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
