ಪ್ರಚಲಿತ
ಶತಾಯುಷಿ ಚಂಡೀಗಢದ ಅದ್ಬುತ ಓಟಗಾರ್ತಿ ಮನ್ ಕೌರ್ ವಿಧಿವಶ
ಭಾರತೀಯ ಟ್ರ್ಯಾಕ್ ಅಂಡ್ ಫೀಲ್ಡ್ ಶತಾಯುಷಿ ಕ್ರೀಡಾಪಟು, ಚಂಡೀಗಡದ ಅದ್ಭುತ ಓಟಗಾರ್ತಿ ಎಂದೇ ಹೆಸರಾಗಿದ್ದ ಮನ್ ಕೌರ್ ಇನ್ನಿಲ್ಲ.
ಪಿತ್ತಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದ 105 ವರ್ಷದ ಮನ್ ಕೌರ್ ಅವರು ಮೊಹಾಲಿಯ ಶುದ್ಧಿ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಶನಿವಾರ ಕೊನೆಯುಸಿರೆಳೆದಿದ್ದಾರೆ
2017ರಲ್ಲಿ ಆಕ್ಲೆಂಡ್ ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಗೇಮ್ಸ್ ನಲ್ಲಿ 100 ಮೀಟರ್ ಗೆಲುವು ಸಾಧಿಸಿದ್ದ ಶತಾಯುಷಿ ಓಟಗಾರ್ತಿ ಮನ್ ಕೌರ್ 1916, ಮಾರ್ಚ್ 1, ರಂದು ಜನಿಸಿದ್ದರು.
2016 ರಲ್ಲಿ ಅಮೆರಿಕನ್ ಮಾಸ್ಟರ್ಸ್ ಗೇಮ್ಸ್ ನಲ್ಲಿ ಅತ್ಯಂತ ವೇಗವಾಗಿ ಓಡುವ ಶತಾಯುಷಿಯಾಗಿ ಹೊರಹೊಮ್ಮಿದ್ದರು.
ಕೌರ್ ಅವರ ಪುತ್ರ ಗುರುದೇವ್ ಸಿಂಗ್ ಖುದ್ದು ತಾಯಿಗೆ ತರಬೇತಿಗಾರರಾಗಿದ್ದರು. ಮನ್ ಕೌರ್ ಗೆ ಇಬ್ಬರು ಪತ್ರರು, ಓರ್ವ ಪುತ್ರಿ. 104 ನೇ ವಯಸ್ಸಿನಲ್ಲಿ ಕೇಂದ್ರ ಸರ್ಕಾರ 2020 ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಾರಿ ಶಕ್ತಿ ಪ್ರಶಸ್ತಿ ನೀಡಿ ಗೌರವಿಸಿತ್ತು.

ವರದಿ. ನ್ಯೂಸ್ ಬ್ಯುರೋ ಎಚ್ಚರಿಕೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
