ಸಂವಿಧಾನ ಉಳಿಸಿ-ದೇಶಉಳಿಸಿ ಎಂಬ ಜಾಗೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿ…!!!

ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ

ಸಂವಿಧಾನ ಉಳಿಸಿ-ದೇಶ ಉಳಿಸಿ
ಬಳ್ಳಾರಿ, ನಗರದಲ್ಲಿ ಮಹಾತ್ಮಾ ಜ್ಯೋತಿಬಾ
ಫುಲೆ ,ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿರುವ
ಸಂವಿಧಾನ ಉಳಿಸಿ-ದೇಶಉಳಿಸಿ ಎಂಬ ಜಾಗೃತಿಕ
ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಭೀಮವಾದ ಹಾಗು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ – ಕರ್ನಾಟಕ. ಬಳ್ಳಾರಿ ಜಿಲ್ಲಾ ಸಮಿತಿಯಿಂದ ಹಮ್ಮಿಕೊಳ್ಳಲಾಯಿತು.

ಭಾರತದ ಸಾಮಾಜಿಕ ಕ್ರಾಂತಿಯ ಪಿತಾಮಹ ಮಹಾತ್ಮಾ ಜ್ಯೋತಿಬಾ ಫುಲೆ ಜಯಂತಿ ಪ್ರಯುಕ್ತ ಸಂವಿಧಾನ ಉಳಿಸಿ- ದೇಶ ಉಳಿಸಿ, ಬೃಹತ್ ಜಾಗೃತಿಕ ಸಮಾವೇಶ ನಗರದ

ರಾಘವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು,ಪದ್ಮಶ್ರೀ
ಮಾತಾ ಮಂಜಮ್ಮ ಜೋಗತಿ ಅವರು ನೆರವೇರಿಸಿದರು.ಅವರು ಮಾತನಾಡುತ್ತಾ,”ನಾನು ದಲಿತಳು ಅಲ್ಲದಿದ್ದರೂ
ನನ್ನ ಕಲೆ ದಲಿತಕಲೆ ಯಾಗಿದೆ.ಅಂದು ಡಾಕ್ಟರ್
ಅಂಬೇಡ್ಕರ್ ರವರು ಸಂವಿಧಾನದಲ್ಲಿ ಉಲ್ಲೇಖಿಸ
ದಿದ್ದರೆ, ಇಂದು ದಲಿತಕಲೆಗೆ ಪದ್ಮಶ್ರೀ ಪ್ರಶಸ್ತಿ ಸಿಗು
ತ್ತಿರಲಿಲ್ಲ ಎಂದು ನುಡಿದರು.

ಕಾರ್ಯಕರ್ಮದ ಅಧ್ಯಕ್ಷತೆಯನ್ನು ,ಆಯುಶ್ಮಾನ್ ಡಾಕ್ಟರ್.ಆರ್.ಮೋಹನ್ ರಾಜ್ ಅವರು ವಹಿಸಿದ್ದರು.
ವಿಶೇಷ ಉಪಸ್ಥಿತರು:ಆಯುಶಮಾನ ಡಾಕ್ಟರ್.ಎನ್. ಚಿನ್ನಸ್ವಾಮಿ
ಸೋಸುಲೇ ಅವರು.ಪ್ರಾಧ್ಯಾಪಕರು.ಕನ್ನಡ ವಿಶ್ವವಿದ್ಯಾಲಯ.ಹಂಪಿ.
ಆಯುಶ್ಮಾತಿ,ಎನ್.ಡಿ.ವೆಂಕಮ್ಮ.
ರಾಜ್ಯಉಪಾಧ್ಯಕ್ಷರು.ಭಾರತೀಯ ದಲಿತ ಸಾಹಿತ್ಯ
ಅಕಾಡೆಮಿ.ದೆಹಲಿ.
ಆಯುಶ್ಮಾತಿ ಚಿ.ಪದ್ಮಾವತಿ.
ರಾಜ್ಯಾಧ್ಯಕ್ಷರು.ಸಮಸಮಾಜ ನಿರ್ಮಾಣ ಸಂಸ್ಥೆ.
ಸ್ವಾಗತ:ಸೋಮಪ್ಪ ಚಲುವಾದಿ.
ವಂದನಾರ್ಪಣೆ: ಬೈಲೂರು ಮಲ್ಲಿಕಾರ್ಜುನ.
ಜಿಲ್ಲಾ ಸಂಚಾಲಕರು.ಬಳ್ಳಾರಿ.
ನಿರೂಪಣೆ,ಡಾಕ್ಟರ್.ಆರ್.ಈರಮ್ಮ.ಜಿಲ್ಲಾಧ್ಯಕ್ಷರು
ಭಾ.ಮಾ.ಹ. ಹೋರಾಟ ಸಮಿತಿ.ಬಳ್ಳಾರಿ.
ಮುನಿರಾಜು,ಸಂಶೋಧನಾ ವಿದ್ಯಾರ್ಥಿ,ಕನ್ನಡ
ವಿಶ್ವವಿದ್ಯಾಲಯ.ಹಂಪಿ.
ಈ ಸಮಾವೇಶಕ್ಕೆ ಅನೇಕ
ಹಿರಿಯ ಮುಖಂಡರು,ಕಾರ್ಯಕರ್ತರು ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend