ಆಕಸ್ಮಿಕ ಅಗ್ನಿ ಅವಘಡ,ಕಾಳು ಕಡಿ,ಮೇವು ಭಸ್ಮ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಗುಡೆಕೋಟೆ:ಆಕಸ್ಮಿಕ ಅಗ್ನಿ ಅವಘಡ,ಕಾಳು ಕಡಿ,ಮೇವು ಭಸ್ಮ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಮದ ಹೃದಯ ಭಾಗದಲ್ಲಿರುವ, ವಿರಕ್ತ ಮಠದ ಆವರಣದಲ್ಲಿ ಆಕಸ್ಮಿಕ ಅಗ್ನಿ ಅವಘಡ ಶನಿವಾರ ಸಂಜೆ ಜರುಗಿದೆ.ಅಗ್ನಿ ಆಕಸ್ಮಿಕ ದಿಂದ ಸುಮಾರು 2ಲಕ್ಷ ರೂನಷ್ಟು ನಷ್ಟ ಸಭವಿಸಿದೆ ಎನ್ನಲಾಗುತ್ತಿದೆ.ವಿರಕ್ತ ಮಠದ ಆವರಣದಲ್ಲಿದ್ದ ಮೇವಿನ ಬಣವಿಗಳು, ಹಾಗೂ ಮಠದಲ್ಲಿ ಸಂಗ್ರಹಿಸಿಡಲಾಗಿದ್ದ ಕಾಳು ಕಡಿ.ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ಮಠಕ್ಕೆ ಹೊಂದಿಕೊಂಡಿರುವ ವೀರೆಂದ್ರಯ್ಯನವರಿಗೆ ಸೇರಿದ ಕಾಳು ಕಡಿ,ಅಪಾರ ಮೇವು ಹಾಗೂ ಕೊಟ್ಟಿಗೆ ಸಂಪೂರ್ಣ ಭಸ್ಮವಾಗಿದೆ. ಕೊಟ್ಟಿಗೆಗಳಲ್ಲಿ ಇರಬೇಕಾಗಿದ್ದ ದನಗಳು, ಮೇಯಲು ಹೋಗಿದ್ದು ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಸುದ್ದಿ ತಿಳಿದ ಕೂಡ್ಲಿಗಿ ಅಗ್ನಿ ಶಾಮಠಾಣೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ,ಬೆಂಕಿ ನಂದಿಸಿದ್ದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend