ಶಾಸಕ ಡಾ”ಎನ್.ಟಿ.ಎಸ್ ಸಮ್ಮುಖದಲ್ಲಿ, ಮರಳಿ “ಕೈ” ಹಿಡಿದ ಎನ್.ದುರುಗೇಶ

ಶಾಸಕ ಡಾ”ಎನ್.ಟಿ.ಎಸ್ ಸಮ್ಮುಖದಲ್ಲಿ, ಮರಳಿ “ಕೈ” ಹಿಡಿದ ಎನ್.ದುರುಗೇಶ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರ ಸಮ್ಮುಖದಲ್ಲಿ, ಆ30ರಂದು ಪಟ್ಟಣದ ನಲ್ಲಮತ್ತಿ ದುರುಗೇಶರವರು. ಬಿಜೆಪಿ ಪಕ್ಷವನ್ನು ತೊರೆದು, ಮರಳಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕರು ಪಟ್ಟಣದ ಯುವ ಮುಖಂಡ, ಎನ್. ದುರುಗೇರವರಿಗೆ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು. ಪಕ್ಷದ ಹಿರಿಯ ಮುಖಂಡರಾದ ಗುರು ಸಿದ್ದನಗೌಡರು, ಕಾವಲಿ ಶಿವಪ್ಪ ನಾಯಕ, ಡಾಣಿ ರಾಘವೇಂದ್ರ, ಗುಪ್ಪಾಲ್ ಬಸವರಾಜ, ಲೀಲಾವತಿ ಪ್ರಭಾಕರ, ಮ್ಯಾಕಲ್ ಚಂದ್ರಪ್ಪ, ರವಿ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಪಟ್ಟಣದ ಪಕ್ಷದ ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ, ನಲಮುತ್ತಿ ದುರುಗೇಶ್ ನಾಯಕ ಬಿಜೆಪಿ ತೊರೆದು ಅಧೀಕೃತವಾಗಿ ಮರಳಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ದುರುಗೇಶ ಮೂಲತಃ ಕಾಂಗ್ರೇಸ್ ಪಕ್ಷದ ಅಭಿಮಾನಿ, ಹಾಗೂ ಕಾಂಗ್ರೇಸ್ ಪಕ್ಷದ ಕಟ್ಟಾಳಾಗಿದ್ದವರು. ಕೆಲ ಅನಿವಾರ್ಯ ಕಾರಣಗಳಿಂದಾಗಿ, ಹಾಗೂ ಪಟ್ಟಣದ ಸ್ಥಳೀಯ ರಾಜಕೀಯದಲ್ಲಾದ. ಅನಿರೀಕ್ಷಿತ ಬೆಳವಣಿಗೆಗಳ ಕಾರಣದಿಂದಾಗಿ ಬಿಜೆಪಿ ಸೇರಿದ್ದರು. ಅವರು ಹಲವಾರು ವರ್ಷಗಳ ಮುಂಚೆ, ಕಾಂಗ್ರೇಸ್ ಪಕ್ಷದ ಅಸಂಘಟಿತ ಕಾರ್ಮಿಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾರಣಾಂತರಗಳಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು, ನಂತರದ ದಿನಗಳಲ್ಲಿ ಇತ್ತೀಚೆಗೆ. ಕ್ಷೇತ್ರದ ಶಾಸಕರ ಜನಪ್ರಿಯ ಕೆಲ ಕಾರ್ಯಗಳಿಂದಾಗಿ, ಮನ ಪರಿವರ್ತನೆಯಾಗಿ ಮಾತೃ ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಮರು ಸೇರ್ಪಡೆಯಾದರು. ಇದಕ್ಕಾಗಿ ಕಾಂಗ್ರೇಸ್ ಮುಖಂಡರು, ಹಾಗೂ ಸಮಸ್ತ ಕಾಂಗ್ರೇಸ್ ಪದಾಧಿಕಾರಿಗಳು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು, ದುರುಗೇಶರವರನ್ನು ಈ ಮೂಲಕ ಅಭಿನಂದಿಸಿ ಸ್ವಾಗತಿಸಿಕೊಂಡಿದ್ದಾರೆ…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend