ಬೀದರ ಇತಿಹಾಸ ನಮ್ಮ ಯುವ ಪೀಳಿಗೆಗೆ ತಿಳಿಯುವಂತಾಗಬೇಕು -ಕೇಂದ್ರ ಸಚಿವ ಭಗವಂತ ಖೂಬಾ…!!!

ಬೀದರ ಇತಿಹಾಸ ನಮ್ಮ ಯುವ ಪೀಳಿಗೆಗೆ ತಿಳಿಯುವಂತಾಗಬೇಕು
-ಕೇಂದ್ರ ಸಚಿವ ಭಗವಂತ ಖೂಬಾ

ಬೀದರ  ಉತ್ಸವದಿಂದ ನಮ್ಮ ಜಿಲ್ಲೆಯ ಇತಿಹಾಸ ಮತ್ತು ಪರಂಪರೆ ಯುವ ಪೀಳಿಗೆಗೆ ತಿಳಿಯುವಂತಾಗಬೇಕೆಂದು ಕೇಂದ್ರ ನೂತನ, ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹ ಸಚಿವರಾದ ಭಗವಂತ ಖೂಬಾ ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೀದರ ಉತ್ಸವದ ಪ್ಲಾಟಿನಂ, ಡೈಮಂಡ್, ಗೋಲ್ಡ್ ಕಾರ್ಡ ಮತ್ತು ಉತ್ಸವದ ಸಿಟಿಂಗ್ ಲೇಔಟ್‍ನ ನಕ್ಷೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಬೀದರ ಉತ್ಸವಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಬೇಕು ಮತ್ತು ನಗರದಲ್ಲಿರುವ ರಸ್ತೆಗಳು, ನೀರಿನ ವ್ಯವಸ್ಥೆ ಹಾಗೂ ಉತ್ಸವದ ದಿನಗಳಂದು ಪ್ರತಿಯೊಬ್ಬರೂ ತಮ್ಮ ಮನೆಗಳನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಿ ಬೀದರ ನಗರ ಕಂಗೊಳಿಸುತ್ತಿರಬೇಕು, ಲಕ್ಷಾಂತರ ಜನರು ಈ ಉತ್ಸವಕ್ಕೆ ಬರುವುದರಿಂದ ಇದು ಮಾದರಿ ಉತ್ಸವಾಗಬೇಕೆಂದರು.
ಈ ಉತ್ಸವ ಜನರಿಂದ ಜನರಿಗೊಸ್ಕರ ಜಿಲ್ಲಾಡಳಿತ ಮುತುವರ್ಜಿವಹಿಸಿ ಜನರ ಸಹಭಾಗಿತ್ವದಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡುತ್ತಿದೆ ಇದಕ್ಕಾಗಿ ಜಿಲ್ಲೆಯ ಜನತೆ ತಮ್ಮ ತನು, ಮನ, ಧನದಿಂದ ಎಲ್ಲರೂ ಸಹಕಾರ ನೀಡಬೇಕು. ಬೀದರ ಜಿಲ್ಲೆ ಮಾತ್ರವಲ್ಲದೇ ಅಕ್ಕ ಪಕ್ಕದ ಇತರೆ ಜಿಲ್ಲೆಗಳಿಂದ ಬರುವವರಿಗೂ ಜಿಲ್ಲಾಡಳಿತ ಮುಕ್ತ ಅವಕಾಶ ನೀಡಿದೆ, ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಬೀದರ ದಕ್ಷಿಣ ಕ್ಷೇತ್ರದ ಶಾಸಕರಾದ ಬಂಡೆಪ್ಪ ಖಾಶೆಂಪೂರ ಅವರು ಮಾತನಾಡಿ 2006 ರಲ್ಲಿ ಬೀದರ ಉತ್ಸವ ಆರಂಭಿಸಲಾಯಿತು ಕಳೆದ ಐದು ವರ್ಷಗಳಿಂದ ಈ ಉತ್ಸವ ಆಗಿರಲಿಲ್ಲ, ಅಂದು ಬೀದರ ಉತ್ಸವವಾದ ಮೇಲೆ ಬಹಳಷ್ಟು ಪ್ರವಾಸಿಗರು ನಮ್ಮ ಜಿಲ್ಲೆಗೆ ಬರತೊಡಗಿದರು ಮತ್ತು ಹಲವಾರ ಚಿತ್ರಗಳ ಶುಟಿಂಗ್ ನಮ್ಮ ಜಿಲ್ಲೆಯಲ್ಲಿ ನಡೆದವು ಇದರಲ್ಲಿ ಪತ್ರಕರ್ತರ ಪಾತ್ರವು ಬಹಳ ಮುಖ್ಯವಾಗಿದ್ದು ಬೀದರ ಉತ್ಸವದ ಕುರಿತು ಹೆಚ್ಚಿನ ಪ್ರಚಾರ ನೀಡಬೇಕೆಂದು ಹೇಳಿದರು.


ಬೀದರ ಶಾಸಕರಾದ ರಹೀಮ್ ಖಾನ್ ಅವರು ಮಾತನಾಡಿ ಕೋವಿಡ್ ಕಾರಣದಿಂದಾಗಿ ಬೀದರ ಉತ್ಸವ ಆಗಿರಲಿಲ್ಲ ಈ ಹಿಂದೆ ಹರ್ಷ ಗುಪ್ತಾ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಬೀದರ ಉತ್ಸವವನ್ನು ಒಳ್ಳೆಯ ರೀತಿಯಿಂದ ಮಾಡಿದ್ದರು. ಈಗಿನ ಜಿಲ್ಲಾಧಿಕಾರಿಗಳು ಒಳ್ಳೆಯ ರೀತಿಯಿಂದ ಕಾಳಜಿ ವಹಿಸಿ ಈ ಉತ್ಸವವನ್ನು ಮಾಡುತ್ತಿರುವುದರಿಂದ ಅವರಿಗೆ ಎಲ್ಲರೂ ಸಹಕಾರ ನೀಡಬೇಕು ಮತ್ತು ಬೀದರನ ಎಲ್ಲಾ ಜನತೆ ತಮ್ಮ ಕುಟುಂಬ ಸಮೇತರಾಗಿ ಈ ಉತ್ಸವದಲ್ಲಿ ಭಾಗವಹಿಸಬೇಕು. 60 ಕೋಟಿ ರೂ. ವೆಚ್ಚದಲ್ಲಿ ಬರುವ ಒಂದು ತಿಂಗಳೊಳಗಾಗಿ ಬೀದರ ರಸ್ತೆಗಳ ಸುಧಾರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ಮಾತನಾಡಿ ಇಂದು ಪ್ಲಾಟಿನಂ, ಡೈಮಂಡ್ ಮತ್ತು ಗೋಲ್ಡ್ ಕಾರ್ಡಗಳನ್ನು ಬೀದರ ಉತ್ಸವದ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಪ್ಲಾಟಿನಂ ಕಾರ್ಡಗೆ 25 ಸಾವಿರ ರೂ., ಡೈಮಂಡ್ ಕಾರ್ಡಗೆ 15 ಸಾವಿರ ರೂ., ಗೋಲ್ಡ್ ಕಾರ್ಡಗೆ 10 ಸಾವಿರ ರೂ. ಇದ್ದು ಇದನ್ನು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿಯ ಪಿಡಿಡಿಯು ವಿಭಾಗದಲ್ಲಿ ನಾಳೆಯಿಂದಲೆ ಖರೀದಿಸಬಹುದಾಗಿದೆ, ಈ ಕಾರ್ಡುಗಳಿಗೆ ಕ್ಯೂ.ಆರ್.ಕೋರ್ಡ ನೀಡಲಾಗಿದ್ದು ಇದೇ ಕಾರ್ಡ ನಂಬರ ಅವರ ವಾಹನ ಪಾಸಿಗೂ ಇರುತ್ತದೆ ಇವು ಒಟ್ಟು 3 ಸಾವಿರ ಕಾರ್ಡುಗಳನ್ನು ಪ್ರೀಂಟ್ ಮಾಡಲಾಗಿದೆ, ಸಾರ್ವಜನಿಕರು ಇದನ್ನು ಖರೀದಿಸಬಹುದಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಡಗಳನ್ನು ಬಿಡುಗಡೆಗೊಳಿಸಿದ ಕೇಂದ್ರ ಸಚಿವರಾದ ಭಗವಂತ ಖೂಬಾ, ಶಾಸಕರಾದ ರಹೀಮ ಖಾನ್, ಬಂಡೆಪ್ಪ ಖಾಶೆಂಪೂರ, ಹಜ್ ಸಮಿತಿ ಅಧ್ಯಕ್ಷರಾದ ರವೂಫುದ್ಧಿನ್ ಕಚೇರಿವಾಲೆ, ಬುಡಾ ಅಧ್ಯಕ್ಷರಾದ ಬಾಬುವಾಲಿ ಅವರು 25 ಸಾವಿರ ರೂ.ಗಳನ್ನು ನೀಡಿ ಪ್ಲಾಟಿನಂ ಕಾರ್ಡುಗಳನ್ನು ಖರೀದಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷರಾದ ರವೂಫುದ್ಧಿನ್ ಕಚೇರಿವಾಲೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬುವಾಲಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಎಂ., ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸಿಬ್ಬಂದಿಯವರು ಉಪಸ್ಥಿತರಿದ್ದರು…

ವರದಿ. ಸುನಿಲ್ ಮೆಟ್ರಿ, ಬೀದರ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend