;

ಮೊಳಕಾಲ್ಮೂರು: ಭದ್ರಾ ಮೇಲ್ದಂಡೆ ನೀರು ಹರಿಸಲು ವಿರೋಧ ವ್ಯಕ್ತ ಪಡಿಸಿದ ಸಂಸದ ಜಿ. ಎಂ.ಸಿದ್ದೇಶ್ವರ ಹೇಳಿಕೆ ಖಂಡಿಸಿ ಪ್ರತಿಭಟನೆ.!

ಚಿತ್ರದುರ್ಗ: ಮೊಳಕಾಲ್ಮೂರು/ ಪಟ್ಟಣದ ತಾಲೂಕು ಕಚೇರಿಯಲ್ಲಿ ಪ್ರತಿಭಟನೆ. ಭದ್ರಾ ಮೇಲ್ದಂಡೆ ನೀರು ಹರಿಸಲು ವಿರೋಧ ವ್ಯಕ್ತ ಪಡಿಸಿರುವ ಸಂಸದ ಜಿ. ಎಂ.ಸಿದ್ದೇಶ್ವರ ಹಾಗೂ ಕಾಡ ಅಧ್ಯಕ್ಷಪವಿತ್ರಾ ರಾಮಯ್ಯ ಹೇಳಿಕೆಯನ್ನು ಖಂಡಿಸಿ ವಿವಿಧ ಪ್ರಗತಿ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಚಿತ್ರದುರ್ಗ ದಾವಣಗೆರೆ ತುಮಕೂರು ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಈಗಾಗಲೇ ಯೋಜನೆಯು ಮುಗಿಯುತ್ತಾ ಬಂದಿದೆ  ಆದರೆ ಕಾಡ ಅಧ್ಯಕ್ಷರು ಮತ್ತು  ದಾವಣಗೆರೆ ಸಂಸದರಾದ ಸಿದ್ದೇಶ್ವರ ರವರು ನೀರಿನ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿ ರೈತರ ಮದ್ಯೆ ಸಂಘರ್ಷಕ್ಕೆ ತಂದೊಡ್ಡಿದ್ದಾರೆ ಆದಕಾರಣ ತಕ್ಷಣ ತಾವು ಹೇಳಿಕೆ ಕೊಟ್ಟ ಮಾತನ್ನು ಹಿಂಪಡೆಯಬೇಕು. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿ ಇಸಮುದ್ರ ಗ್ರಾಮದ 13 ವರ್ಷದ ಬಾಲಕಿ ಶಶಿಕಲಾ ಮೇಲೆ ಅತ್ಯಾಚಾರ ಎಸಗಿರುವ ಕೊಲೆ ಆರೋಪಿಯನ್ನು ಗಲ್ಲಿಗೇರಿಸಬೇಕು. ಮೊಳಕಾಲ್ಮೂರು ತಾಲೂಕಿನ 13 ಗ್ರಾಮಪಂಚಾಯಿತಿಗಳ ರೈತರಿಗೆ ಬೆಳೆ ವಿಮೆ ಕೊಡಬೇಕು. ಮೊಳಕಾಲ್ಮೂರು ತಾಲೂಕಿಗೆ ಬೆಳೆನಷ್ಟ ಪರಿಹಾರ ತುರ್ತಾಗಿ ಮಂಜೂರು ಮಾಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಬೇಡರಹಳ್ಳಿ ರೈತ ಸಂಘದ ತಾಲೂಕು ಅಧ್ಯಕ್ಷರಾದ ಬೆಳಗಲ್ ಈಶ್ವರಯ್ಯ ಸ್ವಾಮಿ, ಬಸವರೆಡ್ಡಿ ಸಿ ಪಿಐ ಜಾಫರ್ ಶರೀಫ್,  DSS ಕೊಂಡಾಪುರ ಪರಮೇಶ್ವರಪ್ಪ, ಮರ್ಲಹಳ್ಳಿ ರವಿಕುಮಾರ್,ತಿಪ್ಪೇಸ್ವಾಮಿ, ಕನಕ ಶಿವಮೂರ್ತಿ, ಸೂರಮ್ಮನಹಳ್ಳಿ ರಾಜಣ್ಣ, ಗುಂಡ್ಲೂರು ತಿಮ್ಮಪ್ಪ, ನಿಂಗಣ್ಣ ಸೇರಿದಂತೆ ಹಲವಾರು ರೈತ ಮುಖಂಡರುಗಳು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;