ವಿದ್ಯಾರ್ಥಿಗಳು ಆರೋಗ್ಯಕರ ಅಭ್ಯಾಸಗಳನ್ನು ರೂಡಿಸಿಕೊಳ್ಳಿ: ನ್ಯಾ ದೇವೇಂದ್ರ ಪಂಡಿತ…!!!

ವಿಶ್ವ ತಂಬಾಕು ರಹಿತ ದಿನಾಚರಣೆ
ವಿದ್ಯಾರ್ಥಿಗಳು ಆರೋಗ್ಯಕರ ಅಭ್ಯಾಸಗಳನ್ನು ರೂಡಿಸಿಕೊಳ್ಳಿ: ನ್ಯಾ ದೇವೇಂದ್ರ ಪಂಡಿತ
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಸರಕಾರಿ ಪಾಲಿಟೆಕ್ನಿಕಲ್ ಕಾಲೇಜ ದದೇಗಲ್-ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಮೇ 31ರಂದು “ವಿಶ್ವ ತಂಬಾಕು ರಹಿತ ದಿನಾಚರಣೆ” ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಗೌರವಾನ್ವಿತ ಹಿರಿಯ ಸಿವ್ಹಿಲ್ ನ್ಯಾಯದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ ಅವರು ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ, ಸಂವಿಧಾನ ಮತ್ತು ಭಗವದ್‌ಗೀತೆಯ ಕುರಿತು ವಿದ್ಯಾರ್ಥಿಗಳಿಗೆ ಅದರ ಮಾಹಿತಿ ನೀಡಿದರು. ಬಳಿಕ ಮಾತನಾಡಿ, ಇಂದಿನ ಯುವಕರು ನಾಳಿನ ಪ್ರಜೆಗಳಾಗಿದ್ದಾರೆ. ಇಂದಿನ ಯುವ ಜನತೆ ತಂಬಾಕು ಸೇವನೆಯಂತಹ ದುಷ್ಚಟಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಮತ್ತು ಸಮಾಜದ ಮೇಲೆ ಬಹಳಷ್ಟು ದುಷ್ಪರಿಣಾಮಗಳು ಬೀರುತ್ತವೆ. ತಂಬಾಕು ಸೇವನೆಯಿಂದ ಮನುಷ್ಯನ ದೇಹದ ಮೇಲೆ ಅಂಗಾಂಗ ವೈಕಲ್ಯ ಉಂಟಾಗುತ್ತದೆ ಮತ್ತು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿಯೂ ಸಹ ಕುಂಠಿತಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಯುವ ಜನತೆಯ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಕೊಟ್ಪಾ-2003ರ ಕಾಯ್ದೆಯ ಪ್ರಕಾರ ದಂಡ ಮತ್ತು ಶಿಕ್ಷೆ ವಿಧಿಸಲಾಗುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒಳ್ಳೆಯ ಆರೋಗ್ಯಕರ ಅಭ್ಯಾಸಗಳನ್ನು ರೂಡಿಸಿ, ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡೋಣ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ನಂದಾಕುಮಾರ ಅವರು ಮಾತನಾಡಿ, ಪ್ರತೀ ವರ್ಷದಂತೆ ಈ ವರ್ಷವೂ ಮೇ 31 ರಂದು “ವಿಶ್ವ ತಂಬಾಕು ರಹಿತ ದಿನಾಚರಣೆ” ಕಾರ್ಯಕ್ರಮ ಆಚರಿಸಲಾಗುತ್ತದೆ. ಈ ವರ್ಷದ ಘೋಷವಾಕ್ಯವಾದ “ನಮಗೆ ಆಹಾರ ಬೇಕು ತಂಬಾಕು ಅಲ್ಲ” ಎಂಬ ವಾಕ್ಯದೊಂದಿಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ಉದ್ದೇಶ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. ರಾಜ್ಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು 1988 ಮೇ 31 ರಿಂದ ಆಚರಿಸಲಾಗತ್ತಿದೆ. ತಂಬಾಕು ಸೇವನೆ ತ್ಯಜಿಸುವುದರಿಂದ ಮನುಷ್ಯನ ದೇಹದಲ್ಲಿ ಸಾಕಷ್ಟು ಪ್ರಯೋಜನಗಳಾಗಲಿವೆ. ತಂಬಾಕಿನಲ್ಲಿ 7000 ವಿಷಾ ಅನಿಲಗಳು ಇರುತ್ತವೆ. ತಂಬಾಕು ತ್ಯಜಿಸಿದ 20 ನಿಮಿಷದಲ್ಲಿ ರಕ್ತದ ಒತ್ತಡ, ನಾಡಿ ಬಡಿತ ಮತ್ತು ದೇಹದ ಉಷ್ಣತೆ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಗಂಟೆಯ ನಂತರ ದೇಹದಲ್ಲಿನ ಆಮ್ಲಜನಕ ಸಮಸ್ಥಿತಿಗೆ ಬಂದು ಉಸಿರಾಟ ಪ್ರಕ್ರಿಯೆ ಸರಳವಾಗುತ್ತದೆ. 24 ಗಂಟೆಯ ನಂತರ ಹೃದಯಾಘಾತವಾಗುವ ಸಂಭವ ಕಡಿಮೆಯಾಗುತ್ತದೆ. 48 ಗಂಟೆಯ ನಂತರ ದೇಹದ ನರಮಂಡಲ ಸರಿಯಾಗಿ ಕೆಲಸಮಾಡಲು ಶುರುವಾಗುತ್ತದೆ. ಬಾಯಿರುಚಿ ಮತ್ತು ವಾಸನೆ ಗ್ರಹಿಕೆ ಸರಿಯಾಗುತ್ತದೆ. 2 ವಾರದಿಂದ 3 ತಿಂಗಳವರೆಗೆ ರಕ್ತ ಪರೀಚಲನೆ ಸರಿಯಾಗಿ ದೇಹದ ಸಾಮರ್ಥ್ಯ ಹೆಚ್ಚುತ್ತದೆ. ಪುಪ್ಪುಸ ಕಾರ್ಯ ಶೇ 30ರಷ್ಟು ಜಾಸ್ತಿಯಾಗುತ್ತದೆ. ಭಾರತ ದೇಶದಲ್ಲಿಯೇ ತ್ರಿಪುರಾ ರಾಜ್ಯ ಹೆಚ್ಚು ತಂಬಾಕು ತಿನ್ನುವ ರಾಜ್ಯವಾಗಿದೆ (65%).`ಗ್ಲೋಬಲ್ ಅಡಲ್ಟ್ ಟಬಾಕೋ ಸರ್ವೇ’ ಅನುಸಾರ ಕರ್ನಾಟಕ ರಾಜ್ಯದಲ್ಲಿ ಶೇ 28.2 ರಷ್ಟು ವಯಸ್ಕರು (15 ವರ್ಷ ಮತ್ತು ಮೇಲ್ಪಟ್ಟವರು) ತಂಬಾಕು ವ್ಯಸನಿಗಳಿದ್ದಾರೆ. ಅದರಲ್ಲಿ ಶೇ 12ರಷ್ಟು ಧೂಮಪಾನಿಗಳು ಮತ್ತು ಶೇ 19ರಷ್ಟು ಹೊಗೆರಹಿತ ತಂಬಾಕು ಬಳಸುತ್ತಾರೆ ಎಂದರು.
ತಂಬಾಕಿನ ಬಗೆಗಿನ ಸತ್ಯಾಂಶಗಳು ಮತ್ತು ವಿಶ್ವದಾದ್ಯಂತ ತಂಬಾಕು ಸೇವನೆಯಿಂದ ಹಾಗೂ ಧೂಮಪಾನದಿಂದ ಬರಬಹುದಾದಂತಹ ಖಾಯಿಲೆಗಳಾದ ಬಾಯಿ ಕ್ಯಾನ್ಸರ್, ಹೃದಯ ಸಂಬಂಧಿತ ಕಾಯಿಲೆಗಳು, ಶ್ವಾಸಕೋಶದ ಕಾಯಿಲೆಗಳ ನಿಯಂತ್ರಣ ಮತ್ತು ತಡೆಗಟ್ಟುವ ಕ್ರಮಗಳ ಕುರಿತು ವಿವರವಾಗಿ ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ರವೀಂದ್ರನಾಥ ಎಂ.ಹೆಚ್ ಅವರು ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ದುಷ್ಚಟ್ಟಕ್ಕೆ ಒಳಗಾಗುತ್ತಿದ್ದು, ಅದಿಹರೆಯದವರ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರ ಕುರಿತು ತಿಳಿಸುತ್ತಾ, ತಂಬಾಕು ಸೇವನೆಯಿಂದ ದೂರವಿದ್ದು, ಯುವಕರು ಜಾಗೃತರಾಗಿ ತಮ್ಮ ವಿದ್ಯೆ ಮತ್ತು ಜೀವನದ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ತಿಳಿಸಿದರು.
ತಾಲೂಕ ಆರೋಗ್ಯಾಧಿಕಾರಿಗಳಾದ ಡಾ.ರಾಮಾಂಜನೇಯ ಅವರು ಮಾತನಾಡಿ, ತಂಬಾಕು ವ್ಯಸನ ಮುಕ್ತಕೇಂದ್ರ, ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಹಾಗೂ ಪೌಷ್ಠಿಕ ಆಹಾರ ಸೇವನೆ ಕುರಿತು ಮಾಹಿತಿ ನೀಡಿದರು ಮತ್ತು ವಿದ್ಯಾರ್ಥಿಗಳಿಗೆ ನಿಮ್ಮ ಸ್ನೇಹಿತರು ಅಥವಾ ನಿಮ್ಮ ಮನೆಯಲ್ಲಿ ತಂಬಾಕು ಸೇವನೆ ಮಾಡುವವರು ಇದ್ದಲ್ಲಿ ತಂಬಾಕು ವ್ಯಸನ ಮುಕ್ತಕೇಂದ್ರವನ್ನು ಸಂಪರ್ಕಿಸಲು ತಿಳಿಸಿದರು.
ಬಹುಮಾನ ವಿತರಣೆ: ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ “ನಮಗೆ ಆಹಾರ ಬೇಕು ತಂಬಾಕು ಅಲ್ಲ” ಕುರಿತು ಇತ್ತೀಚೆಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಅರ್ಪಿತ ಪ್ರಥಮ, ನಿವೇದಿತ ದ್ವಿತಿಯ, ಹಾಗೂ ಮಂಜುಳ ತೃತಿಯ ಸ್ಥಾನ ಪಡೆದಿದ್ದಕ್ಕಾಗಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಶಬೀನಾ ಮಗಜಿ ಅವರು ವಹಿಸಿದ್ದರು. ಸಹ ಉಪನ್ಯಾಸಕರಾದ ಅನುಪಮಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪ., ಪ್ರಭಾರಿ ಜಿಲ್ಲಾ ಸಲಹೆಗಾರ ಡಾ.ಗುರುಪ್ರಸಾದ ಪುರೋಹಿತ್, ಸೈಕಾಲಾಜಿಸ್ಟ್ ಶಾಂತಮ್ಮ ಕಟ್ಟಿಮನಿ, ಹಿ.ಆ.ನಿ.ಅ ಎಲ್.ವ್ಹಿ ಸಜ್ಜನರ್, ಎನ್.ಸಿ.ಡಿ ಕಾರ್ಯಕ್ರಮ ಡಾ.ಜಯಶ್ರೀ ಸೇರಿದಂತೆ ಕಾಲೇಜಿನ ಸಹ ಉಪನ್ಯಾಸಕರು, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಸರ್ವೇಕ್ಷಣಾ ಘಟಕದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಮತ್ತು ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು…

ವರದಿ. ಚನ್ನಬಸವರಾಜ್ ಕಳ್ಳಿಮರದ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend