ಸಿಸಿ ರಸ್ತೆ ಕಾಣೆ ಹುಡುಕಿಕೊಡಿ ನಾಲಾಯಕ್ ಅಧಿಕಾರಿಗಳೇ..!!?
ಬೆಳಗಾವಿ : ರಾಜ್ಯದ ಹಲವೆಡೆ ಗ್ರಾಮಪಂಚಾಯಿತಿಗಳನ್ನು ಹಳ್ಳಿಗಳು ಅಭಿವೃದ್ಧಿಯಾಗಲಿ ಗ್ರಾಮಮಟ್ಟದ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯ ಸಿಗಲಿ ಎನ್ನುವ ಉದ್ದೇಶದಿಂದ ರಾಜ್ಯಸರ್ಕಾರ ಗ್ರಾಮಪಂಚಾಯಿತಿಗಳನ್ನು ಪ್ರತಿ 4ರಿಂದ 5ಹಳ್ಳಿಗಳಿಗೊಂದು ನಿರ್ಮಿಸಿದೆ ಆದರೆ ಇದು ಕಳಪೆ ಹಾಗೂ ಅಧಿಕಾರವುಳ್ಳವರ ಪಲಾಗಿರುವುದು ಮಾತ್ರ ತುಂಬಾ ನೋವಿನ ಸಂಗತಿ ಮತ್ತು ಈ ಒಂದು ಗ್ರಾಮಪಂಚಾಯಿತಿಯ ಆಡಳಿತ ಕೆಲವು ಕಡೆ ಸರಿಯಾಗಿ ನಡೆಯುತ್ತಿದ್ದರೆ ಇನ್ನು ಕೆಲವು ಕಡೆ ಕೆಲಸ ಮಾಡದೇ ಸರ್ಕಾರದ ಹಣವನ್ನು ಲೂಟಿ, ಮಾಡುತ್ತಿರುವುದನ್ನು ನೋಡಿದರೆ ಈತರನಾದ ವ್ಯವಸ್ಥೆ ಬೇಕಾ ನಮ್ಮ ಜನಸಾಮಾನ್ಯರಿಗೆ ಅನ್ನಿಸುತ್ತಿದೆ ಈ ಒಂದು ಸಾಲಿನಲ್ಲಿ ಬಂದು ನಿಲ್ಲುವುದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಕಾಮಗಾರಿ ಮಾಡದೆ ಬಿಲ್ಲು ಎತ್ತಿದ್ದು.ಕಂಡರೂ ಕಾಣದಂತೆ ಕುಳಿತ ನಾಲಾಯಕ್ ಅಧಿಕಾರಿಗಳು ತನಿಖೆಗೆ ಅರ್ಜಿ ಹಾಕಿದರೆ ರಾಯಬಾಗ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ನಡೆದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ವರದಿ ಸಲ್ಲಿಸಿದ್ದು ಅದರಲ್ಲಿ 2018/2019 ಸಾಲಿನ ವಾರ್ಡ್ ನಂಬರ್ 3 ರಲ್ಲಿಯ ಸಿಸಿ ರಸ್ತೆ ಕಾಣೆಯಾಗಿದೆ.ರಸ್ತೆ ಮಾಡದೆ ಅದು ಹೇಗೆ ಅಲ್ಪ ಸ್ವಲ್ಪ ಕಳಪೆ ಆಗುತ್ತದೆ ತಿಳಿಯದಾಗಿದೆ.
ತಾಲ್ಲೂಕು ಪಂಚಾಯತ್ ಅಧಿಕಾರಿಗಳು ಅವ್ಯವಹಾರದಲ್ಲಿ ಭಾಗಿ ಅನ್ನುವ ಅಂಶ ಅವರ ವರದಿ ನೋಡಿದರೆ ತಿಳಿಯುತ್ತದೆ.ಹೀಗಾಗಿ
ಜಿಲ್ಲಾ ಪಂಚಾಯತ್ ಅಧಿಕಾರಿಗಳು ಖುದ್ದು ಹಂದಿಗುಂದ ಗ್ರಾಮದ ಪಂಚಾಯತ್ ಅವ್ಯವಹಾರ ಕಾಮಗಾರಿಗಳ ಪರೀಶಿಲನೆ ಮಾಡಿ ಭ್ರಷ್ಟಾಚಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.

ವರದಿ:ಎಂ. ಎಲ್. ವೆಂಕಟೇಶ್ ಬಳ್ಳಾರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
