ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಇಂದು (ಜೂ,11) ಬಿಜೆಪಿ ಯುವ ನಾಯಕ ಶ್ರಿ ಎನ್.ವೈ ಚೇತನ್ ರವರ ನೇತೃತ್ವದಲ್ಲಿ ಇಂದು ರಾಂಪುರ ಗ್ರಾಮದಲ್ಲಿ 25 ಮಂಗಳ ಮುಖಿಯರಿಗೆ ದಿನಸಿ ಕಿಟ್ ಹಾಗೂ ಸೀರೆ, ಬಳೆಗಳು, ವಿತರಿಸಲಾಯಿತು. ಜೊತೆಗೆ ಕೋವಿಡ್ ಲಸಿಕೆ ಹಾಕಿಸಿ ಕೊಳ್ಳಬೇಕು ಎಂದು ಕೋರಲಾಯಿತು. ಕೋರೋನ ಮಹಾಮಾರಿ ಬಂದು ಇಂದು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ ನಿಮ್ಮ ಸುತ್ತಮುತ್ತಲಿನಲ್ಲಿ ಮಂಗಳಮುಖಿಯರು ಕಂಡರೆ ದಯವಿಟ್ಟು ನಿಮ್ಮ ಕೈಯಲ್ಲಾದ ಸಹಾಯ ಮಾಡಿ ಇಂತಹ ಸಂದರ್ಬದಲ್ಲಿ ಮಾನವೀಯತೆ ಮೇರೆಯೋಣ. ಈ ಸಂದರ್ಬದಲ್ಲಿ ಮೊಹಮ್ಮದ್, ಲೋಹಿತ್, ಶಾಫಿ, ತಿಪ್ಪೇಶ್, ತಾಜ್ ಇತರರು ಉಪಸ್ಥಿತರಿದ್ದರು.

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
