ನಾಯಕನಹಟ್ಟಿ: ಹಾವು ಕಚ್ಚಿ ಮೃತಪಟ್ಟ ಸುರೇಶನ ಪತ್ನಿ ಕರಿಯಮ್ಮ ನವರಿಗೆ 25000 ಸಾವಿರ ವೈಯಕ್ತಿಕ ಅನುದಾನ.!

ಚಿತ್ರದುರ್ಗ: ನಾಯಕನಹಟ್ಟಿ/ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ನಾಯಕನಹಟ್ಟಿ ಮಂಡಲ ಗೌಡಗೆರೆ ಗ್ರಾಮ ಪಂಚಾಯಿತಿಯ ಜೋಗಿಹಟ್ಟಿ ಗ್ರಾಮ ನಿವಾಸಿಯಾದ ಯಾದವ ಸಮಾಜದ ಸುರೇಶ ಎನ್ನುವರಿಗೆ ಕಳೆದ ಶನಿವಾರ ಕುರಿಮರಿಗಳಿಗೆ ಹುಲ್ಲು ಹಾಕಲು ಕಣಕ್ಕೆ ಹೋದಾಗ ಆಕಸ್ಮಿಕವಾಗಿ ಹಾವು ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ವಿಷಯ ತಿಳಿದು ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಬಿ ಶ್ರೀರಾಮುಲು ರವರು ವೈಯಕ್ತಿಕವಾಗಿ ಸುರೇಶನಪತ್ನಿಯಾದ ಕರಿಯಮ್ಮ ನವರಿಗೆ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ನೀಡಲು ತಿಳಿಸಿದರು 25000 ಹಣ ನೀಡಿ ಸಾಂತ್ವನ ಹೇಳಿ ಸದಾ ನಿಮ್ಮ ಕಷ್ಟಕ್ಕೆ ನಾವು ನಿಮ್ಮ ಜೊತೆ ಇರುತ್ತೇವೆ ಎನ್ನುವ ಭರವಸೆ ನೀಡಿದರು. ಹಾಗೂ ಸರ್ಕಾರ ದಿಂದ ಬರುವ ಸೌಲಭ್ಯವನ್ನು ಶೀಘ್ರ ತಲುಪಿಸಲು ಸೂಚಿಸಲಾಯಿತು, ಈ ಸಂದರ್ಭದಲ್ಲಿ ಬಿಜೆಪಿ ನಾಯಕನಹಟ್ಟಿ ಮಂಡಲ ಅಧ್ಯಕ್ಷರಾದ ಈ ರಾಮರೆಡ್ಡಿ, ಬಿ ಶ್ರೀರಾಮುಲು ಆಪ್ತ ಸಹಾಯಕರಾದ ಪಾಪೇಶನಾಯಕ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಡಿ ಆರ್ ಬಸವರಾಜ, ಬೆಂಕಿ ಗೋವಿಂದಪ್ಪ, ನಗರ ಘಟಕ ಅಧ್ಯಕ್ಷರಾದ ಎನ್ ಮಹಾಂತಣ್ಣ, ಜಿಲ್ಲಾ ಎಸ್ ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಪಿ ಶಿವಣ್ಣ, ಯುವ ಮೋರ್ಚಾ ಉಪಾಧ್ಯಕ್ಷರಾದ ಎಸ್ ನಾಗರಾಜ, ಸಾಮಾಜಿಕ ಜಾಲತಾಣ ಸಂಚಾಲಕರಾದ ಕೆ ಟಿ ಸ್ವಾಮಿ, ಗ್ರಾಮ ಪಂಚಾಯಿತಿಯ ಸದಸ್ಯರುಗಳು, ಗ್ರಾಮದ ಮುಖಂಡರುಗಳು ಬಿಜೆಪಿ ಕಾರ್ಯಕರ್ತರು ಮುಂತಾದವರು ಇದ್ದರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend