ಗ್ರಾಮ ಪಂಚಾಯಿತಿ ಗೆ ಬೀಗ ಹಾಕಿ ಬಾಡಿಗೆ ಮನೆಯನ್ನೇ ಆಫೀಸ್ ಮಾಡಿರೋ ಪಿಡಿಓ…!!!

ಸುರಪುರದಲ್ಲಿ ಬಾಡಿಗೆ ಮನೆ ಮಾಡಿ ಗ್ರಾಮ ಪಂಚಾಯಿತಿ ಗೆ ಬೀಗ ಹಾಕಿ ಬಾಡಿಗೆ ಮನೆಯನ್ನೇ ಆಫೀಸ್ ಮಾಡಿರೋ ಪಿಡಿಓ

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಸುಗುರು ಗ್ರಾಮ ಪಂಚಾಯಿತಿ ಗೆ ಬೀಗ ಹಾಕಿ ಸುರಪುರ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವ ಡಾಟಾ ಎಂಟ್ರಿ ಆಪರೇಟರ್ ಮತ್ತೂ ಪಿಡಿಒ ಹದಗೆಟ್ಟು ಹಾಳಾದ ಸೂಗುರು ಗ್ರಾಮದ ರಸ್ತೆಗಳು ನೀರಿನ ಪೈಪ್ ಒಡೆದು ರಸ್ತೆ ತುಂಬಾ ನೀರೂ ಪಿಡಿಓ ಮೊಬೈಲ್ ಸ್ವಿಚ್ ಆಫ್ ಆನ್ ಇದ್ದಾಗ ಕಾಲ್ ಮಾಡಿದರೆ ಉಡಾಫೆ ಉತ್ತರ ಏನ್ ಸಮಸ್ಯೆ ಇದ್ದರೂ ಬಸ್ ಚಾರ್ಜ್ ಕೊಟ್ಟು ಕೆಲಸ ಬಿಟ್ಟು ಇವರು ಬಾಡಿಗೆ ಆಫೀಸ್ ಗೆ ಅಲೇದಾಡ್ತ ಇರುವ ಗ್ರಾಮಸ್ಥರು ತಕ್ಷಣ ಸ್ಪಂದಿಸಿ ಹಾಗೂ ಇವರು ಮೊಬೈಲ್  ಸ್ವಿಚ್ ಆನ್ ಆದಾಗ ಸಾರ್ವಜನಿಕರು ಕರೆ ಮಾಡಿ ಇವರಿಗೆ ತಮ್ಮ ಕಷ್ಟವನ್ನು ಹೇಳಿಕೊಂಡರೆ ಕೊಡುವುದೆಲ್ಲ ಬರೀ, ಡೋಂಗಿ ಉಡಾಪೆ ಉತ್ತರ ಏನೂ, ಸಾರ್ವಜನಿಕರು ಯಾರಪ್ಪನ ಆಸ್ತಿ ಕೆಳಲು ಕರೆ ಮಾಡಿರಬಹುದಾ??? ಅನ್ನುವ ರೀತಿಯಲ್ಲಿ ಉತ್ತರ ಏನಿದು ಗ್ರಾಮಪಂಚಾಯಿತಿಗಳು ಹಳ್ಳಿಗಳ ಅಭಿವೃದ್ಧಿಗೆ ಬುನಾದಿ ಇದ್ದಂತೆ ಈ ಬುನಾದಿಯೇ ಬಿರುಕು ಬಿಟ್ಟರೆ ಮನೆಯನ್ನು ಕಟ್ಟಲು ಹೇಗೆ ಸಾಧ್ಯ!!! ಈ ಒಂದು ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಸಾರ್ವಜನಿಕರ ಕೊರಗು ಒಂದು ನಮ್ಮ ಇಂತಹ ಭ್ರಷ್ಟ ಅಧಿಕಾರಿಗಳಿಂದ ಮುಕ್ತಿ ಯಾವಾಗ ಎನ್ನುವ ಪ್ರಶ್ನೆ!!!ಇದಕ್ಕೆಲ್ಲ ಸಂಬಂಧ ಪಟ್ಟ ಅಧಿಕಾರಿಗಳೆ ಕೊಡಬೇಕು ಅಲ್ವಾ ಮನೆ ಯಜಮಾನ ಸರಿಯಿದ್ದರೆ ಮನೆಯವರೆಲ್ಲ ಸರಿಯಾಗಿರುತ್ತಾರೆ ಎನ್ನುವ ಒಂದು ಆಡು ಭಾಷೆಯಂತೆ ನಾವು ಕೂಡ ಕಾಯ್ದು ನೋಡೋಣ,ಹಾಗೂ ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸುವ ಸಾಹಸ ಮಾಡುತ್ತಾರ ಹಾಗೂ ಇನ್ನು ಹಲವಾರು ರೀತಿಯಲ್ಲಿ ಹಗರಣಗಳು ನಡೆದಿವೆ ಎನ್ನುವ ಸುದ್ದಿ ಕೇಳಿಬರುತ್ತಿದೆ ಸೂಕ್ತ ದಾಖಲೆಗಳನ್ನು ಕಲೆ ಹಾಕಿ ಮತ್ತೆ ಸುದ್ದಿ ಕೊಡುತ್ತೇವೆ ಎಚ್ಚರಿಕೆ…

ವರದಿ. ಮುಕ್ಕಣ್ಣ ಹುಲಿಗುಡ್ಡ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend