ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರ..

ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ನಾಡ ಕಛೇರಿಯಲ್ಲಿ ಸರ್ವಜ್ಞ ಜಯಂತೋತ್ಸವ ಕಾರ್ಯಕ್ರಮ
ಹೊಸಹಳ್ಳಿ ನಾಡಕಛೇರಿ ಯಲ್ಲಿ ‘’ಸರ್ವಜ್ಞ ‘’ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತಾನಾಡಿ ಉಪತಹಶೀಲ್ದಾರರು ಚಂದ್ರ ಮೋಹನ್ ತಂದೆ ತಾಯಿಗಳಿಂದ ಅಗಲಿ ಪುಣ್ಯಕ್ಷೇತ್ರಗಳನ್ನೂ ಗುರುಮಠಗಳನ್ನೂ ಭೇಟಿ ಮಾಡಿ ಜ್ಞಾನಾರ್ಜನೆ ಮಾಡಿದರು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದರು.. ಅವರು ಜನಪ್ರಿಯ ವಚನಗಳು ಅವನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿದ್ದಾರೆ.. ಅವನು ರಚಿಸಿದ ತ್ರಿಪದಿಗಳಿಗೆ ಲೆಕ್ಕವಿಲ್ಲ. ಅವರು ಆಶುಕವಿಯಾದ್ದರಿಂದ, ಎಷ್ಟೋ ಕವನಗಳು ಅವನ ಸ್ಮೃತಿಯಲ್ಲೇ ಉಳಿಸಿದ್ದಾರೆ ಎಂದು ನುಡಿದರು.
ಕುಂಬಾರ್ ಬಸವರಾಜ ಮಾತನಾಡಿ
ಸರ್ವಜ್ಞನೆಂಬುವನು ಗರ್ವದಿಂದಾದವನೇ?
ಸರ್ವರೊಳು ಒಂದೊಂದು ನುಡಿಗಲಿತು
ವಿದ್ಯೆಯ ಪರ್ವತವೆ ಆದ ಸರ್ವಜ್ಞ.
ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು
ಗೋರ್ಕಲ್ಲಮೇಲೆ ಮಳೆಗರೆದರೆ
ಆಕಲ್ಲು ನೀರುಕುಡಿವುದೆ ಸರ್ವಜ್ಞ ಎಂದು ನುಡಿದರು.

ನಾಡಕಛೇರಿ ಅಪರೇಟರ್ ಮಂಜುನಾಥ ಅಗ್ರಹಾರ , ಇಧೇ ಸಂದರ್ಭದಲ್ಲಿ ಮುಖಂಡರಾದ ಪೋಟೋನಾಗರಾಜ ಕುಂಬಾರ ಹನುಮಂತಪ್ಪ,ಪವನ್ ಹೊಸಹಳ್ಳಿ ವಿರುಪಾಕ್ಷಿ ಇಮಡಾಪುರ.ಮನು.ಅಜ್ಜಯ್ಯ ಸಚಿನ್ ಇಮಡಾಪುರ ಹಾಗೂ ಸಾರ್ವಜನಿಕರು ಉಪಸ್ಧಿತರಿದ್ದರು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
