ಅನಿರೀಕ್ಷಿತವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಕೊಟ್ಟೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿಧ್ಯಾರ್ಥಿನಿಲಯಗೆ ಭೇಟಿ…!!!

ದಿನಾಂಕ:01.09.2023 ರಂದು ಅನಿರೀಕ್ಷಿತವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಕೊಟ್ಟೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿಧ್ಯಾರ್ಥಿನಿಲಯಗೆ ಭೇಟಿ ನೀಡಿಲಾಗಿ ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಹಸ್ಟಲ್ ನಲ್ಲಿ ಇದ್ದ ವಾರ್ಡನ್ ಗಳು ಸರಿಯಾಗಿ ಎಲ್ಲಾ ದಾಖಲೆಗಳನ್ನು ನಿರ್ವಹಿಸಿರುತ್ತಾರೆ ಮತ್ತು ಸುಚಿತ್ವ ಹಾಗೂ ಕುಡಿಯುವ ನೀರಿಗೆ ಹೆಚ್ಚಿಗೆ ಗಮನ ಹರಿಸಿರುವುದು ಕಂಡುಬರುತ್ತದೆ.

ಹಾಗೂ ದಾಖಲೆಗಳ ಪ್ರಕಾರ ದಾಸ್ತಾನು, ವಿತರಣ ಹಾಗೂ ಹಾಲಿ ಲಭ್ಯವಿದ್ದ ಸಾಮಾನುಗಳಿಗೆ ಹೊಂದಾಣಿಕೆ ಆಗಿರುವುದು ಕಂಡುಬರುತ್ತದೆ. ಇದನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳು ಹಾಜರಿದ್ದ ವಾರ್ಡನ್ ಗೆ ಪ್ರಶಂಸೆ ನೀಡಿದರು, ಇದೇ ರೀತಿ ಜಿಲ್ಲೆಯಲ್ಲಿ ಎಲ್ಲಾ ಹಾಸ್ಟಲ್ ಗಳು ಸುಚಿತ್ವವಾಗಿ ಇಡುವಂತೆ ತಿಳಿಸಲು ಜಿಲ್ಲಾಧಿಕಾರಿಗಳ ಮುಖಾಂತರ ಕ್ರಮವಹಿಸಲು ತಿಳಿಸಲಾಗುವುದೆಂದು ಹೇಳಿದರು.

ಹಾಗೂ ಜಿಲ್ಲೆಯಲ್ಲಿ ಬಡತನದಿಂದ ವಿದ್ಯಯನ್ನು ಕಲಿಯುವ ಮಕ್ಕಳು ತುಂಬಾ ವಿದ್ಯಾರ್ಥಿಗಳಿದ್ದಾರೆ ಅವರ ಅನುಕೂಲಕ್ಕೆ ರಾಜ್ಯ ಸರ್ಕಾರ ಇಂತಹ ಆಸ್ಟೆಲ್ ಗಳನ್ನು ತೆಗೆದಿದೆ ಅದನ್ನು ಅಚ್ಚುಕಟ್ಟಾಗಿ ಇಡುವುದರೊಂದಿಗೆ ಅಲ್ಲಿಗೆ ಬಂದು ವಿದ್ಯೆಯನ್ನು ಕಲಿಯುವರಿಗೆ ಒಳ್ಳೆಯ ಒಂದು ಸುಸಜ್ಜಿತ ವಾತಾವರಣವನ್ನು ಕಲ್ಪಿಸಿಕೊಡುವುದು ನಿಮ್ಮ ಜವಾಬ್ದಾರಿ ಎಂದು ಅಲ್ಲಿನ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿಗಳು ಕಿವಿ ಮಾತು ಹೇಳಿದರು…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend