ಹಿರೇಹೆಗ್ಡಾಳು ಗ್ರಾಪಂ, ಜವಾನನ ಮಡದಿಗೆ ಒಲಿದ ಅಧ್ಯಕ್ಷ ಸ್ಥಾನದ ಭಾಗ್ಯ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಹಿರೇಹೆಗ್ಡಾಳು ಗ್ರಾಪಂ: ಹೆಣ್ಮಕ್ಕಳೇ.. ಸ್ಟ್ರಾಂಗ್ ಗುರೂ…*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಹಿರೇಹೆಗ್ಡಾಳು ಗ್ರಾಪಂನ ಜವಾನ ಪಕ್ಕೀರಪ್ಪನ ಮಡದಿ,ಶ್ರೀಮತಿ ಎಂ.ಅಶ್ವಿನಿರವರು ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.ಎಸ್ಟಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ,ಹೆಗ್ಡಾಳು,ಬೊಪ್ಪಲಾಪುರ,ಸಾಸಲವಾಡ,ಸಾಣಿಹಳ್ಳಿ ಗ್ರಾಮಗಳಿಂದ ಒಟ್ಟು 13ಸ್ಥಾನಗಳಿದ್ದು.ಹೆಗ್ಡ‍ಾಳು ಗ್ರಾಮವಾಸಿ ಶ್ರೀಮತಿ ಎಂ.ಅಶ್ವಿನಿಯವರು,ಗ್ರಾಮದ ಹಿರಿಯರ ಆಪೇಕ್ಷೆಯಂತೆ ರಾಜಕೀಯದ ರಂಗದ ಮೆಟ್ಟಿಲುಗಳನ್ನು ಹತ್ತಿದ್ದಾರೆ.


ಎಸ್ಟಿ ಸಮುದಾಯದ ಶ್ರೀಮತಿ ಎಂ ಅಶ್ವಿನಿ ಸದಸ್ಯರಾಗುವುದರೊಂದಿಗೆ, ರಾಜಕೀಯದ ಎರೆಡನೇ ಮೆಟ್ಟಿಲು ಹತ್ತಿದ್ದಾಳೆ.
ಅಧ್ಯಕ್ಷ ಸ್ಥಾನ ಮೀಸಲಾತಿ ಎಸ್ಟಿ ಬಂದಿದ್ದರಿಂದ ಸ್ಥಾನದಲ್ಲಿ ಒಬ್ಬಳೇ ಇದ್ದುದರಿಂದ ಅಧ್ಯಕ್ಷ ಸ್ಥಾನ ಅಲಂಕರಿಸುವ ಅದೃಷ್ಟ ಗ್ರಾಪಂ ಜವಾನ ಪಕ್ಕೀರಪ್ಪನ ಪತ್ನಿಗೆ ಒಲಿದಿದೆ.
ಈತನ ಕುಟುಂಬಕ್ಕೆ
ಈ ಮೂಲಕ ಸ್ಥಳೀಯ ಆಡಳಿತದಲ್ಲಿ,ರಾಜಕೀಯ ರಂಗ ಅದೃಷ್ಟದ ಬಾಗಿಲು ತೆರೆದು ಅವರನ್ನು ಸ್ವಾಗತಿಸಿದೆ.
ಹಿರೇಹೆಗ್ಡಾಳು ಗ್ರಾಮದ 2ನೇ ವಾರ್ಡಿಗೆ ಮೊದಲ ಬಾರಿಗೆ ಸ್ಪರ್ದಿಸಿದ್ದ ಶ್ರೀಮತಿ ಎಂ. ಅಶ್ವಿನಿರವರು,ಗ್ರಾಮಸ್ಥರ ಆಶೀರ್ವಾದದಿಂದಾಗಿ ಭಾರೀ ಅಂತರದಲ್ಲಿ ಗೆಲುವು ಸಾಧಿಸಿ ಸದಸ್ಯೆಯಾಗಿ ಆಯ್ಕೆ ಯಾಗಿದ್ದಾರೆ.


ಜೊತೆಗೆ ಅಧ್ಯಕ್ಷ ಮೀಸಲಾತಿಯಲ್ಲೂ ಶ್ರೀಮತಿ ಎಂ.ಅಶ್ವನಿಯವರು,ಗ್ರಾಪಂ ಅಧ್ಯಕ್ಷೆ ಆಗೋ ಯೋಗ ಅವರಿಗೆ ಒದಗಿ ಬಂದಿದೆ.ಉಪಾಧ್ಯಕ್ಷೆಯಾಗಿ ಸಾಮಾನ್ಯ ಮಹಿಳೆ ಮೀಸಲಾತಿ ಇದ್ದು ಸಾಸಲವಾಡ ಗ್ರಾಮದ ಗೌರಮ್ಮ ಎಂಬುವರು, ಆಯ್ಕೆ ಯಾಗಿದ್ದಾರೆ ಈ ಮೂಲಕ ಹಿರೇಹೆಗ್ಡಾಳು ಗ್ರಾಪಂ ನಲ್ಲಿ ಮಹಿಳೆಯರೇ ಸ್ಟ್ರಾಂಗ್ ಎಂದು ಸಾಬೀತಾಗಿದೆ.
*ಗಂಡ ಜವಾನ-ಹೆಂಡತಿ ಅಧ್ಯಕ್ಷೆ,ಸಾರ್ವಜನಿಕ ಸೇವೆಯಲ್ಲಿ ದಂಪತಿಗಳು*-ಬೆಟ್ಟದ ನೆಲ್ಲಿಕಾಯಿ ಸಾಗರದ ಉಪ್ಪು ಎತ್ತಣದೆತ್ತಣ ಸಂಬಂಧವಯ್ಯ..ಎಂಬ ವಾಣಿಯಂತೆ.
ಹಿರೇಹೆಗ್ಡಾಳು ಗ್ರಾಪಂ ಅಧ್ಯಕ್ಷೆ ಶ್ರೀಮತಿ ಎಂ.ಅಶ್ವಿನಿರವರ ಹಾಗೂ ಅವರ ಪತಿ ಎಂ.ಪಕ್ಕೀರಪ್ಪ, ಹಿರೇಹೆಗ್ಡಾಳು ಗ್ರಾಪಂಯಲ್ಲಿ ಒಟ್ಟೊಟ್ಟಿಗೆ ಸೇವೆ ಮಾಡೋ ಮಹಾ ಭಾಗ್ಯ ಸೃಷ್ಠಿಯಾಗಿದೆ. ಅಧ್ಯಕ್ಷೆಯವರ ಪತಿ ಕಳೆದೆರೆಡು ದಶಕಗಳಿಂದಲೂ,ಇದೇ ಗ್ರಾಪಂನಲ್ಲಿ ಜವಾನನಾಗಿ ಕರ್ಥವ್ಯ ನಿರ್ವಹಿಸುತ್ತಿದ್ದಾರೆ.
ಶ್ರೀಮತಿ ಎಂ.ಅಶ್ವಿನಿಯವರ ತವರೂರು ಉಜ್ಜಿನಿ ಹತ್ತಿರದ ಬೆಳೆದೆರೆ ಗ್ರಾಮವಾಗಿದ್ದು, ಎಸ್ಎಸ್ಎಲ್ಸಿ ಮುಗಿಸಿದ್ದಾರೆ.
ಗ್ರಾಪಂ ಅಧ್ಯಕ್ಷೆಯಾದ ತನ್ನ ಮಡದಿಯ ಕುರಿತು ತುಂಬಾ ಹೆಮ್ಮೆ ಪಡುವ ಪಕ್ಕೀರಪ್ಪ, ಗ್ರಾಮಸ್ಥರೊಂದಿಗೆ ಹರ್ಷ ಹಂಚಿಕೊಂಡಿದ್ದಾನೆ.ಶ್ರೀಭಗವಂತ ಜನಾರ್ಧನನ ಹಾಗೂ ಜನರೆಲ್ಲರ ಆಶೀರ್ವಾದಿಂದ, ಸ್ಥಾನ ಮಾನ ಮನ್ನಣೆ ತಮ್ಮ ಕುಟುಂಬಕ್ಕೆ ದೊರಕಿರುವುದಾಗಿ ಭಾಹುಕರಾಗಿ ನುಡಿದಿದ್ದಾರೆ ಪಕ್ಕೀರಪ್ಪ.ಅಧಿಕಾರ ಕ್ಷಣಿಕ ನಮ್ಮ ಹೆಣ್ಮಕ್ಕಳು ಅಧ್ಯಕ್ಷೆಯಾದರೇನಂತೆ,ಅವರು ಜನಪ್ರತಿ ನಿಧಿಗಳಾಗಿ ಸಾರ್ವಜನಿಕ ಸೇವೆ ಮಾಡುತ್ತಾರೆ.ನಾನು ಸರ್ಕಾರದ ಅದೀನದಲ್ಲಿದ್ದು ಸಾರ್ವಜನಿಕ ಸೇವೆ ಮಾಡೋ ಮೂಲಕ, ಆಡಳಿತ ಯಂತ್ರದಡಿ ಕರ್ಥವ್ಯ ಮಾಡುತ್ತೇನೆ ಅವರದು ಪ್ರಜಾಸೇವೆ ನಮ್ಮದು ಸರ್ಕಾರಿ ಸೇವೆ.ಅಧಿಕಾರ ಕೆಲ ಕಾಲ ಕರ್ಥವ್ಯ ಬಹುಕಾಲ,ಕಾರಣ ನಾನೆಂದಿಗೂ ನನ್ನ ಕರ್ಥವ್ಯವನ್ನೇ ಆರಾಧಿಸುವೆನು.ಅಧಿಕಾರಿ ವರ್ಗದ ಸೂಚನೆಯಂತೆ ಕರ್ಥವ್ಯ ಪಾಲಿಸುವೆನು ಎಂದಿದ್ದಾರೆ ಎಂ.ಪಕ್ಕೀರಪ್ಪ.
ಶ್ರೀಮತಿ ಎಂ.ಅಶ್ವಿನಿರವರು ಮಾತನಾಡಿ ಗ್ರಾಮಸ್ಥರ ವಿಶ್ವಾಸ ಪ್ರೀತಿಯನ್ನು ಉಳಿಸಿಕೊಂಡು,ಪದವಿಯ ಘನತೆಗೆ ಧಕ್ಕೆ ಬರದಂತೆ ಜಾಗ್ರತೆ ವಹಿಸಿಕೊಂಡು. ಸರ್ವ ಸದಸ್ಯರ ವಿಶ್ವಾಸದೊಂದಿಗೆ ಗ್ರಾಮಸ್ಥರ ಹಾಗೂ ಸಮಸ್ಥ ಗ್ರಾಪಂ ವ್ಯಾಪ್ತಿಯ ಎಲ್ಲಾ ಜನರ ಸೇವೆ ಮಾಡುವುದಾಗಿ ಅವರು ವಿಶ್ವಾಸ ವ್ಯೆಕ್ತಪಡಿಸಿದರು….

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend