ಕರ್ನಾಟಕ ರಾಜ್ಯವ್ಯಾಪಿ ಪ್ರತಿಭಟನೆ ಅಂಗವಾಗಿ ಕಟ್ಟಡ ಕಾರ್ಮಿಕರ ಪ್ರತಿಭಟನೆ…!!!

ಕರ್ನಾಟಕ ರಾಜ್ಯವ್ಯಾಪಿ ಪ್ರತಿಭಟನೆ ಅಂಗವಾಗಿ ಕಟ್ಟಡ ಕಾರ್ಮಿಕರ ಪ್ರತಿಭಟನೆ.
ಬಳ್ಳಾರಿ. ಇಂದು ಡಿಸಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ವತಿಯಿಂದ ರಾಜ್ಯವ್ಯಾಪಿ ಪ್ರತಿಭಟನಾ ದಿನದ ಅಂಗವಾಗಿ ಪ್ರತಿಭಟನೆ ನಡೆಸಲಾಯಿತು.
ಬೇಡಿಕೆಗಳು.
1.ಕಟ್ಟಡ ಕಾರ್ಮಿಕರಿಗೆ ಗೃಹ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಸಹಾಯಧನ ನೀಡಿ.
2. ಕಟ್ಟಡ ಕಾರ್ಮಿಕರಿಗೆ ಅಡಿಗೆ ಅನಿಲ ನೀಡುವ ಕಾರ್ಯಕ್ರಮ ಈಗಲಾದರೂ ಜಾರಿ ಮಾಡಿ.
3. ಹೆರಿಗೆ ಸಹಾಯಧನವನ್ನು ಪುರುಷ ಫಲಾನುಭವಿಗಳ ಪತ್ನಿಯರಿಗೂ ವಿಸ್ತರಿಸಿ.
4. ಹತ್ತು ಸಾವಿರ ರೂಪಾಯಿ ಲಾಕ್ಡೌನ್ ಪರಿಹಾರವನ್ನು ಘೋಷಿಸಿ.
5. ವೈದ್ಯಕೀಯ ಪರಿಹಾರವನ್ನು ಶೇಕಡ 100 ರಷ್ಟು ಪಾವತಿಸಿ.
5. ಸರ್ಕಾರ ಘೋಷಿಸಿರುವ rs.3000 ಕೋವಿಡ್ ಪರಿಹಾರವನ್ನು, ನಂದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ನೀಡಿ.
6. ಉತ್ತಮ ಗುಣಮಟ್ಟದ ರೇಷನ್ ಕಿಟ್ಟನ್ನು ಇಲ್ಲ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕರಿಗೆ ಸಮರ್ಪಕವಾಗಿ ವಿತರಿಸಿ.
ಎಂಬ ಬೇಡಿಕೆಗಳನ್ನು ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಯಿತು.
ಈ ಪ್ರತಿಭಟನೆಯಲ್ಲಿ, AIUTUC, ಜಿಲ್ಲಾ ಕಾರ್ಯದರ್ಶಿ, ಕಾಮ್ರೇಡ್ ದೇವದಾಸ್. A.
CITU, ಜಿಲ್ಲಾ ಕಾರ್ಯದರ್ಶಿ ಸತ್ಯ ಬಾಬು, ಅಜ್ಜಿ ಶ್ರೀನಿವಾಸ್, ಶ್ರೀಮತಿ ಅರುಣ, ನೀಲಪ್ಪ ವಿಜಯಕುಮಾರ್, ಅಂಜಿನಿ,
ಇನ್ನು ಮುಂತಾದವರು ಭಾಗವಹಿಸಿದ್ದರು.


. ವರದಿ. ಉಪಸಂಪಾದಕರು ಎಂ.ಎಲ್.ವೆಂಕಟೇಶ್ ಬಳ್ಳಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend