ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಿ
ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಎ. ಚಿತ್ತಪ್ಪ ಯಾದವ್ ಅವರು ಆಗ್ರಹಿಸಿದ್ದಾರೆ. ಇಂದು ಹೊಳಲ್ಕರೆ ತಾಲೂಕಿನ ಯಾದವ ಜನಾಂಗದ ಯುವಕರನ್ನೆಲ್ಲ ಹೊಳಲ್ಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯಾದವ ಜನಾಂಗದ ಯುವಕರನ್ನೆಲ್ಲ ಒಗ್ಗೂಡಿಸಿ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ 40 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಯಾದವ ಸಮುದಾಯ ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದು, ಈಗಿನ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ನಿರ್ಣಾಯಕ ಪಾತ್ರ ವಹಿಸಿದೆ. ರಾಜ್ಯದಲ್ಲಿ ನಮ್ಮ ಸಮಾಜದ ಏಕೈಕ ಶಾಸಕರಾಗಿರುವ ಪೂರ್ಣಿಮಾ ಅವರಿಗೆ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು. ಎಂದು ಆಗ್ರಹಿಸಿದರು. ಇನ್ನು ಪತ್ರಕರ್ತರಾದ ಪ್ರದೀಪ್, ಸುರೇಶ್, ನರಸಿಂಹ ಇನ್ನು ಅನೇಕ ಯಾದವ ಜನಾಂಗದ ಯುವಕರು ಈ ಸಂದರ್ಭದಲ್ಲಿ ಹಾಜರಿದ್ದರು…

ವರದಿ. ಸುರೇಶ್ ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
