ಸಡಗರದಿಂದ ಜರುಗಿದ ಟಿ, ಕಲ್ಲಹಳ್ಳಿ ಬಸವೇಶ್ವರ ರಥೋತ್ಸವ…!!!

ಸಡಗರದಿಂದ ಟಿ ಕಲ್ಲಹಳ್ಳಿ ಬಸವೇಶ್ವರ ರಥೋತ್ಸವ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಟೀ ಕಲಹಳ್ಳಿ ಗ್ರಾಮ ಶ್ರೀ ಬಸವೇಶ್ವರ ರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಶ್ರೀ ಬಸವೇಶ್ವರ ಸ್ವಾಮಿಯ ಉತ್ಸವಮೂರ್ತಿಯನ್ನು ದೇವಸ್ಥಾನದಿಂದ ಸಕಲ ವಾದ್ಯಗಳೊಂದಿಗೆ ರಥದ ಬಳಿ ತಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸ್ವಾಮಿಯ ರಥ ಮುಂದೆ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಜಯಘೋಷ ಹಾಕಿ. ಬಾಳೆಹಣ್ಣು. ಉತ್ತುತ್ತಿ .ಮಂಡಕ್ಕಿ. ಎಸೆದು ಭಕ್ತಿ ಸಮರ್ಪಿಸಿದರು.


ರಥಕ್ಕೆ ಪೂಜೆ ಸಲ್ಲಿಸಿದರು.ಶ್ರೀ ಸ್ವಾಮಿಯ ಪಟ್ಟವನ್ನು ಮಾರುತಿ ಇವರು ರೂ 21,000 ಕ್ಕೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಟಿ ಕಲ್ಲಹಳ್ಳಿ ಗ್ರಾಮದ ದೈವಸ್ಥರು. ಭಕ್ತರು ಸೇರಿದಂತೆ ಸುತ್ತಮುತ್ತಲ ಗ್ರಾಮದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend