*ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ತಾಲೂಕ ಘಟಕ ವತಿಯಿಂದ ಶಾಸಕರಿಗೆ ಮನವಿ*
ಲಿಂಗಸೂಗೂರ ಪಟ್ಟಣದಲ್ಲಿ ಶಾಸಕ ಮಾನಪ್ಪ ಡಿ ವಜ್ಜಲ್ ರವರಿಗೆ
ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಲಿಂಗಸೂಗೂರು ಘಟಕ ವತಿಯಿಂದ ಮನವಿ ಪತ್ರ ಸಲ್ಲಿಸಿದರು
ರಾಜ್ಯ ಅಧ್ಯಕ್ಷರು ಆನಂದ್ ಹೇರೂರು ರವರು
ಪಾರಂಪರಿಕ ವೈದ್ಯ ಪದ್ಧತಿಯು ಭಾರತೀಯ ವೈದ್ಯ ಪರಂಪರೆಯ ಮೂಲ ತಳಹದಿಯಾಗಿದ್ದು,
ಪಾರಂಪರಿಕ ವೈದ್ಯ, ಜ್ಞಾನವನ್ನು ಜನರು ದೇಶಿವೈದ್ಯ, ನಾಟಿವೈದ್ಯ, ಜನಪದವೈದ್ಯ, ಸಾಂಪ್ರದಾಯಿಕ ವೈದ್ಯ, ಅನುವಂಶಿಕದ, ಪಾರಂಪರಿಕ ವೈದ್ಯ, ಈ ರೀತಿಯಲ್ಲಿ ಈ ಪದ್ಧತಿಯನ್ನು ಕರೆಯಲ್ಪಡುತ್ತದೆ.
ಪಾರಂಪರಿಕ ವೈದ್ಯರು, ತಮ್ಮ ಪೂರ್ವಜರು ಹೇಳಿಕೊಟ್ಟಿ ನೀರ್ಧಿಷ್ಟವಾದ ಒಂದೆರಡು ರೋಗಗಳಿಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಗುವಂತ ಗಿಡಮೂಲಿಕೆ ಹಾಗೂ ನಾರು ಬೇರಿನ ಕಷಾಯ ಚೂರ್ಣಗಳಿಂದ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ.
ಇಂದಿಗೂ ಕೆಲವು ರೋಗಗಳು ಬೇರೆ ಬೇರೆ ವೈದ್ಯಪದ್ಮತಿಯ ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ರೋಗಿಗಳು ಬರುವುದೇ ನಮ್ಮ ಪಾರಂಪರಿಕ ವೈದ್ಯರಲ್ಲಿ ಉದಾಹರಣೆಗೆ : ಕರೋನ ಸಮಯದಲ್ಲಿ ನಮ್ಮ ವೈದ್ಯರು ಹಳ್ಳಿಮಟ್ಟದಲ್ಲಿ ಉಚಿತವಾಗಿ ಮಾತ್ರೆ ಹಾಗೂ ಕಷಾಯ ವಿತರಣೆ ಮಾಡುವ ಮೂಲಕ ಕರೋನ ರೋಗದ ತೀವ್ರತೆಯನ್ನು ತಗ್ಗಿಸುವಲ್ಲಿ ರೋಗ ನಿಯಂತ್ರಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ.
ಕರೋನ ಸಮಯದಲ್ಲಿ ‘ಆಂದ್ರ ಪ್ರದೇಶದ ಒಬ್ಬ* ಪಾರಂಪರಿಕ ವೈದ್ಯರು ವೈದ್ಯ ಆನಂದಯ್ಯ’ ಎಂಬುವರು ಎಷ್ಟೋ ಜನರ ಜೀವ ಉಳಿಸಿದ್ದಾರೆ.
ಕೋರ್ಟ್ ಕೂಡ ಅದಕ್ಕೆ ಆ ಸಮಯದಲ್ಲಿ ಅನುಮತಿ ಕೊಟ್ಟಿದ್ದು, ದೃಶ್ಯಮಾದ್ಯಮದಲ್ಲಿ ಪ್ರಸಾರವಾಗಿದ್ದು ತಮ್ಮ ಗಮನಕ್ಕೆ ಬಂದಿರುತ್ತದೆ.
ಸರಳ ಕಾಯಿಲೆಗಳಿಂದ ಹಿಡಿದು ದೀರ್ಘಕಾಲಿಕ ಕಠಿಣ ರೋಗಗಳಿಗೆ ನಮ್ಮ ಪಾರಂಪರಿಕ ವೈದ್ಯರು ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ಹಳ್ಳಿ ಮಟ್ಟದಲ್ಲಿ ಪದವಿ ಹೊಂದಿದ ವೈದ್ಯರುಗಳು ಹೋಗಿ ಸೇವೆ ಸಲ್ಲಿಸದಿರುವ ಇಂತಹ ಸಂಧರ್ಬಗಳಲ್ಲಿಯೂ ನಮ್ಮ ಪಾರಂಪರಿಕ ವೈದ್ಯರುಗಳೇ ಅಲ್ಲಿನ ಜನಗಳಿಗೆ ಗಿಡಮೂಲಿಕೆಗಳ ‘ಉಪಚಾರ ಮಾಡಿ ರೋಗ ಗುಣಪಡಿಸುತ್ತಿದ್ದಾರೆ.
ಮಾನವರಿಗೆ ಅಷ್ಟೇ ಅಲ್ಲದೇ ಜಾನುವಾರಗಳಿಗೂ ಚಿಕಿತ್ಸೆ ಮಾಡುತ್ತಾ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ.
ನಮ್ಮ ನಿಮ್ಮ ಮನೆಗಳಲ್ಲಿ ಆಗಿನಪೂರ್ವಜರು ಮನೆ ಮದ್ದು ಮತ್ತು ಹೊಲ ಗದ್ದೆಗಳಲ್ಲಿ ಬೆಳೆದ ಗಿಡ ಮೂಲಿಕೆಗಳಿಂದ ಕಾಯಿಲೆಗಳನ್ನು ಗುಣಪಡಿಸಿಕೊಂಡು ನೂರು ವರ್ಷಗಳ ಮೇಲೆ ಬದುಕಿ ಬಾಳಿದ್ದು ನಾವು ನೀವುಗಳು ನೋಡುತ್ತಿವೆ. ಬ್ರಿಟಿಷ್ರು ಬರುವ ಮುಂಚೆ ಇದೆ ಪದ್ಧತಿ ಆರೋಗ್ಯಕರವಾಗಿತ್ತು. ಈ ಪದ್ಧತಿಗೆ ಸರಕಾರದ ಪ್ರೋತ್ಸಾಹ ಬೆಂಬಲ ಹಾಗೂ ಸಮಾಜದ ಸಹಕಾರ ಈಗ ಅನಿವಾರ್ಯವಾಗಿದೆ. ಮಾನ್ಯ ಜನಪ್ರಿಯ ಶಾಸಕರಾದ ಮಾನಪ್ಪ ಡಿ ವಜ್ಜಲ್ ತಾವು ಪಾರಂಪರೆಯ ಪದ್ಧತಿಯ ಬಗ್ಗೆ ಹಾಗೂ ಪಾರಂಪರಿಕ ವೈದ್ಯರ ಬಗ್ಗೆ ಅಪಾರ ಕಾಳಜಿ ಪ್ರೀತಿ ಹಾಗೂ ಕಳಕಳೆಯ ಉಳ್ಳವರಗಿದ್ದು, ಮುಂದಿನ ದಿನಗಳಲ್ಲಿ ನಡೆಯುವ ಬೆಳಗಾವಿ ಸುವರ್ಣ ಸೌಧದ ಚಳಿಗಾಲದ ಅಧಿವೇಶನದಲ್ಲಿ ಪಾರಂಪರಿಕ ವೈದ್ಯಪದ್ಧತಿಯ ಉಳಿವಿಗಾಗಿ ನಮ್ಮ ಪರವಾಗಿ ನಮ್ಮ ಈ ಮನವಿಯನ್ನು ಸರಕಾರದ ಗಮನಕ್ಕೆ ತಂದು ಈ ಪಾರಂಪರಿಕ ಪದ್ಧತಿಯು ಉಳಿಯಲು ಮುಖ್ಯ ಪಾತ್ರವಹಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಆನಂದ್ ಹೇರೂರು,ರಾಜ್ಯ ಕಾರ್ಯದರ್ಶಿ ಕುಮಾರಸ್ವಾಮಿ ಕಸಬಾ ಲಿಂಗಸ್ಗೂರು, ತಾಲೂಕು ಅಧ್ಯಕ್ಷರಾದ ಪರಮನಗೌಡ, ಕಾರ್ಯದರ್ಶಿ ಸಹದೇವಪ್ಪ ಕರಡಿ ಈಚನಾಳ,ರಮೇಶ್ ಎಂ ಮಟ್ಟೂರ, ಮೌನೇಶ್ ಉಪ್ಪೇರಿ, ಹನುಮಂತ್ ಮಟ್ಟೂರು, ದೇವೇಂದ್ರಪ್ಪ ಬಡಿಗೇರ್, ಮೌನೇಶ್ ಬಡಿಗೇರ್ ಸುರೇಶ್ ಮದುಗಲ್ ವಿರೂಪಾಕ್ಷಪ್ಪ, ಹನುಮಂತ್, ಚೆನ್ನಪ್ಪ ಬೇಡರ ಕಲ್ಕುಂಟಿ, ಇನ್ನಿತರರು ಇದ್ದರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
