*ಪರೀಕ್ಷೆ ಮುಗಿಸಿಕೊಂಡು ಹೋಗುತಿದ್ದ ರಸ್ತೆ ಮಾರ್ಗದಲ್ಲಿ ಅಜ್ಜ ಮೊಮ್ಮಗಳನ್ನು ಕರೆದು ಕೊಂಡ ಜವರಾಯ*
ಕೂಡ್ಲಿಗಿ ತಾಲೂಕಿನ ವಲಸೆ ಕೆಳಗಿನ ಕರ್ನಾರಟ್ಟಿಯ ಗ್ರಾಮದ ಈಶಪ್ಪ (55) ಸೃಷ್ಟಿ (15) ದಿನಾಂಕ 12/03/2026 ಗುರುವಾರ ಸುಮಾರು ಮಧ್ಯಾಹ್ನ 1:00 ಗಂಟೆಯ ಸಮಯಕ್ಕೆ ಪರೀಕ್ಷೆ ಮುಗಿಸಿಕೊಂಡು ಅಜ್ಜ ಮೊಮ್ಮಗಳು ಬೈಕಿನಲ್ಲಿ ಕೂಡ್ಲಿಗಿಯಿಂದ ಬಣವಿಕಲ್ಲು ಕಡೆ ಹೋಗುವ ರಸ್ತೆಯಲ್ಲಿ ಕ್ಯಾಸನ ಕೆರೆ ಗ್ರಾಮದ ಹತ್ತಿರ ಹೋಗುವಾಗ ರಸ್ತೆಯ ಪಕ್ಕದಲ್ಲಿ ಹಾಕಿದ್ದ ರಾಗಿಯಿಂದಾಗಿ ಬೈಕ್ ಸ್ಕಿಡ್ ಆಗಿ ಜಾರಿ ಬಿದ್ದು ನಂತರ ಹಿಂದೆ ಬರುತ್ತಿದ್ದ ಲಾರಿಯು ಇಬ್ಬರ ಮೇಲೆ ಹರಿದು ಹೋಗಿ ಮೊಮ್ಮಗಳ ತಲೆ ಬುರುಡೆ ಹಾಗೂ ದೇಹದ ಮಾಂಸ ಹೊರ ಬರುವಂತೆ ಲಾರಿ ಹರಿದುಹೋಗಿದೆ ಅಜ್ಜನಿಗೂ ಸಹ ತೀವ್ರ ಗಾಯವಾಗಿ ಆತನ ಸಹ ಸ್ಥಳದಲ್ಲೇ ಮೃತಪಟ್ಟಿರುವ ಬಗ್ಗೆ ತಿಳಿದಿದೆ ಘಟನಾ ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ಹೆದ್ದಾರಿ ಸಹಾಯಕರು ಹೈವೇ ಪೆಟ್ರೋಲ್ ಬಂಕ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.
ವರದಿ: ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
