ದಾಖಲೆ ಇಲ್ಲದೆ ಅಧಿಕಾರಿಗಳ
ಮೇಲೆ ಭ್ರಷ್ಟಾಚಾರದ ಆರೋಪ
ಮಾಡಿದ ಶಾಸಕ.
ಹಗರಿಬೊಮ್ಮನಹಳ್ಳಿ. ವರದಿಗಾರರು ಬಿ ಫಕೀರಪ್ಪ ಕಡ್ಲ ಬಾಳು.
ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಕೆ ನೇಮರಾಜ ನಾಯಕ ಅವರು ಸರ್ಕಾರಿ ಅಧಿಕಾರಿಗಳ ಮೇಲೆ ಪದೇ ಪದೇ ಬಹಿರಂಗವಾಗಿಭ್ರಷ್ಟಾಚಾರದ ಆರೋಪ ಮಾಡುತ್ತಿದ್ದು ಅವರ ಶಾಸಕ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಕ್ಷೇತ್ರದ ಮತದಾರರ ಅಭಿಪ್ರಾಯ ಪಟ್ಟಿದ್ದಾರೆ. ಶಾಸಕರ ಸಾರ್ವಜನಿಕ ಸಭೆ ಮತ್ತು ತಾಲೂಕು ಮಟ್ಟದ ಸಭೆಗಳಲ್ಲಿ ಅಧಿಕಾರಿಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಅವರ ಚಾರಿತ್ರ್ಯಕ ನಿಂದನೆ ಮಾಡುತ್ತಿದ್ದ ಸಾರ್ವಜನಿಕರು ಅಧಿಕಾರಿಗಳ ಬಗ್ಗೆ ಕೀಳಾಗಿಕಾಣುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಆದ್ದರಿಂದ ಬ್ರಷ್ಟಾಚಾರ ಮಾಡಿದ ಅಧಿಕಾರಿಗಳ ಬಗ್ಗೆ ದಾಖಲೆ ಇದ್ದರೆ ಆ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಮ್ಮ ಪರಮಾಧಿಕಾರವನ್ನು ಬಳಸಿಕೊಳ್ಳಲಿ ಅದು ಬಿಟ್ಟು ತನ್ನ ಪ್ರತಿಸ್ಪರ್ಧಿ ಮಾಜಿ ಶಾಸಕ ಭೀಮಾ ನಾಯಕ ವಿರುದ್ಧ ಸೇಡುತೀರಿಸಿಕೊಳ್ಳಲು ಅಧಿಕಾರಿಗಳನ್ನು ಬಲಿಪಶು ಮಾಡುತ್ತಿದ್ದಾರೆ ಇದರಿಂದ ಹಗರಿಬೊಮ್ಮನಹಳ್ಳಿ ಗೆ ತಾಲೂಕು ಮಟ್ಟದ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿದ್ದಾರೆ ಹೀಗಾಗಿ ಪಂಚಾಯತ್ ರಾಜ್ ಇಲಾಖೆ. ಸಮಾಜ ಕಲ್ಯಾಣ ಇಲಾಖೆ. ಪೊಲೀಸ್ ಠಾಣೆ ಆರಕ್ಷಕ ಪ್ರಮುಖ ಹುದ್ದೆಗಳಿಗೆ ಪ್ರಭಾರಿಗಳಾಗಿ ಕಾರ್ಯನಿರ್ವಹಿಸುವ ಪರಿಸ್ಥಿತಿ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ತಂದಿದ್ದಾರೆ ಆದ್ದರಿಂದ ಅಧಿಕಾರಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ನಿಂದನೆ ಮಾಡಿದ್ದಲ್ಲಿ ಅಧಿಕಾರಿಗಳು ಜನಪ್ರತಿನಿಧಿಯ ವಿರುದ್ಧ ಬಹಿರಂಗವಾಗಿ ತಿರುಗಿ ಬೀಳಬಹುದು ಆದ್ದರಿಂದ ಹಗರಿಬೊಮ್ಮನಹಳ್ಳಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಅಧಿಕಾರಿಗಳ ನಿಂದನೆಯನ್ನು ಬಿಟ್ಟು ಅಭಿವೃದ್ಧಿ ಮಾಡಿಸಿಕೊಳ್ಳುವುದರಲ್ಲಿ ಸಹಕಾರ ಪಡೆದುಕೊಳ್ಳಲಿ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಮತದಾರರು ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದಾರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
