ಹೈ ಮಾಸ್ಕ್ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಕೊಳ್ಳೆ ಹೊಡೆದ ಪಿಡಿಒ ಸದಾಶಿವ ಜೆ ಕರಿಗಾರ ಹಾಗೂ ಆಗಿನ ಅಧ್ಯಕ್ಷ ಭಗವಂತ ಶಿಂದೆ…!!!

ಹೈ ಮಾಸ್ಕ್ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಕೊಳ್ಳೆ ಹೊಡೆದ ಪಿಡಿಒ ಸದಾಶಿವ ಜೆ ಕರಿಗಾರ ಹಾಗೂ ಆಗಿನ ಅಧ್ಯಕ್ಷ ಭಗವಂತ ಶಿಂದೆ

ಹೌದು, ವೀಕ್ಷಕರೇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯಿತಿನಲ್ಲಿ ಹೈ ಮಾಸ್ಕ್ ಅಳವಡಿಸದೇ ನಾಗರಾಳ ಗ್ರಾಮದ ಅಮ್ಮ ನಗರ ದುರ್ಗಾ ದೇವಸ್ಥಾನ , ಗೊಂಡೆ ತೋಟದ ಯಲ್ಲಮ್ಮ ದೇವಸ್ಥಾನ, ನವಗ್ರಾಮದ ರೇಣುಕಾ ದೇವಸ್ಥಾನ ಹಾಗೂ ನಾಗರಾಳ ಗ್ರಾಮದ ಯಲ್ಲಮ್ಮ ದೇವಸ್ಥಾನದ ಹತ್ತಿರ ಹೈ ಮಾಸ್ಕ್ ಅಳವಡಿಸದೇ ಪ್ರತಿಯೊಂದಕ್ಕೆ 83,000 ದಂತೆ ನಾಲ್ಕು ಹೈ ಮಾಸ್ಕ್ ಹಣ ಒಟ್ಟು 3.32.000 ರೂಪಾಯಿ ನಕಲಿ ಬಿಲ್ಲು ಸೃಷ್ಟಿಸಿ ಅಳವಡಿಸದೇ , ಸ್ಥಳ ಪರಿಶೀಲನೆ ನಡೆಸದೆ ದಿನಾಂಕ 31.05.2023 ರಂದು ಬಿಲ್ಲು ಸಂದಾಯ ಮಾಡಿದ್ದಾರೆ, ಅಷ್ಟೇ ಅಲ್ಲದೇ ಸುಮಾರು 3 ವರುಷಗಳಿಂದ ತಕರಾರು ಅರ್ಜಿಗಳು ಮತ್ತು ದೂರುಗಳು ಬಾಕಿ ಇದ್ದರೂ ಸಹ ಭ್ರಷ್ಟ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ! ಮಾನ್ಯ ಬೆಳಗಾವಿ ಜಿಲ್ಲಾ ಪಂಚಾಯತ ಸಿಇಓ ಸಾಹೇಬ್ರಿಗೆ ಎಷ್ಟೇ ಬಾರಿ ಇದೆ ನಿಡಗುಂದಿ ಗ್ರಾಮ ಪಂಚಾಯಿತಿ ಹಗರಣಗಳ ಬಗ್ಗೆ ದೂರು ಕೊಟ್ಟರು ಸರಿಯಾದ ಕ್ರಮ ಹಾಗೂ ತನಿಖೆ ಮಾಡಿರುವುದಿಲ್ಲ ಏಕೆ?? ಇದರಲ್ಲಿ ಶಾಮೀಲಾಗಿರುವ ರಾಯಬಾಗ ತಾಲೂಕ ಪಂಚಾಯತ ಇಓ ವಿಠ್ಠಲ ಚಂದರಗಿ, ನಿಡಗುಂದಿ ಗ್ರಾಮ ಪಂಚಾಯಿತಿ ಪಿಡಿಒ ಸದಾಶಿವ ಜೆ ಕರಿಗಾರ, ಆಗಿನ ಅಧ್ಯಕ್ಷ ಭಗವಂತ ಶಿಂದೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರು ಅಮರ ಸನದಿ ಆಗ್ರಹಿಸಿದ್ದಾರೆ. ಒಂದು ವೇಳೆ ಅಗತ್ಯ ಕ್ರಮ ಕೈಗೊಳ್ಳದೇ ಇದ್ದರೆ ತಾಲೂಕ ಪಂಚಾಯತ ಕಚೇರಿಯಲ್ಲಿ ಉಘ್ರವಾದ ಹೋರಾಟ ಮಾಡಲಾಗುವುದು ಎಂದು ಇದೆ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ!..

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend