ಕುರುಡ ದಲಿತ ರೈತನ ಹೊಲದಲ್ಲಿ ಗಂಗಾ ಕಲ್ಯಾಣ ಟಿ.ಸಿ ಸಂಪರ್ಕವನ್ನು ಕಡಿತಗೊಳಿಸಿದ ಕಂಪ್ಲಿ ಜೆಸ್ಕಾಂ ನಾಲ್ಕು ಅಧಿಕಾರಿಗಳು,
ಕಂಪ್ಲಿ: ಕಂಪ್ಲಿ ಪಟ್ಟಣದ ಬೆಳಗೊಡು ಹಾಳ್ ಗ್ರಾಮದ ಹರಿಜನ ದಲಿತ ಕುರುಡ ಪರಶುರಾಮಪ್ಪ ರೈತರ ಅವರಿಗೆ
ಸರ್ಕಾರದಿಂದ ಮಂಜೂರಾದ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 63 ಕೆವಿ ಟಿ.ಸಿ ಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಕಂಪ್ಲಿ ಜೆಸ್ಕಾಂ ನಾಲ್ಕು ಅಧಿಕಾರಿಗಳು ಹೊಸಪೇಟೆ ಎಇಇ ಅಧಿಕಾರಿಗಳಾದ ಉಮೇಶ್ ಕುಮಾರ್, ಮತ್ತು ಕಂಪ್ಲಿ ಎಇ ಅಧಿಕಾರಿಗಳಾದ ಭೀಮೇಶ್, ಹಾಗೂ ಸಿಬ್ಬಂದಿಗಳಾದ ವೆಂಕಟೇಶ್ ಲೈನ್ ಮ್ಯಾನ್ ಹರಿಪ್ರಸಾದ್, ಇವರುಗಳು ಕುರುಡ ರೈತರ ಹೊಲದಲ್ಲಿ ಹೋಗಿ ಟೀಸಿಯ ವಿದ್ಯುತ್ ಕಂಬವನ್ನು ಏರಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಭೂಮಿ ಬೆಳೆ ನಾಟಿ ಮಾಡದಂತೆ ಬೀಳು ಕೆಡುವಿದ್ದಾರೆ ಮತ್ತು ಕುಟುಂಬದ 12 ಎಕರೆ ಭೂಮಿಯಗೆ ಸಂಬಂಧ ಪಟ್ಟ ಟಿಸಿ ಇರುತ್ತದೆ ಆದ ಕಾರಣ ಈ ಅಧಿಕಾರಿಗಳು ಎಲ್ಲರೂ ಸೇರಿ ಅಕ್ಕಪಕ್ಕದ ರೈತರ ಮಾತು ಕೇಳಿ ಮತ್ತು ರೈತರೊಂದಿಗೆ ಕೈಜೋಡಿಸಿ ಕುರುಡ ರೈತರ ದಲಿತ ಪರಶುರಾಮಪ್ಪನ ಹೊಲದಲ್ಲಿ ದೌರ್ಜನ್ಯವಾಗಿ ಮತ್ತು ಹೊಲದಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಕುರುಡ ರೈತರ ಹೊಲಕ್ಕೆ ಹೋಗುವ ದಾರಿ ಗೇಟ್ ಹಾಕಿದ್ದರಿಂದ ಮತ್ತು ನ್ಯಾಯಾಲಯ ಇಂಜೆಕ್ಷನ್ ಆರ್ಡರ್ ಇದ್ದರೂ ಕೂಡ ಅಧಿಕಾರಿಗಳು ಹೊಲದಲ್ಲಿ ನುಗ್ಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ ಆದ ಕಾರಣ ಕುರುಡ ರೈತರ ಕಣ್ಣು ಕಾಣದೆ ಅಳಲು ತೋಡಿಕೊಂಡಿದ್ದಾರೆ ಆದ ಕಾರಣ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಾರೋ ಇಲ್ಲವೋ ಕಾದು ನೋಡಬೇಕಿದೆ…

ವರದಿ. ಬಸವರಾಜ್. ಕಂಪ್ಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
