ಸದಾಶಿವ ಆಯೋಗ ವರದಿ ತಿರಸ್ಕಾರಕ್ಕೆ ಬಂಜಾರ ಸಮುದಾಯದಿಂದ ಆಗ್ರಹ,,,!!!

ಸದಾಶಿವ ಆಯೋಗ ವರದಿ ತಿರಸ್ಕಾರಕ್ಕೆ ಬಂಜಾರ ಸಮುದಾಯದಿಂದ ಆಗ್ರಹ,,,,,,, ಕೂಡ್ಲಿಗಿ, ದಿ.21.12.22 ಬುಧವಾರ ನಡೆದ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ ಬಂಜಾರ್ ಅಭಿವೃದ್ಧಿ ಶಿಕ್ಷಣ ಸಂಸ್ಥೆ ತಾಲೂಕು ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಶಾಮ್ ನಾಯ್ಕ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕೆಲವು ರಾಜಕೀಯ ಪಕ್ಷಗಳು ಚುನಾವಣಾ ದೃಷ್ಟಿಯಿಂದ ಸದಾಶಿವ ಆಯೋಗ ವರದಿ ಜಾರಿಯಾಗಬೇಕೆಂದು ಹೇಳಿಕೆ ನೀಡುತ್ತಿದ್ದಾರೆ. ಪರಿಶಿಷ್ಟ ಜಾತಿಗಳನ್ನು ಒಡೆಯಲು ನಡೆಸಲಾಗುತ್ತಿರುವ ಅತಿ ದೊಡ್ಡ ಷಡ್ಯಂತ್ರ ಇದಾಗಿದೆ ಸದಾಶಿವ ಆಯೋಗ ವರದಿ ಅವೈಜ್ಞಾನಿಕ ಹಾಗೂ ಸಂವಿಧಾನ ವಿರೋಧಿಯಾಗಿದೆ. ಒಳ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ವಿವಿಧ ನ್ಯಾಯಾಲಯಗಳು ಸ್ಪಷ್ಟಪಡಿಸಿವೆ. ಹಾಗಾಗಿ ರಾಜ್ಯ ಸರ್ಕಾರ ಈ ಆಯೋಗ ವರದಿಯನ್ನು ತಿರಸ್ಕರಿಸಬೇಕು ಎಂದು ಬಂಜಾರ ಸಮುದಾಯದವರು ಅಗ್ರಹಿಸಿದರು, ಇದೇ ವೇಳೆ ಬಂಜಾರ ಸಮುದಾಯದ ತಾಲೂಕು ಉಪಾಧ್ಯಕ್ಷ ರನ್ನನಾಯ್ಕ ಮಾತನಾಡಿ ಸದಾಶಿವ ಆಯೋಗ ವರದಿ ಜಾರಿಯಾಗುವುದೆಂದು ರಾಜ್ಯದಲ್ಲಿರುವ ಬಂಜಾರ ಭೋವಿ ಇನ್ನಿತರೆ ಪರಿಶಿಷ್ಟ ಜಾತಿಯ ಸಮುದಾಯಗಳು ಆತಂಕದ ಸ್ಥಿತಿಯಲ್ಲಿವೆ ಬಡತನ ,ನಿರುದ್ಯೋಗ, ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಹೊಟ್ಟೆಪಾಡಿಗಾಗಿ ಕಬ್ಬು ಕಟಾವ್ ಮಾಡಲಿಕ್ಕೆ ನಮ್ಮ ಸಮಾಜದವರು ಗುಳೇ ಹೋಗುತ್ತಾರೆ. ಇದಕ್ಕೆ ರಾಜ್ಯದ ಸಮಸ್ತ ಬಂಜಾರ ಸಮುದಾಯದ ವಿರೋಧವಿದೆ. ಹಾಗೂ ಮುಂದಿನ ತಿಂಗಳು 10 ನೇ ತಾರೀಖಿನಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅತಿ ದೊಡ್ಡ ಹೋರಾಟ ನಡೆಸಲಾಗುವುದೆಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಸದಾನಂದ, ಪ್ರಕಾಶ್ ನಾಯಕ್, ಸೀ.ಜೇ ಹಳ್ಳಿ ತಾಂಡ ಕೃಷ್ಣ ನಾಯ್ಕ, ಕಾರ್ಯದರ್ಶಿ ವಿಜಯ್ ಕುಮಾರ್ ನಾಯ್ಕ, ಪ್ರಧಾನ ಕಾರ್ಯದರ್ಶಿ, ಟಿ ವೆಂಕಟೇಶ್ ನಾಯ್ಕ, ವೆಂಕಟೇಶ್ ನಾಯ್ಕ, ಕೆ .ಮುರಳಿ ರಾಜ್ ನಾಯ್ಕ, ಸೇರಿದಂತೆ ಸಂಘದ ಪದಾಧಿಕಾರಿಗಳು ಬಂಜಾರ ಸಮುದಾಯದ ಮುಖಂಡರುಗಳು ಯುವಕರು ಉಪಸ್ಥಿತರಿದ್ದರು…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend