ನಾಯಕನಹಟ್ಟಿ: ಮನ್ನೆಕೋಟೆ ಗ್ರಾ.ಪಂ ವ್ಯಾಪ್ತಿಯ ಬಿಜೆಪಿ ಮಂಡಲದ ವತಿಯಿಂದ ಕುಂದು ಕೊರತೆ ಸಭೆ.!!

ಚಿತ್ರದುರ್ಗ: ನಾಯಕನಹಟ್ಟಿ ಮಂಡಲದ ಮನ್ನೆಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದುಕೊರತೆ ಸಭೆ ಕರೆಯಲಾಯಿತು. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ ಮಂಡಲದ ವತಿಯಿಂದ ಸಭೆಯಲ್ಲಿ ಅಭಿವೃದ್ಧಿ ಮತ್ತು ಸಂಘಟನಾತ್ಮಕ ವಾದ ವಿಚಾರಗಳು ಸೌಹಾರ್ದವಾಗಿ ಚರ್ಚಿಸಿ ಮುಂದಿನ ಚುನಾವಣೆಗಳಿಗೆ ನಾವು ಸಂಘಟಿತರಾಗೋಣ ಎನ್ನುವ ಒಗ್ಗಟ್ಟಿನ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಮನ್ನೆಕೋಟೆ ಗ್ರಾಮಪಂಚಾಯಿತಿಯ ಅಧ್ಯಕ್ಷರಾದ ನಾಗೇಶ್ ರವರು ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳ ಒಪ್ಪಿಕೊಂಡು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.ಈ‌ ಸಂದರ್ಭದಲ್ಲಿ ಬಿಜೆಪಿ ನಾಯಕನಹಟ್ಟಿ ಮಂಡಲ ಅಧ್ಯಕ್ಷರಾದ ಈ ರಾಮರೆಡ್ಡಿ, ಬಿ‌ ಶ್ರೀರಾಮುಲು ಆಪ್ತ ಸಹಾಯಕರಾದ ಪಾಪೇಶನಾಯಕ. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಡಿ.ಆರ್ ಬಸವರಾಜ. ಕೋಶಾಧ್ಯಕ್ಷರಾದ ಸಿ. ಬಸಣ್ಣ. ಕಾರ್ಯದರ್ಶಿಯಾದ ಎಚ್ ವಿ ಪ್ರಕಾಶ್ ರೆಡ್ಡಿ. ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಸಿ .ಬಿ .ಮೋಹನ್. ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ವಿಜಯ್. ತಳಕು ಮಹಾಶಕ್ತಿ ಕೇಂದ್ರ ಪ್ರಮುಖರಾದ ಸುರೇಶ್. ಯುವಮೋರ್ಚಾ ಉಪಾಧ್ಯಕ್ಷರುಗಳಾದ ಎಸ್ ನಾಗರಾಜ. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಜಗಳೂರ. ಪಂಚಾಯತಿ ಪ್ರಮುಖರಾದ ರವಿ. ಗ್ರಾಮ ಪಂಚಾಯತ್ ಸದಸ್ಯರುಗಳು. ಬೂತ್ ಅಧ್ಯಕ್ಷರಗಳು. ಗ್ರಾಮ ಪಂಚಾಯತಿಯ ಮುಖಂಡರುಗಳು ಭಾಗಿಯಾಗಿದ್ದರು,

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend