;

ಕಾಂಗ್ರೆಸ್ ಜನರ ಮಕ್ಮೇಲೆ ಟೋಪಿ ಹಾಕಿದೆ,ಹೊಳಲ್ಕೆರೆ ಶಾಸಕ ಚಂದ್ರಪ್ಪ ಆರೋಪ…!!!

ಕಾಂಗ್ರೆಸ್ ಜನರ ಮಕ್ಮೇಲೆ ಟೋಪಿ ಹಾಕಿದೆ..

ಚುನಾವಣೆ ನಂತರ ಯಾವುದೇ ಷರತ್ತುಗಳಲ್ಲಿದೆ ಐದು ಗ್ಯಾರಂಟಿ ಯೋಜನೆಗಳನ್ನು ಕೊಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಜನರ ಮಕ್ಮೇಲೆ ಟೋಪಿ ಹಾಕಿದೆ ಎಂದು ಶಾಸಕ ಎಂ.ಚಂದ್ರಪ್ಪ ವಾಗ್ದಾಳಿ ನಡೆಸಿದರು.

ತಾಲೂಕಿನ ಕುಡಿನೀರುಕಟ್ಟೆ ಬಳಿ ಶುಕ್ರವಾರ ಯಾದವ ಸಮುದಾಯದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ನಾಯಕರು ಐದು ಗ್ಯಾರಂಟಿಗಳನ್ನು ಇವತ್ತೆ ಜಾರಿ ಮಾಡಬೇಕು ಎಂಬ ನಿಯಮವಿಲ್ಲ. ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಾದಿ ಬೀದಿಯಲ್ಲಿ ಹೋಗುವ ಜನರಿಗೆ ಕೊಡುವುದಕ್ಕಾಗಲ್ಲ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಹಾದಿ ಬೀದಿಯಲ್ಲಿ ಹೋಗುವ ಜನರೇ ಮತ ಹಾಕಿರುವುದು ಎಂಬ ಪರಿಜ್ಞಾನ ಅವರಿಗಿಲ್ಲ. ಈ ರೀತಿ ಸುಳ್ಳು ಆಶ್ವಾಸನೆಗಳನ್ನು ನೀಡಿ ಜನರಿಗೆ ಮಂಕು ಬೂದಿ ಎರಚಿದ್ದಾರೆ. ಇದು ಸರಿಯಲ್ಲ. ಕಾಂಗ್ರೆಸ್ ಪಕ್ಷ ಕೂಡಲೇ ಯಾವುದೇ ಷರತ್ತುಗಳಿಲ್ಲದೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಸರಕಾರ ತುಂಬಾ ದಿನ ಅಧಿಕಾರದಲ್ಲಿರುವುದಿಲ್ಲ. ಎತ್ತು ಏರಿಗೆ, ಕೋಣ ಕೆರೆಗೆ ಎಳೆಯುತ್ತಿದೆ. ಕಾಂಗ್ರೆಸ್ ನಾಯಕರಲ್ಲಿ ಹೊಂದಾಣಿಕೆ ಸಾಧ್ಯವಿಲ್ಲ. ಇದನ್ನೆಲ್ಲವನ್ನು ರಾಜ್ಯ ಹಾಗೂ ಕೇಂದ್ರ ನಾಯಕರು ಗಮನ ಹರಿಸುತ್ತಿದ್ದಾರೆ. ನಾನು ಕೂಡ ಸರಕಾರ ಇದ್ದಾಗ, ಇಲ್ಲದಿದ್ದಾಗಲೂ ಶಾಸಕನಾಗಿ ಕೆಲಸ ಮಾಡಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಭರಮಸಾಗರದಲ್ಲಿ ಅಭಿವೃದ್ಧಿ ಕೆಲಸ ಮಾಡಿ ರಸ್ತೆ ರಾಜ ಎಂದು ಬಿರುದು ಪಡೆದಿದ್ದೇನೆ. ಈಗಿನ ಸಿಎಂ ಸಿದ್ದರಾಮಯ್ಯನವರು ಉಪ ಮುಖ್ಯಮಂತ್ರಿಯಾಗಿದ್ದಾಗ ನಾನು ಕೂಡ ಅದೇ ಪಕ್ಷದಲ್ಲಿದ್ದೆ. ಹೀಗಾಗಿ ಜನರು ಆತಂಕ ಪಡುವುದು ಬೇಡ. ಜನರಿಗೆ ನೀಡಿದ ಭರವಸೆಗಳನ್ನು ಚಾಚುತಪ್ಪದೆ ಪಾಲಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಪಕ್ಷ ಸರಿಯಾಗಿ ಚರ್ಚಿಸದೆ ಒಳಮೀಸಲಾತಿ ಜಾರಿ ಮಾಡುವ ತಪ್ಪು ನಿರ್ಧಾರ ತೆಗೆದುಕೊಂಡಿತು. ಇದರಿಂದ ಬಿಜೆಪಿ ಪರವಾಗಿದ್ದ ಸಮುದಾಯಗಳು ಬಿಜೆಪಿ ವಿರುದ್ಧ ಮತ ಚಲಾಯಿಸಿದವು. ಮತ್ತೊಂದು ಕಡೆದ ಒಳಮೀಸಲಾತಿಯಿಂದ ಅನುಕೂಲ ಪಡೆಯುವ ಸಮುದಾಯದವರು ಕೂಡ ಬಿಜೆಪಿಗೆ ಮತ ಹಾಕಲಿಲ್ಲ. ಇದರ ಪರಿಣಾಮವಾಗಿ ಬಿಜೆಪಿ 50ರಿಂದ 60 ಸೀಟ್‌ಗಳನ್ನು ಕಳೆದುಕೊಳ್ಳಬೇಕಾಯಿತು. ಆದರು ಕೂಡ ಹೊಳಲ್ಕೆರೆ ಕ್ಷೇತ್ರದ ಜನ ನನ್ನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತ್ತೊಮ್ಮೆ ನನ್ನನ್ನು ಗೆಲ್ಲಿಸಿದ್ದೀರಿ. ಮುಂದಿನ ದಿನಗಳಲ್ಲಿ ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸಲು ವಿಧಾನಸಭೆಯಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಭರವಸೆ ನೀಡಿದರು..

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಸುಧಾ ಬಸವರಾಜ್, ವೈದ್ಯರಾದ ಡಾ.ಉಮಾಪತಿ, ಧನಂಜಯ್, ಶಿವಮೂರ್ತಿ, ಪುರಸಭೆ ಅಧ್ಯಕ್ಷ ಆರ್.ಎ.ಅಶೋಕ್, ಸದಸ್ಯರಾದ ಮುರುಗೇಶ್, ಮಲ್ಲಿಕಾರ್ಜುನ್, ಕುಮಾರ್, ಬಂಗಾರಪ್ಪ, ರಾಮು, ಇತರರು ಇದ್ದರು

ಳಲ್ಕೆರೆ ಪಟ್ಟಣದ ಹೊರ ವಲಯದ ಕುಡಿನೀರುಕಟ್ಟೆ ಬಳಿ ಶುಕ್ರವಾರ ಯಾದವ ಸಮುದಾಯದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸತತ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ ಎಂ.ಚAದ್ರಪ್ಪನವರನ್ನು ಅಭಿನಂದಿಸಲಾಯಿತು. ಇದೆಲ್ಲವನ್ನು ಗಮನಿಸುತ್ತಿದ್ದಾರೆ…

ವರದಿ. ಸುರೇಶ್, ಹೊಳಲ್ಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;