ಅಪರಿಚಿತ ವಾಹನ ಡಿಕ್ಕಿ ಬೈಕ್ ಸವಾರ ಸಾವು…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ ಕೆಕೆಹಟ್ಟಿ: ಅಪರಿಚಿತ ವಾಹನ ಬೈಕ್ ಡಿಕ್ಕಿ- ಯುವಕ ಮೃತ*<>ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿ,ಕೆರೆಕಾವಲರಹಟ್ಟಿ ಗ್ರಾಮದ ಯುವಕ ನೋರ್ವ ವಾಹನ ಹರಿದು ಮೃತಪಟ್ಟಿರುವ ಘಟನೆ ಫೆ16ರಂದು ಬೆಳಿಗಿನ ಜಾವ ಜರುಗಿದೆ.ಕೆಕೆ ಹಟ್ಟಿ ಮಾರೇಶ(18)ಮೃತ ದುರ್ಧೈವಿಯಾಗಿದ್ದಾನೆ.ಈತನು ತನ್ನ ಗ್ರಾಮದಿಂದ ಎಂದಿನಂತೆ ಕೂಡ್ಲಿಗಿ ಪಟ್ಟಣಕ್ಕೆ ನಂದಿನಿ ಹಾಲು ತರಲು ಬೈಕ್ ನಲ್ಲಿ ತೆರಳುತಿದ್ದಾನೆ.ಮಾರ್ಗ
ಮಧ್ಯ ಅಪರಿಚಿತ ವಾಹನ ಬೈಕ್ ನಡುವೆ ಡಿಕ್ಕಿ ಹೊಡೆದಿದ್ದು,ಕೆಳಗೆ ಬಿದ್ದ ಮಾರೇಶನ ಕಾಲ ಮೇಲೆ ವಾಹನ ಹರಿದು ಹೋಗಿದೆ. ಕೂಡಲೇ ಡಿಕ್ಕಿ ಹೊಡೆದ ವಾಹನ ಪರಾರಿಯಾಗಿ ಎಂದು ತಿಳಿದು ಬಂದಿದೆ, ಘಟನೆಯನ್ನ ಪರಿಶೀಲಿಸಲಾಗಿ ಲಾರಿಯೇ ಡಿಕ್ಕಿ ಹೊಡೆದಿರಬಹುದೆಂದು ಸಂಶಯ ವ್ಯಕ್ತವಾಗಿದೆ.ಡಿಕ್ಕಿ ಹೊಡೆದ ವಾಹನ ಮಾರೇಶನ ತೊಡೆಯ ಮೇಲೆ ಹರಿದ ಪರಿಣಾಮ, ಮಾರೇಶನ ಕಾಲು ಸಂಪೂರ್ಣ ನಜ್ಜು ಗುಜ್ಜಾಗಿದೆ.ತೀವ್ರ ಗಾಯದಿಂದ ಅತೀವ ರಕ್ತ ಸಾರ್ವಾವಾಗಿ ಗಂಭೀರವಾಗಿ ಗಾಯಗೊಂಡಿದ್ದಾನೆ,ಸುದ್ದಿ ತಿಳಿದ ಕೂಡ್ಲಿಗಿ108ಸಿಬ್ಬಂದಿ ಪೈಲಟ್ ಕಾಂತನಾಯ್ಕ ಹಾಗೂ ಇಎಮ್ಟಿ
ಮಾರೇಶ ಸ್ಥಳಕ್ಕಾಗಮಿಸಿದ್ದಾರೆ. ಪೋಷಕರ ಸಲಹೆಯಂತೆ ಗಾಯಾಳುವನ್ನು ಚಿಕಿತ್ಸೆಗಾಗಿ ಹೊಸಪೇಟೆಗೆ ಕರೆದೊಯ್ಯುತ್ತಿದ್ದು,ಮಾರ್ಗ ಮದ್ಯದಲ್ಲಿಯೇ ಗಾಯಾಳು ಮಾರೇಶ ಮೃತಪಟ್ಟಿದ್ದಾನೆ. ಘಟನೆ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದ್ದು,ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬೆಟ್ಟಿ ನೀಡಿ ಪರಿಶೀಲಿಸಿದ್ದಾರೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend