ರೈತರ ಪಂಪ್ಸೆಟ್ ಮೋಟಾರ್ ಕೇಬಲ್ ಕಳ್ಳತನಕ್ಕೆ ಕಡಿವಾಣ ಯಾವಾಗ…!!!

ರೈತರ ಪಂಪ್ಸೆಟ್ ಮೋಟಾರ್ ಕೇಬಲ್ ಕಳ್ಳತನ…
ಹೊನ್ನಾಳಿ, ತಾಲೂಕಿನ ದಿಡಗೂರು ಗ್ರಾಮದಲ್ಲಿ ತುಂಗಭದ್ರಾ ನದಿ ದಡದಲ್ಲಿ10ಜನ ರೈತರು ಕೃಷಿ ಮಾಡಲು ನದಿಗೆ ಅಳವಡಿಸಿ ಮೋಟಾರ್ ಗಳ ಕೇಬಲ್ ವೈರ್ ನ್ನು ಶುಕ್ರವಾರ ರಾತ್ರಿ ವೇಳೆಯಲ್ಲಿ ಯಾರೋ ಕಟ್ಟ ಮಾಡಿರುವುದು ಬೆಳಕಿಗೆ ಬಂದಿದೆ
ಶನಿವಾರ ಬೆಳಗ್ಗೆ ರೈತರು ಭತ್ತ ದ ಗದ್ದೆಯಲ್ಲಿ ನೀರು ಸರಬರಾಜು ಹಾಗಾದೆ ಇರುವುದನ್ನು ಗಮನಿಸಿ ನದಿಯ ದಂಡೆಯ ಮೇಲಿರುವ ಸ್ಟಾರ್ಟರ್ ಬಾಕ್ಸ್ ಗಳು ಹತ್ತಿರ ಬಂದು ನೋಡಲು ಕೇಬಲ್ ಕಳ್ಳತನ ಆಗಿರುವುದು ಕಂಡುಬಂದು ಎಲ್ಲಾ ರೈತರು 112 ಕರೆ ಮಾಡಿ ತಿಳಿಸಲು ಕರ್ತವ್ಯ ನಿರ್ವಹಿಸುತ್ತಿರುವ ಹೊನ್ನಾಳಿ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿಯಾದ ಲೋಕೇಶ್, ಮತ್ತು ರವಿಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ಕೈಗೊಳ್ಳುತ್ತೇವೆ ಎಂದು ರೈತರಿಗೆ ತಿಳಿಸಿದರು
ರೈತರದ ಚಂದ್ರಶೇಖರ್ ಮಾತನಾಡಿ ಒಂದು ಮೀಟರ್ ಕೇಬಲ್ ಗೆ 225 ಆಗಿದೆ ಅಂತಹ ವೈರನ್ನು ಒಬ್ಬ ಒಬ್ಬ ರೈತರದ್ದು 110 ಮೀಟರ್ ಇದೆ ಹೀಗೆ ಹತ್ತು ಜನ ರೈತರ ಕೇಬಲ್ ವೈರನ್ನು ಕಟ್ ಮಾಡಿಕೊಂಡು ಹೋಗಿದ್ದಾರೆ ಆದ್ದರಿಂದ ತಂದು ಹಾಕಲು ಸಾವಿರಾರು ಬೇಕಾಗುತ್ತದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ರೈತರ ಗೋಪಾಲಪ್ಪ ಬಿಹೆಚ್, ಕೌಶಿಕ, ಮಂಜುನಾಥ್, ರೂಪ, ಮೀನಾಕ್ಷಮ್ಮ, ನಾಗರಾಜ್, ವೆಂಕಟೇಶ್, ಮುಂತಾದ ರೈತರು ಈ ಸಂದರ್ಭದಲ್ಲಿ ಇದ್ದು ರಕ್ಷಣಾ ಇಲಾಖೆಯ ಸಿಬ್ಬಂದಿಗಳಿಗೆ ಮನವಿಯನ್ನು ಮಾಡಿದರು…

 

ವರದಿ. ಪ್ರಭಾಕರ್ ಹೊನ್ನಾಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend