ತಾಯಕನಹಳ್ಳಿ: ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ವಿಜೃಂಭಣೆ..!!

ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ

ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ತಾಯಕನಹಳ್ಳಿ ಗ್ರಾಮದಲ್ಲಿ ಇಂದು 15-02-2021ರ ಶ್ರೀ ವೀರಾಂಜನೇಯ ಸ್ವಾಮಿಯ ರಥೋತ್ಸವ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಉತ್ಸವ ಮೂರ್ತಿಯನ್ನಿಟ್ಟು ಅಲ್ಲಿ ವಿಶೇಷ ಪೂಜಾ ಕೈಂಕರ್ಯ, ಅಭಿಷೇಕಗಳು ನಡೆಸಿದರು. ರಥೋತ್ಸವಕ್ಕೂ ಮುನ್ನ ಮಂದಿರದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ವೀರಾಂಜನೇಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಹೊತ್ತು ತಂದು ರಥದ ಸುತ್ತ ಪ್ರದಕ್ಷಿಣೆ ಹಾಕಿ ನಂತರ ಮಧ್ಯಾಹ್ನ 5.ಘಂಟೆ ರ ವೇಳೆಗೆ ಶ್ರೀ ವೀರಾಂಜನೇಯ ಉತ್ಸವ ಮೂರ್ತಿಯನ್ನು ರಥಕ್ಕೆ ಏರಿಸಲಾಯಿತು. ನಂತರ ಸಾವಿರಾರು ಭಕ್ತರು ಸ್ವಾಮಿಗೆ ಜೈಕಾರ ಉತ್ಸವ ಮೂರ್ತಿಯನ್ನಿಟ್ಟು ಅಲ್ಲಿ ವಿಶೇಷ ಪೂಜಾ ಕೈಂಕರ್ಯ, ಅಭಿಷೇಕಗಳು ನಡೆಸಿದರು. ರಥೋತ್ಸವಕ್ಕೂ ಮುನ್ನ ಮಂದಿರದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ವೀರಾಂಜನೇಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಹೊತ್ತು ತಂದು ರಥದ ಸುತ್ತ ಪ್ರದಕ್ಷಿಣೆ ಹಾಕಿ ನಂತರ ಸಂಜೆ 5. ಘಂಟೆ ವೇಳೆಗೆ ಶ್ರೀ ವೀರಾಂಜನೇಯ ಉತ್ಸವ ಮೂರ್ತಿಯನ್ನು ರಥಕ್ಕೆ ಏರಿಸಲಾಯಿತು. ನಂತರ ಸಾವಿರಾರು ಭಕ್ತರು ಸ್ವಾಮಿಗೆ ಜೈಕಾರ ಹಾಕುತ್ತಾ ರಥವನ್ನು ಪ್ರಮುಖ ಬೀದಿಯಲ್ಲಿ ಸುತ್ತ ಒಂದು ಸುತ್ತು ಎಳೆದು ತಂದು ಸ್ವಸ್ಥಾನಕ್ಕೆ ನಿಲ್ಲಿಸಿದರು. ರಥೋತ್ಸವದ ವೇಳೆ ನವ ದಂಪತಿಗಳು ಸೇರಿದಂತೆ ನೆರೆದಿದ್ದ ಭಕ್ತರು ಹಣ್ಣು ಜವನ ಎಸೆದು ಭಕ್ತಿ ಭಾವ ಮೆರೆದರು. ಸೇರಿದಂತೆ ನೆರೆದಿದ್ದ ಭಕ್ತರು ಹಣ್ಣು ಜವನ ಎಸೆದು ಭಕ್ತಿ ಭಾವ ಮೆರೆದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸದಸ್ಯರು ಜಿ.ಪಾಪನಾಯಕ, ಹಾಗೂ ಮಾಜಿ ತಾ.ಪಂ ಸದಸ್ಯರು ಎಚ್.ಮಹಂತಪ್ಪ, ಮಾಜಿ ಗ್ರಾ ಪಂ ಸದಸ್ಯರು ಈ. ಮಲ್ಲಿಕಾರ್ಜುನಪ್ಪ, ಗ್ರಾ ಪಂ ಉಪಾಧ್ಯಕ್ಷರು ಕೆ.ಎನ್.ರಾಘವೇಂದ್ರ, ಕನಕವಿಧ್ಯಾಕೇಂದ್ರ ಕಾಯ೯ದಶಿ೯ ಬಿ.ಟಿ.ಮಂಜಣ್ಣ , ಕೋಲ್ಕಾರ್ ಪ್ರಕಾಶ್, ಕೆ.ವೆಂಕಟೇಶ್ ಶಿಕ್ಷಕರು, ಎಂ.ನಾಗರಾಜ ಊರಿನ ಗ್ರಾಮಸ್ಥರು ಸುತ್ತ ಮುತ್ತಲಿನ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend