ಬೆಳ್ಳಕಟ್ಟೆ ಗ್ರಾಮದ ಮಹಾಲಿಂಗಪ್ಪ 60ವರ್ಷ ಬ್ಲಾಕ್ ಫಂಗಸ್ ಕಾಯಿಲೆಯಿಂದ ಸಾವು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಬೆಳ್ಳೆ ಕಟ್ಟೆ ಗ್ರಾಮ

ಬೆಳ್ಳಕಟ್ಟೆ ಗ್ರಾಮದ ಮಹಾಲಿಂಗಪ್ಪ 60ವರ್ಷ ಬ್ಲಾಕ್ ಫಂಗಸ್ ಕಾಯಿಲೆಯಿಂದ ಸಾವು.
ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಗೆ ಬರುವ ಬೆಳ್ಳಿ ಕಟ್ಟೆ ಗ್ರಾಮದ ಮಹಾಲಿಂಗಪ್ಪ ನನ್ನು ಅನಾರೋಗ್ಯದ ಕಾರಣ ಈ ಹಿಂದೆ ಚಿತ್ರದುರ್ಗ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂ ಆರ್ ಐ ಸ್ಕ್ಯಾನಿಂಗ್ ಮಾಡಿಸಲಾಗಿತ್ತು.
ಸ್ಕ್ಯಾನಿಂಗ್ ಮಾಡಿಸಲಾಗಿ ಬ್ಲಾಕ್ ಫಂಗಸ್ ಕಾಯಿಲೆಯ ಲಕ್ಷಣಗಳು ಕಂಡು ಬಂದಿದ್ದರಿಂದ ಚಿತ್ರದುರ್ಗದ ಜಿಲ್ಲಾ ಖಾಸಗಿ ಆಸ್ಪತ್ರೆಯಿಂದ ಕೂಡ್ಲಿಗಿ ತಾಲ್ಲೂಕಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಯಿಲೆಯ ಲಕ್ಷಣಗಳು ಕಡಿಮೆಯಾಗದ ಕಾರಣ ಬಳ್ಳಾರಿ ಜಿಲ್ಲಾ ವಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಲಾಗಿತ್ತು. ಆದರೆ ಉಸಿರಾಟದ ತೊಂದರೆ ಜಾಸ್ತಿ ಆದುದರಿಂದ ಚಿಕಿತ್ಸೆ ಫಲಕಾರಿಯಾಗದೆ ಬುದುವಾರ 7:00 ಗಂಟೆಗೆ ಮಹಾಲಿಂಗಪ್ಪ ನು ಸಾವನ್ನಪ್ಪಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend