ಮೊಳಕಾಲ್ಮುರು: ನಾಯಕ ಸಮನಾರ್ಥಕ ‘ಮ್ಯಾಸನಾಯಕ’ ಪದ ಒಬಿಸಿ ಪಟ್ಟಿಗೆ ಸೇರ್ಪಡೆ ಖಂಡಿಸಿ ಪ್ರತಿಭಟನೆ.!!

 

ಚಿತ್ರದುರ್ಗ: ಮೊಳಕಾಲ್ಮೂರು/ ನಾಯಕ ಸಮುದಾಯದ ಸಮಾನಾರ್ಥಕ ಪದವಾಗಿರುವ ಮ್ಯಾಸ ನಾಯಕ ಪದವನ್ನು ಓಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಿರುವುದನ್ನು ರದ್ದು ಪಡಿಸಿ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ತಾಲೂಕು ಮ್ಯಾಸ ಬೇಡ (ಮ್ಯಾಸನಾಯಕ) ಬುಡಕಟ್ಟು ಸಂಸ್ಕೃತಿಯ ಸಂರಕ್ಷಣಾ ಸಮಿತಿಯ ಕಾರ್ಯಕರ್ತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಡಾ| ಗೆರೆಗಲ್ ಪಾಪಯ್ಯ ಕರ್ನಾಟಕ, ಆಂಧ್ರ ಗಡಿ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ನಾಲ್ಕಡ ಬುಡಕಟ್ಟಿಗೆ ಸೇರಿದ ನಾಯ್ಕ /ನಾಯಕ ಪಂಗಡದವರಾದ ಮಾಸ ನಾಯಕ/ ಮ್ಯಾಸ ಬೇಡರು ನೆಲೆಸಿರುತ್ತೇವೆ. ರಾಜ್ಯದಲ್ಲಿ ಮ್ಯಾಸ
ಬೇಡ/ ಮ್ಯಾಸ ನಾಯಕ ಬುಡಕಟ್ಟು ಜನಾಂಗವು ವಿಶಿಷ್ಟವಾದ ಬುಡಕಟ್ಟು ಸಂಸ್ಕೃತಿಯನ್ನು ಹೊಂದಿದ ಸಮುದಾಯವಾಗಿದೆ.

ಮ್ಯಾಸಬೇಡ/ ಮ್ಯಾಸನಾಯಕರು ಮೂಲತಃ ಗೊಮಡವಾನ ಪ್ರದೇಶದ ಬುಡಕಟ್ಟುಗಳಲ್ಲಿ ಒಂದಾದ ಭೀಲ್ ಬುಡಕಟ್ಟು ಜನಾಂಗದಿಂದ ಬೇರ್ಪಟ್ಟ ನಾಯ್ಕಡ ಬುಡಕಟ್ಟಿಗೆ ಸೇರಿರುತ್ತೇವೆ. ಭಿಲ್ ಬುಡಕಟ್ಟು ಜನರ ಮೂಲಕ ಈಗಿನ ಭಿಲಾಯ್ ನಗರದ ಅಸು-ಪಾಸಿನ ಪ್ರದೇಶವಾಗಿದೆ. 1972ರಲ್ಲಿ ನೇಮಕವಾದ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾದ ಎಲ್.ಜಿ. ಹಾವನೂರುರವರು 1975ರಲ್ಲಿ ನೀಡಿದ ವರದಿಯಲ್ಲಿ ಚಾಣಾಕ್ಷತೆಯಿಂದ ಮ್ಯಾಸ ಎಂಬ ಪದವನ್ನು ಮುಚ್ಚಿಟ್ಟು ನಾಯಕ, ನಾಯ್ಕ, ಬೇಡ ಎಂದು ವರದಿಯನ್ನು ಸಲ್ಲಿಸುತ್ತಾರೆ. ಈ ವರದಿಯಲ್ಲಿ ಮ್ಯಾಸ ಪದವನ್ನು ಮರೆಮಾಚಿ ಮ್ಯಾಸ ನಾಯಕರಿಗೆ ಕತ್ತು ಕೊಯ್ಯುವ ಕೆಲಸವನ್ನು ಎಲ್.ಜಿ. ಹಾವನೂರು ಮಾಡಿರುತ್ತಾರೆ. ಕಾರ್ಯದರ್ಶಿ ದೊಡ್ಡಮನೆ ಪ್ರಸಾದ ಮಾತನಾಡಿ ಪ್ರವರ್ಗ ಪಟ್ಟಿಯಲ್ಲಿ ಮ್ಯಾಸ ನಾಯಕ ಸೇರ್ಪಡೆ ಮಾಡಲು ಮನವಿಯನ್ನು ನೀಡಿದವರು ಯಾರು? ನಂತರ 2011ರ ವರೆಗೆ ಕೇಂದ್ರ ಹಿಂದುಳಿದ ಜಾತಿಪಟ್ಟಿಯಲ್ಲಿ ಇರುವುದಿಲ್ಲ. ಆದರೆ ಕಾರ್ಯದರ್ಶಿ, ಸಮಾಜಕಲ್ಯಾಣ ಇಲಾಖೆ ಬೆಂಗಳೂರು ರವರು ದಿನಾಂಕ 14-06-2011 ರಂದು ಒಂದು ಸುತ್ತೋಲೆಯನ್ನು ಹೊರಡಿಸುತ್ತಾರೆ. ಈ ಸಮಯದಲ್ಲಿ ಸಮಾಜ ಕಲ್ಯಾಣ ಸಚಿವರು ಬಾಲಚಂದ್ರ ಜಾರಕಿಹೊಳಿ ಇದ್ದು, ಸುತ್ತೋಲೆ ಪ್ರಕಾರವಾಗಿ ದಿನಾಂಕ 16-06-2011 ರಂದು ಮ್ಯಾಸ ನಾಯಕ ಎಂಬ ಪದ ಕೇಂದ್ರ ಹಿದುಳಿದ ಜಾತಿ ಪಟ್ಟಿಯಲ್ಲಿ (ಓ.ಬಿ.ಸಿ) ಸೇರ್ಪಡೆ ಮಾಡುತ್ತಾರೆ. ನಾಯಕ ಎಂಬ ಹೆಸರಲ್ಲಿ ಸಂವಿಧಾನ ಬದ್ಧವಾಗಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾದ ಬುಡಕಟ್ಟು ಜನಾಂಗದವರಿಗೆ ಕಾನೂನಿನ ಹಾನುಯುಂಟು ಮಾಡುವ ದುರುದ್ದೇಶದಿಂದ ನಾಯಕ ಸಮಾನಾರ್ಥಕ ಮ್ಯಾಸ ನಾಯಕ ಪದವನ್ನು ಎಸ್.ಟಿ. ಪಟ್ಟಿಗೆ ಸೇರ್ಪಡೆ ಮಾಡುವ ಬದಲು ಹಿಂದುಳಿದ ಜಾತಿ ಸೇರ್ಪಡೆ ಮಾಡಿ ನಿಜವಾದ ಬುಡಕಟ್ಟು ಜನಾಂಗಕ್ಕೆ ಕಾನೂನಿನ ಹಾನಿಯುಟ್ಟು ಮಾಡಿ ಚಲ್ಲಾಟವಾಡುತ್ತಿದ್ದಾರೆ ಎಂದು ಖಾರವಾಗಿ ತಿಳಿಸಿದರು. ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಸಂಚಾಲಕ ಮ್ಯಾಸ ನಾಯಕ ಬುಡಕಟ್ಟು ಜನರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಬೇಕು. ಸರ್ಕಾರದಿಂದ ಬರಬೇಕಾದ ಅನುದಾನ ಮ್ಯಾಸ ನಾಯಕರಿಗೆ ತಲುಪಬೇಕು. ಇದರಿಮದ ಮ್ಯಾಸ ನಾಯಕರು ಇರುವ ಪ್ರದೇಶದಲ್ಲಿ ಉನ್ನತ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯಬೇಕು. ಮೂಲ ಸೌರ್ಕಯಗಳ ಅಭಿವೃದ್ಧಿಯಾಗಬೇಕು ಎಂದು ಕೆ.ಬಿ.ಓಬಣ್ಣ ತಿಳಿಸಿದರು. ಮೊಳಕಾಲ್ಮುರು ಪಟ್ಟಣದ ತಾಲ್ಲೂಕು ಆವರಣದಲ್ಲಿ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ಏಳುಕೋಟಿ ರವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಪೂಜಾರಿ ಪಾಪಣ್ಣ, ಪೂಜಾರಿ ರೇವಣ್ಣ, ದಾನಸೂರ್ ನಾಯಕ್, ಜಿ.ಎಸ್.ಮುರಳಿ ನಾಯಕ, ಪೂಜಾರಿ ತಿಪ್ಪೇಸ್ವಾಮಿ, ಅಡವಿ ಸೂರಯ್ಯ, ನಾಗೇಶ ಸಿ.ಓ, ಎಂ.ಕೆ.ಬೋಸಪ್ಪ, ಟಿ.ಪಿ.ಮಂಜುನಾಥ ಮುಂತಾದವರು ಇದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend