ಸರ್ಕಾರಗಳ ಜನ ವಿರೋಧಿ ನೀತಿ ಹಿಂಪಡೆಯುವಂತೆ ಜೆಡಿಎಸ್ ಆಗ್ರಹ…!!!

ವರದಿ ಜೂನ್ 24 ಕೂಡ್ಲಿಗಿ

ಸರ್ಕಾರಗಳ ಜನ ವಿರೋಧಿ ನೀತಿ ಹಿಂಪಡೆಯುವಂತೆ ಜೆಡಿಎಸ್ ಆಗ್ರಹ-

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಜೆಡಿಎಸ್ ಘಟಕದಿಂದ,ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳ ಜನ ವಿರೋಧಿ ನೀತಿಯನ್ನ ಹಿಂಪಡೆಯುವಂತೆ ಆಗ್ರಹಿ ಸಿ ಕ್ರಮಕ್ಕಾಗಿ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಮಾಡಲಾಗಿದೆ.ಕೂಡ್ಲಿಗಿ ತಾಲೂಕಿನ ಜಾತ್ಯಾತೀತ ಜನತಾದಳದಿಂದ, ವಿವಿದ ಜನಪರ ಹಕ್ಕೊತ್ತಾಯ ಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಲಾಕ್ ಡೌನ್ ನಿಂದಾಗಿ ಕಾರ್ಮಿಕರು,ಅಸಂಘಟಿತ ಕಾರ್ಮಿಕರು ಬೀದಿಬದಿ ವ್ಯಾಪಾರಿಗಳು,ರೈತ ಕಾರ್ಮಿಕರ ಬದುಕು ದುಸ್ಥರವಾಗಿದ್ದು.ಅವರಿಗೆ ಸೂಕ್ತಿರೀತಿಯ ಪರಿಹಾರ ಮಂಜೂರು ಮಾಡಬೇಕು,ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿಂಪಡೆಯಬೇಕು,ಕೋರೋಮಾದಿಂದ ಮೃತರಾದ ಕಾರ್ಮಿಕರಿಗೆ ರೈತರ ಕುಟುಂಬಕ್ಕೆ 5ಲಕ್ಷ ರೂ ಪರಿಹಾರ ನೀಡಬೇಕು.ಆಹಾರ ಸಾಮಾಗ್ರಿಗಳ ಬೆಲೆ ಕಡಿಮೆ ಮಾಡಬೇಕು,ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಕಲ್ಪಿಸಬೇಕು,ರೈತರಿಗೆ ಸೂಕ್ತ ಮಾರುಕಟ್ಟೆಗಳ ವ್ಯವಸ್ತೆ ಮಾಡಬೇಕು,ಲಾಕ ಡೌನ್ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕು ಸೇರಿದಂತೆ.ವಿವಿದ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಜೆಡಿಎಸ್ ಪದಾಧಿಕಾರಿಗಳು,ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಒತ್ತಾಯಿಸಲಾಗಿದೆ.ಜೆಡಿಎಸ್ ರಾಜ್ಯಕಾರ್ಯದರ್ಶಿ ಎನ್.ಎಮ್.ನೂರ್ ಅಹಮದ್ ಹಾಗೂ ತಾಲೂಕು ಅಧ್ಯಕ್ಷ ಕಾರಪ್ ನೇತೃತ್ವದಲ್ಲಿ ಕಾರ್ಯಕರ್ತರು ಹಕ್ಕೋತ್ತಾಯದ ಪತ್ರವನ್ನು ತಹಶಿಲ್ದಾರರಾದ ಟಿ.ಜಗದೀಶ ರಿಗೆ ನೀಡಿದರು.ಪಪಂ ಸದಸ್ಯರಾದ ಕಾಲ್ಚೆಟ್ಟಿಈಶಪ್ಪ,ಸಿರಿಬಿ ಮಂಜುನಾಥ,ತಾಳಸ ವೆಂಕಟೇಶ್,ಪೂರಾನಾಯ್ಕ,ಸೇರಿದಂತೆ ಬಿ.ಕೆ.ರಾಘವೇಂದ್ರ,ಚಂದ್ರಪ್ಪ,ಸಿದ್ದಪ್ಪ,ಮಾಳ್ಗಿ ರಾಘವೇಂದ್ರ,ಗುಪ್ಪಾಲ ಅಜಯ್,ನಜೀರ್ ಸಾಬ್,ರಾಜು,ಶ್ರೀನಿವಾಸ್,ದಿನಕರ,ಹೊನ್ನೂರ್ ಭಾಷಾ,ವಿನೋದ ಕಲಾಲ್,ಸಿದ್ದಪ್ಪ ಯಾದವ,ಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend