ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:”ಟಗರು”ಕಳ್ಳರದ್ದೇ “ಪೊಗರು”*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಇತ್ತೀಚೆಗೆ ಟಗರು ಕಳ್ಳರ ಪೊಗರು ಪ್ರತಿಧ್ವನಿಸುತ್ತಿದೆ ಎಂಬುದು ನಾಗರೀಕರ ಅಭಿಪ್ರಾಯವಾಗಿದೆ.ಇದಕ್ಕೆ ಹಲವು ನಿದರ್ಶನಗಳಿದ್ದು ತಾಲೂಕಿನ ಬಡಲಡಕು ಗ್ರಾಮದಲ್ಲಿ ಮನೆಮಂದೆ ಕಟ್ಟಿದ್ದ 3ಟಗರುಗಳನ್ನು, ಕಳ್ಳರು ಕದ್ದಿದ್ದಾರೆ ಎನ್ನಲಾಗಿದೆ.ಸಂಬಂಧಿಸಿದಂತೆ ಟಗರುಗಳ ಮಾಲೀಕರು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರನ್ನಿತ್ತಿದ್ದಾರೆ, ಬಡೆಲಡಕು ಗ್ರಾಪಂ ಮಾಜಿ ಅಧ್ಯಕ್ಷ ಯು.ಸತೀಶ್ ಎಂಬುವವರಿಗೆ ಸೇರಿದ 3ಟಗರುಗಳು ಕಳುವಾಗಿವೆ ಎಂದು ತಿಳಿದುಬಂದಿದೆ. ಇವರು ತಮ್ಮ ಮನೆಯ ಅಂಗಳದಲ್ಲಿ ಕಟ್ಟಿದ್ದ ದುಭಾರಿ ಬೆಲೆಯ ಟಗರುಗಳನ್ನು ಕಳ್ಳರು ಕದಿದ್ದಾರೆ ಎಂದು ಅವರು ದೂರಿದ್ದಾರೆ,30ಸಾವಿರ ಬೆಲೆ ಬಾಳು 3ಟಗರುಗಳನ್ನು ಕಳ್ಳರು ಕದ್ದಿರುವುದಾಗಿ ತಿಳಿದುಬಂದಿದೆ.ಕೂಡ್ಲಿಗಿ ಪಟ್ಟಣದಲ್ಲಿಯೂ ಹಲವು ದಿನಗಳ ಹಿಂದೆ ದುಭಾರಿ ಬೆಲೆಯ ಟಗರು ಕಳುವಾಗಿದೆ ಎಂದು ತಿಳಿದು ಬಂದಿದೆ, ಪಟ್ಟಣದ ಶ್ರೀವೆಂಕಟೇಶ್ವರ ದೇವಸ್ಥಾನದ ಹತ್ತಿರ ವಾಸವಿರುವ ವ್ಯಕ್ತಿಯೋರ್ವರಿಗೆ ಸೇರಿದ ಟಗರು ಕಾಣೆಯಾಗಿದೆ ಎಂದು ತಿಳಿದುಬಂದಿದೆ.ಕೆಲ ದಿನಗಳ ಹಿಂದೆ ಘಟನೆ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ,ಕೂಡ್ಲಿಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಟಗರುಗಳು ಹಾಗೂ ದನಗಳ್ಳರ ಪೊಗರು ಕೆಲ ದಿನಗಳಿಂದ ಪ್ರತಿಧ್ವನಿಸುತ್ತಿದೆ.ಮನೆ ಅಂಗಳದಲ್ಲಿ ಕಟ್ಟಿರುವ ದನಗಳನ್ನ ಹಾಗೂ ಅಂಗಳದಲ್ಲಿರಿಸಿದ್ದ ಬೈಕ್ ಕಳ್ಳತನವಾದ ಘಟನೆಗಳು, ಪಟ್ಟಣದಲ್ಲಿ ಹಲವು ದಿನಗಳಿಂದ ಜರುಗಿರುವುತ್ತಿರುವುದಾಗಿ ತಿಳಿದುಬಂದದೆ.ಕೆಲವು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ, ಹಲವು ಪ್ರಕರಣಗಳು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.ಕಾರಣ ದೂರು ನೀಡುವಲ್ಲಿ ಮಾಲೀಕರ ಹಿಂಜರಿಕೆತನವೇ ಕಾರಣವಾಗಿದೆ.ಕಳ್ಳರ ಹಾವಳಿಯಿಂದಾಗಿ ರೈತರು ಹಾಗೂ ಸಾರ್ವಜನಿಕರು ನಿದ್ದೆಗೆಡುವಂತಾಗಿದೆ ಎನ್ನುತ್ತಾರೆ ನಾಗರೀಕರು.ಕೆಲ ದಿನಗಳಿಂದ ಹೆಚ್ಚಿರುವ ಕಳ್ಳರ ಹಾವಳಿಯಿಂದಾಗಿ ನೆಮ್ಮದಿ ಕಾಣೆಯಾಗಿದೆ, ಕಾರಣ ಪೊಲೀಸ್ ಇಲಾಖಾಧಿಕಾರಿಗಳು ಶೀಘ್ರವೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು. ಹಿರಿಯ ನಾಗರಿಕರು ರೈತರು ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಈ ಮೂಲಕ ಪೊಲೀಸ್ ಇಲಾಖಾ ಉನ್ನತಾಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
