ಕೂಡ್ಲಿಗಿ ಪಿಎಸ್ಐ ಡಿ, ಸುರೇಶ್ ನಾಯ್ಕ್

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ವಿಜಯನಗರ ಜಿಲ್ಲೆ ಕೂಡ್ಲಿಗಿ ಠಾಣೆಗೆ ಪಿಎಸ್ಐ ಆಗಿ,ಡಿ.ಸುರೇಶ ಇವರನ್ನು ಪೊಲೀಸ್ ಮಹಾ ನಿರೀಕ್ಷಕರು ನೇಮಿಸಿದ್ದಾರೆ,ಅವರು ತಮ್ಮ ವರಿಷ್ಠಾದಿಕಾರಿಗಳ ಆದೇಶದನ್ವಯ ಕೂಡ್ಲಿಗಿ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಈ ಹಿಂದೆ ಇದ್ದ ಕೂಡ್ಲಿಗಿ ಪಿಎಸ್ಐ ತಿಮ್ಮಣ್ಣ ಚಾಮನೂರು ಜನವರಿ 27ರಂದು ಆದೇಶಿಸಿದ ವರ್ಗಾವಣೆ ಪಟ್ಟಿಯಲ್ಲಿದ್ದು,ರಾಜ್ಯ ಗುಪ್ತವಾರ್ತೆ ಬಳ್ಳಾರಿಗೆ ವರ್ಗಾವಣೆ ಮಾಡಿ ಸೂಚಿಸಲಾಗಿತ್ತು.ಈ ಹಿನ್ನಲೆಯಲ್ಲಿ ಕೂಡ್ಲಿಗಿ ಪಿಎಸ್ಐ ತೆರವಾಗಿದ್ದ ಸ್ಥಾನಕ್ಕೆ,ಈಗ ಕೊಪ್ಪಳ ಜಿಲ್ಲೆಯ ಕನಕಗಿರಿ ಪಿಎಸ್ಐ ಆಗಿದ್ದ ಡಿ.ಸುರೇಶರವರನ್ನು ನೇಮಿಸಿ ಇಲಾಖಾಧಿಕಾರಿಗಳು ವರ್ಗಾವಣೆ ಮಾಡಿ ಆದೇಸಿದ್ದಾರೆ.ಇವರು ಕೂಡ್ಲಿಗಿ ಹಲವು ವರ್ಷಗಳ ಹಿಂದೆ ಕಾನಾಹೊಸಹಳ್ಳಿ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ಥವ್ಯ ನಿರ್ವಹಿಸಿದ್ದರು,ಇಲ್ಲಿಯವರೆಗೂ ಕನಕಗಿರಿಯಲ್ಲಿದ್ದ ಇವರು ಈಗ ಕೂಡ್ಲಿಗಿ ಠಾಣೆಗೆ ವರ್ಗವಾಗಿದ್ದಾರೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend