ನನ್ನ ಒಂದು ದಿನ ಅಣಕನೂರು ಜೈಲಿಗೆ ಹಾಕಿದ್ದಕ್ಕೆ ನಾನು ಇಂದು ಎಂಎಲ್‌ಎ ಆಗಿದ್ದೇನೆ ಪ್ರದೀಪ್ ಈಶ್ವರ್…!!!

ನನ್ನ ಒಂದು ದಿನ ಅಣಕನೂರು ಜೈಲಿಗೆ (Jail) ಹಾಕಿದ್ದಕ್ಕೆ ನಾನು ಇಂದು ಎಂಎಲ್‌ಎ (MLA) ಆಗಿದ್ದೇನೆ. ಜೈಲಿಗೆ ಹಾಕಿಲ್ಲ ಎಂದಿದ್ದರೆ ನಾನು ಲೆಕ್ಚರರ್ ಆಗಿ ಇರುತ್ತಿದ್ದೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುಧಾಕರ್ (K Sudhakar) ವಿರುದ್ಧ ನೂತನ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾ ಪಂಚಾಯಿತಿಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಪ್ರದೀಪ್ ಈಶ್ವರ್,

ಜನ ಸಣ್ಣ ಪುಟ್ಟ ಕಾರಣಗಳಿಗೆ ಪೊಲೀಸ್ ಠಾಣೆಗೆ ಬರುತ್ತಾರೆ, ಹೀಗಾಗಿ ವಿನಾಕಾರಣ ಠಾಣೆಗೆ ಬಂದವರದ್ದೆಲ್ಲಾ ಎಫ್‌ಐಆರ್ ಮಾಡಬೇಡಿ. ಕೂತು ಮಾತನಾಡಿಸಿ ರಾಜೀ ಮಾಡಲು ಪ್ರಯತ್ನ ಮಾಡಿ. ಸಾಧ್ಯವಾಗದ ಪ್ರಕರಣಗಳಲ್ಲಿ ಎಫ್‌ಐಆರ್ ಮಾಡಿ. ಆದರೆ ವಿನಾಕಾರಣ ಯಾರದೋ ಕುಮ್ಮಕ್ಕಿನಿಂದ ಸುಳ್ಳು ದೂರು ದಾಖಲಿಸಬೇಡಿ ಎಂದು ಪೊಲೀಸರಿಗೆ ತಿಳಿಸಿದರು. ಯಾರ ಮಾತು ಕೇಳಬೇಡಿ, ನನ್ನ ಮಾತು ಕೇಳಬೇಡಿ, ಕಾನೂನು ರೀತಿಯ ಕೆಲಸ ಮಾಡಿ,

ನಾನು ನಿಮ್ಮ ಮೇಲೆ ಒತ್ತಡ ಹಾಕಲ್ಲ. ಹಿಂದಿನ ಶಾಸಕರ ಒತ್ತಡಕ್ಕೆ ಮಣಿದು ನೀವು ನನ್ನ ಮೇಲೆ ಎಫ್‌ಐಆರ್‌ಗಳನ್ನು ಹಾಕಿ ಒಂದು ದಿನ ಅಣಕನೂರು ಜೈಲಿಗೆ ಕಳುಹಿಸಿದ್ದೀರಿ. ನಾನು ಯಾರ ಪರವಾಗಿ ನಿಂತೆನೋ ಅವರು ಸುಧಾಕರ್ ಜೊತೆ ಸೇರಿಕೊಂಡರು. ನಾನು ಮಾಡಿದ ತಪ್ಪೇನು? ಸುಧಾಕರ್ ಬೆಂಬಲಿಗರಾದ್ರೂ ಅಷ್ಟೇ, ಬಚ್ಚೇಗೌಡರ ಬೆಂಬಲಿಗರಾದರೂ ಅಷ್ಟೇ, ನಮ್ಮ ಬೆಂಬಲಿಗರಾದರೂ ಅಷ್ಟೇ. ಕಾನೂನು ಪ್ರಕಾರ ಕ್ರಮ ವಹಿಸಿ. ಯಾರನ್ನೂ ಟಾರ್ಗೆಟ್ ಮಾಡಬೇಡಿ ಎಂದರು…

ವರದಿ, ಎಚ್ಚರಿಕೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend