ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್ ಐಡಿಎಲ್) ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಝಡ್.ಎಂ. ಚಿಂಚೋಳಿಕರ್ ಅವರ ಇಲ್ಲಿನ ಮನೆ ಹಾಗೂ ಕಚೇರಿ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಆದಾಯಕ್ಕಿಂತಲೂ ಹೆಚ್ಚು ಗಳಿಸಿದ ಆರೋಪ ಕೇಳಿ ಬಂದಿದ್ದರಿಂದ ರಾಯಚೂರು ಲೋಕಾಯುಕ್ತದ ಜಿಲ್ಲಾ ವರಿಷ್ಠಾಧಿಕಾರಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಚಿಂಚೋಳಿಕರ್ ಅವರಿಗೆ ಸಂಬಂಧಿಸಿದ ಕಲಬುರಗಿ ಹಾಗು ಬೀದರಿನ ಮನೆಗಳ ಮೇಲೆ ಎಕಕಾಲಕ್ಕೆ ದಾಳಿ ನಡೆಸಲಾಗಿದೆ ಮತ್ತು ರಾಜ್ಯದಲ್ಲಿ ಇನ್ನು ಸಣ್ಣ ಮಟ್ಟದಿಂದ ಇರುವ ಅಧಿಕಾರಿಗಳು ದೊಡ್ಡ ಮಟ್ಟದಲ್ಲಿ ತಮ್ಮ ಆದಾಯಕ್ಕಿಂತ ಜಾಸ್ತಿ ಆಸ್ತಿ ಹಾಗೂ ಹಂತಸ್ತನ್ನು ಡಬಲ್ ಮಾಡಿಕೊಂಡಿದ್ದಾರೆ ಬಡವರ ಹತ್ತಿರ ಲಂಚವನ್ನು ತೆಗೆದುಕೊಂಡಿರುವವರ ಎಲ್ಲಾ ಮಾಹಿತಿಯನ್ನು ಆದರಸಿ ಮತ್ತೆ ಇನ್ನು ಭ್ರಷ್ಟರ ಆಸ್ತಿಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ…

ವರದಿ. ಚನ್ನಬಸವರಾಜ್ ಕಳ್ಳಿಮರದ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
