ಮಹಿಳೆಯೊಂದಿಗೆ ಏಕವಚನದಲ್ಲಿ ಮಾತನಾಡಿದ ಆರೋಪ: ಕಿಕ್ಕೇರಿ ಪೊಲೀಸ್ ಇನ್ಸ್ಪೆಕ್ಟರ್ ಅಮಾನತಿಗೆ ಆಗ್ರಹ
ಕಿಕ್ಕೇರಿ: ಸಮೀಪದ ಗಾಣದಹಳ್ಳಿ ಗ್ರಾಮದ ಮಹಿಳೆ ಜಮೀನಿನ ವಿಚಾರದಲ್ಲಿ ಬಾಕಿ ಬರಬೇಕಿದ್ದ ಹಣವನ್ನು ಕೊಡಿಸುವಂತೆ ಪೋಲೀಸ್ ಠಾಣೆಯಲ್ಲಿ ಮನವಿ ಮಾಡಲು ಬಂದ ಮಹಿಳೆಯೊಂದಿಗೆ ಕಿಕ್ಕೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಯರಾಮ್ ಅವರು ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯ ದಮನಿತ ಸೇವಾ ಸಮಿತಿ, ಮತ್ತು ಹೊರ ಬಾಗದ ದಲಿತ ಸಂಘನೆಯವರು ಅಧ್ಯಕ್ಷೆ ಪವಿತ್ರ ಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ, ಪೊಲೀಸ್ ಇನ್ಸ್ಪೆಕ್ಟರ್ ಅವರ ವರ್ತನೆಯನ್ನು ಖಂಡಿಸಿದರು ಸ್ಥಳಕ್ಕೆ ಜಿಲ್ಲಾ ವರಿಷ್ಠಾದಿಕಾರಿ ಬಂದು ಕೊಡಲೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ರು.
ಈ ಸಂದರ್ಭದಲ್ಲಿ ರಾಜ್ಯ ದಮನಿತ ಸೇವಾ ಸಮಿತಿಯ ಅಧ್ಯಕ್ಷೆ ಪವಿತ್ರ ಗೌಡ ಮಾತನಾಡಿ, ಮಹಿಳೆಯರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಬರುವ ಮಹಿಳೆಯರಿಗೆ ಗೌರವ ನೀಡಬೇಕು. ಆದರೆ ಮಹಿಳೆಯೊಂದಿಗೆ ಏಕವಚನದಲ್ಲಿ ಮಾತನಾಡಿದ್ದಾರೆ ಎಂಬ ಆರೋಪ ಗಂಭೀರವಾಗಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ಮಹಿಳೆಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಆರೋಪ ಎದುರಿಸುತ್ತಿರುವ ಇನ್ಸ್ಪೆಕ್ಟರ್ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
*ಸಂಘನೆಯಲ್ಲೇ ಗೂಂದಲ ಸೃಷ್ಟಿ ಜನ ಸ್ನೇಹಿ ಇನ್ಸ್ಪೆಕ್ಟರ್ ಜಯರಾಮ್ ಪರವಾಗಿ ಸ್ಥಳಿಯ ದಲಿತ ಮುಖಂಡರು ಮತ್ತು ಸಂಘಟನೆಗಳು*
*ಗಾಣದಳ್ಳಿ ಗ್ರಾಮದಲ್ಲಿ 13 ಲಕ್ಷಕ್ಕೆ ಜಮೀನು ಮಾರಾಟವಾಗಿದ್ದು ಎಲ್ಲಾ ಸಮುಖದಲ್ಲಿ ರಿಜಿಸ್ಟರ್ ಸಹಾ ಹಾಗಿದೆ ಜಮೀನು ತೆದುಕೊಂಡ ವೈಕ್ತಿ 12 ಲಕ್ಷ ಹಣವನ್ನು ನೀಡಿದ್ದಾರೆ ಉಳಿದು ಒಂದು ಲಕ್ಷ ಬಾಕಿ ಹಣ ನೀಡಬೇಕಿತ್ತು ಆದರೆ ಆ ಜಮೀನು ಈಗ ನ್ಯಾಯಾಲದ ಮೆಟ್ಟಿಲೇರಿದ ಆಗಾಗಿ ಆತ 1 ಲಕ್ಷ ಹಣ ಕೊಟ್ಟಿಲ್ಲ ಈ ಮಹಿಳೆ ಹಣವನ್ನು ಕೊಡ್ಸಿ ಅಂಥ ಪೋಲೀಸ್ ಠಾಣೆಗೆ ಬಂದಿದ್ದಾರೆ ಸ್ಥಳಿಯವಾಗಿ ಅರ್ಜಿ ಸ್ಪೀಕರಿಸಿ ಪೋಲಿಸರು ವಿಚಾರಣೆ ನೆಡೆಸಿದ್ದಾರೆ ಆತ ನ್ಯಾಯಲದಲ್ಲಿ ಜಮೀನ ವಿಚಾರ ಇದೆ ಎಂದು ತಿಳಿಸಿದ್ದಾರೆ ಆದರೆ ಇವರು ಮತ್ತೆ ಮಹಿಳೆ ಮೇಲೆ ಲೈಂಗಿಕ ದ್ರೌಜ್ಯನ್ಯ ಮಾಡಿದ್ದಾರೆ ಎಂದು ಸುಳ್ಳು ಕಂಪ್ಲೇಟ್ ಬರೆದು ಕೊಂಡು ಬಂದಿರುತ್ತಾರೆ ವಿಷಯ ತಿಳಿದ ಇನ್ಸ್ಪೆಕ್ಟರ್ ಸುಳ್ಳು ಕಂಪ್ಲೇಟ್ ಸ್ಪೀಕರಿಸಿಲ್ಲ ಅದು ಸಮಸ್ಯೆ ಏನೇ ಇದ್ದರು ಸ್ಥಳಿಯ ಮುಖಂಡರ ಸಲಹೆ ಪಡೆದುಕೊಂಡು ಬಗೆಹರಿಸಿಕೊಳ್ಳಬೇಕು ಇಲ್ಲಿ ಪವಿತ್ರಗೌಡ ರವರು ರಾಜ್ಯದ ವಿವಿಧ ಭಾಗಗಳಿಂದ ಜನರನ್ನು ತಂದು ಜನಸ್ನೇಹಿ ಅಧಿಕಾರಿ ವಿರುದ್ದ ದಲಿತರ ವಿರೋಧಿ ಎಂಬ ಪಟ್ಟ ಕಟ್ಟುತ್ತಾ ಕಿಕ್ಕೇರಿ ಪೋಲೀಸ್ ಮೇಲೆ ಸುಳ್ಳು ಅಪಪ್ರಾಚರ ಮಾಡುಲು ಪ್ರಯತ್ನ ಮಾಡುದ್ದಿದ್ದಾರೆ ಆದ್ರೆ ಇಲ್ಲಿಯ ಯಾವುದೇ ದಲಿತರೊಂದಿಗೆ ಜನಸ್ನೇಹಿ ಪೋಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಯುಸುತ್ತಿರುವ ಜಯರಾಮ್ ರವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುದು ಸರಿಯಲ್ಲ ಅಲ್ಲದೇ ನಮ್ಮ ತಾಲ್ಲೂಕಿನಲ್ಲಿ ಎಲ್ಲಾ ದಲಿತ ಸಂಘಟನೆಗೆ ಒಂದಾಗಿದ್ದೇವೆ ಏನೇ ಸಮಸ್ಯ ಇದ್ದರು ದಲಿತರ ಪರವಾಗಿ ನ್ಯಾಯಕೊಡಿಸುವಲ್ಲಿ ಪ್ರಮಾಣಿಕವಾಗಿ ಕೆಲಸಮಾಡುತ್ತಿರು ಅಧಿಕಾರಿಯ ಮೇಲೆ ಪ್ರತಿಭಟನೆ ಯಾಕೆ ಮಾಡುತ್ತೀದ್ದೀರಾ. ಅಲ್ಲದೆ ನಮ್ಮಲ್ಲೇ ಬೆಂಕಿ ಹಚ್ಚುವ ಕೆಲಸ ಮಾಡುತ್ತೀದ್ದೀರಾ ಎಂದು ಮಾತಿನ ಚಕಮಕಿ ನೆಡಿಯಿತ್ತು ಈ ವಿವಾವದ ನಡುವೆ ಪವಿತ್ರ ಗೌಡರ ನೆಡೆ ವಿರೋದಿಸಿ ಕೆಲ ಸಂಘಟನೆಗಳು ಡಿ ವೈ ಎಸ್ ಪಿ ಚಲುವರಾಜು ರವರಿಗೆ ಛಲವಾದಿ ಮಾಹಾ ಸಭಾ ಸಂಘಟನೆಯ ಅದ್ಯಕ್ಷರು ಮತ್ತು ಸದಸ್ಯರು ದೂರು ಸಲ್ಲಿಕೆ ಮಾಡಿದ್ರು*
ಇಬ್ಬರೂ ಸಹ ತಮ್ಮ ಸಮಸ್ಯಗಳ ಬಗ್ಗೆ ನಾಗಮಂಗಲ ಡಿವೈಎಸ್ಪಿ ಚಲುವರಾಜು ರವರಿಗೆ ಲಿಖಿತ ರೂಪದಲ್ಲಿ ದೂರು ನೀಡಿದ್ರು ಯಾವುದೇ ಸಮಸ್ಯೆ ಆಗದಂತೆ ಕೃಷ್ಣರಾಜಪೇಟೆ ಪಟ್ಟಣ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನೀಲ್, ಗ್ರಾಮಾಂತರ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹೇಶ್, ಪ್ರಮೋಧ್, ಸಬ್ ಇನ್ಸ್ಪೆಕ್ಟರ್ ಸಿದ್ದಲಿಂಗ ಬನಾಸೆ ಸೇರಿದಂತೆ ವಿವಿದ ಪೋಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ದಂಡೇ ಕಿಕ್ಕೇರಿ ಪೋಲೀಸ್ ಠಾಣೆಯಲ್ಲಿ ಹಾಜರಾಗಿದ್ರುಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪವಿತ್ರಗೌಡ, ಮಾರಿಯಪ್ಪ, ಕೆ ಕೆ ವೀರೇಶಪ್ಪ, ಪ್ರತಾಪ್ ಪಾಳೇಗಾರ್, ಜಯಕುಮಾರ್, ಸೈಯಾದ್, ಯೋನಸ್, ಕೆ ಬಸವರಾಜು, ಟಿ ಪರಮೇಶ್, ಮಲ್ಲಿಕಾರ್ಜುನ್, ಪಿ.ವಿಜಯಕುಮಾರ್, ಸೂರಿ…ಸೇರಿದಂತೆ ರಾಜ್ಯದ ಬೇರೆ ಬಾಗದ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
