ಜುಮ್ಮೊಬನಹಳ್ಳಿ ಗ್ರಾಮದಲ್ಲಿ ಬಸ್ಸಿನ ಕೊರತೆ: ವಿದ್ಯಾರ್ಥಿಗಳಿಗೆ ಪರದಾಟ
ಕೂಡ್ಲಿಗಿ: ಸಮರ್ಪಕವಾಗಿ ಬಸ್ಸುಗಳ ಸೌಲಭ್ಯ ಇಲ್ಲದಿರುವುದರಿಂದಾಗಿ ತಾಲೂಕಿನ ಜುಮ್ಮೊಬನಹಳ್ಳಿ ಹಾಗೂ ಜಿ ಮ್ಯಾಸರಟ್ಟಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಗ್ರಾಮದಿಂದ ಕಾನಹೊಸಹಳ್ಳಿ ಹಾಗೂ ಕೂಡ್ಲಿಗಿಗೆ ನಿತ್ಯ ಸಾಕಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗುತ್ತಾರೆ.

ಆದರೆ, ಬೆಳಗಿನ ಸಮಯಕ್ಕೆ ಸರಿಯಾದ ಸಾರಿಗೆ ಬಸ್ ಬರುತ್ತಿಲ್ಲ ಮತ್ತು ಒಂದೇ ಖಾಸಗಿ ಬಸ್ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಅದರಲ್ಲಿಯೇ ಹೋಗುವಂತಾಗಿದೆ. ಈ ಎರಡು ಗ್ರಾಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೇ ಖಾಸಗಿ ಬಸ್ಸು ಅಥವಾ ಆಟೋಗಳಿಗೆ ಹೋಗುತ್ತಾರೆ. ಇಲ್ಲಿ ಒಂದನೇ ತರಗತಿಯಿಂದ 8ನೇ ತರಗತಿ ಮಾತ್ರ ಇರುತ್ತದೆ, ಎಸೆಸೆಲ್ಸಿ ಇರುವುದಿಲ್ಲ ಹಾಗಾಗಿ ಶಾಲಾ ಕಾಲೇಜಿಗೆ ಹೋಗಲು ಬಸ್ಸಿನ ಸಮಸ್ಯೆ ಬಗೆಹರಿಸಬೇಕಿದೆ. ಹೀಗಾಗಿ ಬಸ್ಸಿನೊಳಗೆ ಕುಳಿತುಕೊಳ್ಳಲು ಸಹ ಜಾಗವಿರುವುದಿಲ್ಲ ಈ ಭಾಗದಲ್ಲಿ ಬಸ್ಗಳ ಸಂಖ್ಯೆ ಕಡಿಮೆ ಇದ್ದು, ಕಾಲಿಡಲು ಜಾಗವಿಲ್ಲದಂತಹ ಪರಿಸ್ಥಿತಿಯಲ್ಲೂ ವಿದ್ಯಾರ್ಥಿಗಳು ಪ್ರಯಾಣಿಸಬೇಕಾದ ಸ್ಥಿತಿ ಬಂದೊದಗಿದೆ. ಬಾಗಿಲಲ್ಲಿ ನಿಂತು ಪ್ರಯಾಣಿಸುವುದು ಸಾಮಾನ್ಯವಾಗಿದೆ. ಗ್ರಾಮಸ್ಥರು ಸಾಕಷ್ಟು ಸಲ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ,ಇಲ್ಲಿಯವರೆಗೂ ಕೂಡ ಸಮಸ್ಯೆಗೆ ಸ್ಪಂದಿಸಲು ಮುಂದಾಗಿಲ್ಲ ಎಂಬುದು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಗಂಭೀರವಾದ ಆರೋಪ ಕೇಳಿ ಬಂದಿದೆ.

ವರದಿಗಾರರು : ಸಿ ಅರುಣ್ ಕುಮಾರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
