2022-23 ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಬಣವಿಕಲ್ಲು ಶಾಲೆಯ ಸಹ ಶಿಕ್ಷಕಿ !!!!!!!!! ವಿಜಯನಗರ ಜಿಲ್ಲೆ:- ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾದ ಶ್ರೀಮತಿ ಶ್ರೀ ಓ.ಬಸಮ್ಮ ಇವರಿಗೆ 2022-23 ನೇ ಸಾಲಿನಲ್ಲಿ ಕೊಡಮಾಡುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆಪ್ಟೆಂಬರ್, 5 ರಂದು ಕೂಡ್ಲಿಗಿ ಪಟ್ಟಣದ ಚಂದ್ರಶೇಖರ್ ಆಜಾದ್ ರಂಗಮಂದಿರದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಬಾರಿ ನೂತನ ಜಿಲ್ಲೆಯಾದ ವಿಜಯನಗರ ಜಿಲ್ಲೆಯ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿರುವ ಓ.ಬಸಮ್ಮ ಇವರು ಎಂ.ಬಿ.ಅಯ್ಯನಹಳ್ಳಿ ಗ್ರಾಮದ ಪ್ರತಿಷ್ಟಿತ ಕೂಡು ಕುಟುಂಬದ ದಿವಂಗತ ಓ.ತಿಪ್ಪೇರುದ್ರಪ್ಪ (ಗ್ರಾ. ಪಂ. ಮಾಜಿ ಅಧ್ಯಕ್ಷರು) ಶ್ರೀಮತಿ ಓ.ಸಾಕಮ್ಮ ಇವರುಗಳ ಪುತ್ರಿಯಾದ ಓ.ಬಸಮ್ಮ ತಮ್ಮ ತಾಯಿಯ ತವರೂರಾದ ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದರು . ನಂತರ ಪಿಯುಸಿಯನ್ನು ಕೂಡ್ಲಿಗಿ ತಾಲೂಕಿನ ಮಾದರಿ ಗ್ರಾಮ ಎಂದೇ ಹೆಸರಾಗಿದ್ದ ಚಿಕ್ಕಜೋಗಿಹಳ್ಳಿಯಲ್ಲಿ ಪೂರೈಸಿದರು , ಟಿ ಸಿ ಎಚ್ ಕಾನಮಡುಗಿನಲ್ಲಿ ಮುಗಿಸಿ ನಂತರ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಆಯ್ಕೆಯಾಗಿ , 19-8-1998 ರಲ್ಲಿ.ಕೂಡ್ಲಿಗಿ ತಾಲೂಕಿನ ಉಲ್ಲಾನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದರು . ನಂತರ 6-6-2011 ರಲ್ಲಿ ಬಣವಿಕಲ್ಲು ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಸುಮಾರು 12 ವರ್ಷಗಳಿಂದ ಮಕ್ಕಳ ನೆಚ್ಚಿನ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಓ.ಬಸಮ್ಮ ಇವರಿಗೆ ರಾಜ್ಯ ಸರ್ಕಾರದ ವತಿಯಿಂದ ಕೊಡುವ ವಿಜಯನಗರ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಬಾಜನರಾಗಿರುವ ಇವರಿಗೆ ಬಣವಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಯಾದ ಎಂ.ಬಿ.ಅಯ್ಯನಹಳ್ಳಿ , ಉಲ್ಲಾನಹಳ್ಳಿ , ಮತ್ತು ಬಣವಿಕಲ್ಲು ಗ್ರಾಮದ ಸಮಸ್ತ ಗ್ರಾಮಸ್ಥರು ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದದವರು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಉಪಾದ್ಯಕ್ಷರು ಹಾಗೂ ಸದಸ್ಯರು ಹಾಗೂ ಮಕ್ಕಳು ಅಭಿನಂದಿಸಿದ್ದಾರೆ…

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
